Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH : ಗೋವಾದಲ್ಲಿ ವೃದ್ಧ ತಂದೆಯ ಮೇಲೆ ಮಗ, ಸೊಸೆಯಿಂದ ಚಪ್ಪಲಿ ಏಟು, ಹಲ್ಲೆ: ಸಿಸಿಟಿವಿ ದೃಶ್ಯಾವಳಿ ವೈರಲ್

---Advertisement---

ಪಣಜಿ.ಜುಲೈ.13: ಮನೆಯೊಳಗೇ 83 ವರ್ಷದ ವೃದ್ಧ ತಂದೆಯ ಮೇಲೆ ಮಗ ಮತ್ತು ಸೊಸೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾದ ಗೋವಾ ಪೊಲೀಸರು ವೃದ್ಧನ ಮಗನನ್ನು ಬಂಧಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಲೋಯಾಲಾ ಸೋಜಾ ಎಂಬ 83 ವರ್ಷದ ಹಿರಿಯ ನಾಗರಿಕರ ಮೇಲೆ ಅವರದ್ದೇ ಮನೆಯಲ್ಲಿ ಮಗ ಮತ್ತು ಸೊಸೆ ಚಪ್ಪಲಿಯಿಂದ ಹೊಡೆದು, ಕೆನ್ನೆಗೆ ಬಡಿದು, ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳನ್ನು ನೋಡಿ ದಿಗ್ಭ್ರಮೆಗೊಂಡ ಕುಂಕೋಲಿಮ್ ನಿವಾಸಿ ಕ್ರಿಸೊಸ್ಟೊಮೊ ಮರಿಯಾನೊ ಸೋರೆಸ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರರ ಪ್ರಕಾರ, ಸೊಸೆ ಐರಿನ್ ಗೊನ್ಸಾಲ್ವಿಸ್ ಮೊದಲು ವೃದ್ಧ ಮಾವನಿಗೆ ಕೆನ್ನೆಗೆ ಬಡಿದು, ಬಳಿಕ ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ. ಇದಾದ ನಂತರ ಮಗ ಇಸಿಡೋರಿಯೊ ಸೋಜಾ ಕೂಡ ತಂದೆಯ ತಲೆ, ಮುಖ, ಕುತ್ತಿಗೆ ಹಾಗೂ ಕೈಗಳಿಗೆ ಕೈಯಿಂದ ಮತ್ತು ಮುಷ್ಟಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಇಬ್ಬರೂ ಸೇರಿ ವೃದ್ಧನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ವೃದ್ಧ ತಂದೆಯನ್ನು ಮನೆಯಿಂದ ಹೊರಗೆ ಹೋಗದಂತೆ ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಮುನ್ಸೂಚನೆಗಳು ವಿಡಿಯೋದಲ್ಲಿ ಕಂಡುಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಕೊಲ್ವಾ ಪೊಲೀಸರು, ಬೆಟಾಲ್ಬಾಟಿಮ್ ನಿವಾಸಿ ಇಸಿಡೋರಿಯೊ ಸೋಜಾನನ್ನು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join WhatsApp

Join Now

Join Telegram

Join Now