Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

15 ಅಡಿ ಜಾಗದಲ್ಲಿ ವಾಕ್ ಮಾಡಿಸ್ತಾರೆ.. ಬಿಸಿಲು ಬೀಳ್ತಿಲ್ಲ : ಜಡ್ಜ್ ಮುಂದೆ ದರ್ಶನ್ ಕಣ್ಣೀರು

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಇಂದು ಜಡ್ಜ್ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ. 57ನೇ ಸೆಷನ್ಸ್ ಕೋರ್ಟ್ ಜಡ್ಜ್ ಇಲ್ಲದ ಕಾರಣ ಇಂದು ಆರೋಪಿಗಳನ್ನು 64ನೇ ಸೆಷನ್ಸ್ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ನಟ ದರ್ಶನ್ ಪರ ವಕೀಲರು ಈ ಕೊಲೆ ಕೆಸಲ್ಲಿ ದರ್ಶನ್ ಅವರನ್ನು ಡಿಸ್ಚಾರ್ಜ್ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಜಡ್ಜ್ ಮುಂದೆ ದರ್ಶನ್ ಕಣ್ಣೀರು ಹಾಕಿದ್ದು, ಕೋರ್ಟ್ ಹೇಳಿದಂತೆ ನನಗೆ ಜೈಲಿನಲ್ಲಿ ಯಾವ ಸೌಲಭ್ಯವನ್ನು ಕಲ್ಪಿಸಿಲ್ಲ. ನೀವೂ ಹೇಳಿದಂತೆ ವಾಕಿಂಗ್ ಅವಕಾಶವನ್ನು ಕೊಟ್ಟಿಲ್ಲ. ಏನೂ ಸೌಲಭ್ಯ ಕೊಟ್ಟಿಲ್ಲ ಸರ್. ವಾಕ್ ಕೂಡ ನೀವೂ ಹೇಳಿದ್ರಿ ಅದು ಕೂಡ 15 ಅಡಿ ಇರುವ ಜಾಗದಲ್ಲಿ ವಾಕ್ ಮಾಡಿಸ್ತಾರೆ. ಅಲ್ಲಿ ಬಿಸಿಲು ಬರುವುದಿಲ್ಲ ಸರ್ ಅಂತ ಜಡ್ಜ್ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ.

 

ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿಕೆ ಮಾಡಿದೆ. ದರ್ಶನ್ ವಾದ ಪ್ರತಿವಾದದ ವೇಳೆ ಪರಪ್ಪನ ಅಗ್ರಹಾರದ ಪೊಲೀಸರ ಮೇಲೆ ಆರೋಪ ಮಾಡಿದ್ದು, ಬೇಸರವನ್ನು ಹೊರ ಹಾಕಿದ ಪ್ರಸಂಗ ನಡೆದಿದೆ. ಬೆನ್ನು ನೋವು ಮೊದಲಿನಿಂದಲು ಇದ್ದು, ಈಗ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾಗಲೂ ಬೆನ್ನು ನೋವು ಇರುವುದನ್ನ, ಆ ನೋವನ್ನ ಮುಖದಲ್ಲಿಯೇ ವ್ಯಕ್ತಪಡಿಸಿದ್ದರು. ಮುಂದಿನ ವಿಚಾರಣೆಯಷ್ಟರಲ್ಲಾದರೂ ದರ್ಶನ್ ಡಿಮ್ಯಾಂಡ್ ಫುಲ್ ಫಿಲ್ ಮಾಡ್ತಾರಾ ಪೊಲೀಸರು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now