Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೇಣುಕಾಸ್ವಾಮಿ ಮನೆಗೆ ಸಂಧಾನ ಮಾಡಲು ಹೋಗಿದ್ರಾ ವಿನೋದ್ ರಾಜ್ ? ಅವರು ಹೇಳಿದ್ದೇನು..?

---Advertisement---

ಸುದ್ದಿಒನ್, ಬೆಂಗಳೂರು: ಇತ್ತಿಚೆಗಷ್ಟೇ ಹಿರಿಯ ನಟ ವಿನೋದ್ ರಾಜ್ ಮೃತ ರೇಣುಕಾಸ್ವಾಮಿ ಮನೆಗೆ ಹೋಗಿ ಸಾಂತ್ವನ ಹೇಳಿದ್ದರು. ಜೊತೆಗೆ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ನೀಡಿದ್ದರು. ವಿನೋದ್ ರಾಜ್ ಭೇಟಿಯ ಬೆನ್ನಲ್ಲೇ ಹಲವು ವಿಚಾರಗಳು ಚರ್ಚೆಗೆ ಬಂದಿತ್ತು. ಯಾಕಂದ್ರೆ ರೇಣುಕಾಸ್ವಾಮಿ ಮನೆಗೆ ಹೋಗುವುದಕ್ಕೂ ಮುನ್ನ ವಿನೋದ್ ರಾಜ್ ಅವರು ಪರಪ್ಪನ ಅಗ್ರಹಾರಕ್ಕೂ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಅವರ ಮನೆಗೆ ಹೋಗಿದ್ದೆ ರಾಜಿ ಸಂಧಾನ ಮಾಡುವುದಕ್ಕಾ ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿತ್ತು. ಇದೀಗ ನಟ ವಿನೋದ್ ರಾಜ್ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ.

‘ಮೊನ್ನೆ ನಾಲ್ಕೈದು ದಿನದ ಹಿಂದೆ ದರ್ಶನ್ ಅವರನ್ನು ನೋಡುವುದಕ್ಕೆ ಕಾರಾಗೃಹಕ್ಕೆ ಹೋಗಿದ್ದೆ. ಎರಡ್ಮೂರು ದಿನ ಬಿಟ್ಟು ರೇಣುಕಾಸ್ವಾಮಿ ಮನೆಗೆ ಹೋಗಿದ್ದೆ. ವಾಹಿನಿಗಳ ಮೂಲಕ ನನಗೆ ಅರ್ಥವಾಗಿದ್ದು ಏನೆಂದರೆ ರಾಜಿಸಂಧಾನ ಮಾಡುವುದಕ್ಕೋ, ಇನ್ಯಾವುದಕ್ಕೋ ನಾನು ಹೋಗಿದ್ದೀನಿ ಅಂತ ಬಿಂಬಿಸಲಾಗಿದೆ. ಖಂಡಿತ ಅದಲ್ಲ. ದರ್ಶನ್ ಅವರನ್ನು ಒಬ್ಬ ಕಲಾವಿದ ಎಂಬ ದೃಷ್ಟಿಯಿಂದ ಹೋಗಿ ನೋಡಿಕೊಂಡು ಬಂದೆ. ಚಿತ್ರದುರ್ಗಕ್ಕೆ ಯಾಕೆ ಹೋದೆ ಅಂದ್ರೆ, ರೇಣುಕಾಸ್ವಾಮಿ ಶ್ರೀಮತಿ ಅವರು ಗರ್ಭಿಣಿ. ಹುಟ್ಟುವ ಮಗುವಿಗೆ ಏನಾದರೂ ಒಳ್ಳೆಯದಾಗುತ್ತಾ ಅಂತ ಹೋಗಿದ್ದೆ. ನನ್ನ ಕಡೆಯಿಂದ ಒಂದು ಸಣ್ಣ ಕಾಣಿಕೆ ನೀಡಿದ್ದೇನೆ ಅಷ್ಟೆ.

ಯಾವುದೇ ರಾಜಿ ಸಂಧಾನ ಮಾಡುವುದಕ್ಕೆ ನಾನು ಹೋಗಿಲ್ಲ. ಅಂತಹ ಕೆಲಸವನ್ನು ನಾವೂ ಮಾಡುವುದು ಇಲ್ಲ. ಅವರ ಮನೆಯವರು ದುಃಖದಲ್ಲಿದ್ದಾರೆ ಎಂದು ಸಾಂತ್ವನ ಹೇಳಿದ್ದು ಬಿಟ್ಟರೆ ಈಗಿನ್ನು ಹುಟ್ಟಬೇಕಾದ ಮಗುವಿಗೆ ಸಹಾಯವಾಗಲೆಂದು ಚೆಕ್ ನೀಡಿ ಬಂದೆ‌’ ಎಂದು ನಟ ವಿನೋದ್ ರಾಜ್ ಕ್ಲಾರಿಟಿ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...