Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಗಂಭೀರ್ ಜೊತೆಗಿನ ಗಲಾಟೆ ನಡುವೆಯೇ ಊರು ಸುತ್ತಲು ಹೊರಟ ಕೊಹ್ಲಿ ಹೋಗಿದ್ದೆಲ್ಲಿಗೆ..?

---Advertisement---

 

ಒಂದು ಕಡೆ ಐಪಿಎಲ್ ಫೀವರ್ ಹಾಗೆ ಇದೆ.‌‌ ಅದರಲ್ಲೂ ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ಆಸೆ ಅಭಿಮಾನಿಗಳದ್ದು. ಗೆದ್ದೆ ಗೆಲ್ಲುತ್ತಾರೆ ಎಂಬ ಜೋಶ್ ನಲ್ಲಿದ್ದಾರೆ. ಆದರೆ ಉದರ ನಡುವೆಯೇ ಫೀಲ್ಡ್ ನಲ್ಲಿ ನಡೆದ ಗಲಾಟೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದುವೆ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ನಡುವಿನ ಗಲಾಟೆ.

ಈ ಗಲಾಟೆಯ ಬಗ್ಗೆಯೇ ತರಹೇವಾರಿ ಕಮೆಂಟ್ ಗಳು, ಟ್ರೋಲ್ ಗೆ ಕಾರಣವಾಗಿದೆ. ಇದೀಗ ಇದೆಲ್ಲವನ್ನು ಸೈಡಲ್ಲಿಟ್ಟು ವಿರಾಟ್ ಕೊಹ್ಲಿ ಸುತ್ತಾಟ ಆರಂಭಿಸಿದ್ದಾರೆ. ತನ್ನ ಪತ್ನಿ ಜೊತೆಗೆ ಸುತ್ತಾಡಲು ಹೊರಟಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮಾದರಿ ಅಪ್ಪ, ಮಾದರಿ ಪತಿಯೇ ಸರಿ. ಯಾಕಂದ್ರೆ ಆಟದ ನಡುವೆ ಕುಟುಂಬವನ್ನು ಯಾವತ್ತಿಗೂ ಮರೆತಿಲ್ಲ. ಆಟದಲ್ಲಿ ಎಷ್ಟೇ‌ ಬ್ಯುಸಿ ಇದ್ದರು ಮಗಳು, ಹೆಂಡತಿಗೆ ಕೊಡಬೇಕಾದ ಸಮಯವನ್ನು ಕೊಟ್ಟೆ ಕೊಡುತ್ತಾರೆ. ಈಗ ಹೆಂಡತಿ ಅನುಷ್ಕಾ ಶರ್ಮಾ ಜೊತೆಗೆ ಕಾರು ಹತ್ತಿರುವ ಕೊಹ್ಲಿ, ಸದ್ಯ ಡೆಲ್ಲಿ ಸುತ್ತಾಟಕ್ಕೆ ಹೊರಟಿದ್ದಾರೆ.

Join WhatsApp

Join Now

Join Telegram

Join Now

Leave a Comment