ನವದೆಹಲಿ: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿಶೇಷ ಚೇತನರಿಗೆ ಮನೆಯಿಂದಾನೇ ಮತದಾನಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ಕರ್ನಾಟಕದಿಂದಾನೇ ಫಸ್ಟ್ ಪ್ರಾರಂಭವಾಗಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಕಳೆದ ಬಾರಿ ಶೇ.72ರಷ್ಟು ಮತದಾನವಾಗಿದ್ದು, ಅತಿ ಕಡಿಮೆ ಮತದಾನವಾದ ಕ್ಷೇತ್ರಗಳಲ್ಲಿ 9 ನಗರ ಪ್ರದೇಶಕ್ಕೆ ಸೇರಿದವಾಗಿದ್ದವು. ಆದ್ದರಿಂದ ಆ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಬೆಂಗಳೂರು ನಗರ ಪ್ರದೇಶದಲ್ಲೂ ಮತದಾನ ಕಡಿಮೆಯಾಗಿತ್ತು. ಈ ವಾರಿ ಅದರ ಕಡೆ ಹೆಚ್ಚು ನಿಗಾ ವಹಿಸಲಾಗುತ್ತಿದೆ.
ಈ ಬಾರಿ ಒಟ್ಟು 58,282 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಒಂದೊಂದು ಮತಗಟ್ಟೆಗೆ 883 ಮತದಾರರಯ ಇರಲಿದ್ದಾರೆ. ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳು, 34,219 ಗ್ರಾಮೀಣ ಭಾಗದಲ್ಲಿ ಮತಗಟ್ಟೆಗಳಿವೆ. 1,320 ಮಹಿಳೆಯರು ನಿರ್ವಹಿಸುವ ಮತಗಟ್ಟೆಗಳು. 226 ಪುರುಷರು ನಿರ್ವಹಿಸುವ ಮತಗಟ್ಟೆಗಳು,
ಜೇನು ಕುರುಬ, ಕಾಡು ಕುರುಬ ಸಮುದಾಯದವರಿಗೆ ಪ್ರತ್ಯೇಕ ಮತಗಟ್ಟೆಗಳಿರುತ್ತವೆ. ಸೂಕ್ಷ್ಮ ಮತಗಟ್ಟೆಗಳು 12,00, 128 ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ಹದ್ದಿನ ಕಣ್ಣು. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.