ಬೆಂಗಳೂರು: ಹಾರ್ಟ್ ಅಟ್ಯಾಕ್ ನಿಂದಾಗಿ ಸ್ಪಂದನಾ ವಿದೇಶದಲ್ಲಿ ನಿಧನರಾದರು. ಬೆಂಗಳೂರಿಗೆ ಮೃತದೇಹ ತಂದು ಎಲ್ಲಾ ಕಾರ್ಯಗಳನ್ನು ಮುಗಿಸಿದ್ದು ಆಗಿದೆ. ಸ್ಪಂದನಾ, ವಿಜಯ್ ರಾಘವೇಂದ್ರ ಅವರನ್ನ ತುಂಬಾ ಆವರಿಸಿಬಿಟ್ಟಿದ್ದಾರೆ. ಪತ್ನಿಯ ಅಗಲಿಕೆಯ ನೋವಲ್ಲಿಯೇ ಹನ್ನೊಂದನೇ ದಿನದ ಕಾರ್ಯ ಮುಗಿದ ಮೇಲೆ ಒಂದು ಪೋಸ್ಟ್ ಹಾಕಿದ್ದರು. ನಾನೆಂದು ನಿನ್ನವ.. ಕೇವಲ ನಿನ್ನವ ಎಂದು. ಇಂದು ವಿವಾಹ ವಾರ್ಷಿಕೋತ್ಸವದ ದಿನ. ಆದ್ರೆ ಅದನ್ನ ಸಂಭ್ರಮಿಸುವ ಸಂತಸ ವಿಜಯ್ ಗಿಲ್ಲ. ವಿಧಿ ಸಂತಸಕ್ಕೂ ಮುನ್ನವೇ ಸ್ಪಂದನಾರನ್ನ ಕರೆದುಕೊಂಡು ಹೋಗಿದೆ.

ಪತ್ನಿ ಎಂದರೆ ಅದೆಷ್ಟು ಪ್ರೀತಿ ಅನ್ನೋದನ್ನ ವಿಜಯ್ ರಾಘವೇಂದ್ರ ಅದಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೂನು ಅವರಿಬ್ಬರ ನಡುವೆ ಅದೆಷ್ಟು ಅಗಾಧ ಪ್ರೀತಿ ಇತ್ತು ಅನ್ನೋದು ತಿಳಿಯುತ್ತೆ. ಇಬ್ಬರ ಪ್ರೀತಿ ಸಂಕೇತವಾಗಿ ಮುದ್ದಾದ ಮಗ ಶೌರ್ಯನಿದ್ದಾನೆ. ಶೌರ್ಯನ ಬಗ್ಗೆ ಗಂಡ – ಹೆಂಡತಿಗೆ ಅಪಾರವಾದ ಕನಸಿತ್ತು. ಆ ಕನಸಿಗೆ ಈಗ ವಿಜಯ್ ರಾಘವೇಂದ್ರ ಒಬ್ಬರೇ ಹೆಗಲ ಕೊಡಬೇಕಿದೆ. ಸ್ಪಂದನಾ ಇಂದು ಇದ್ದಿದ್ದರೆ, 16ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಅದ್ದೂರಿಯಾಗಿ ಆಚರಿಸುತ್ತಾ ಇದ್ದರು. ಸ್ಪಂದನಾ ನೆನಪಲ್ಲಿ ವಿಜಯ್ ರಾಘವೇಂದ್ರ ಭಾವುಕರಾಗುವಂತ ಪೋಸ್ಟ್ ಹಂಚಿಕೊಂಡಿದ್ದಾರೆ.

https://www.instagram.com/reel/CwZYJmtM0yV/?igshid=MzRlODBiNWFlZA==
“ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲ್ಲಿ. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ. ಬದುಕನ್ನು ಕಟ್ಟಿ ಸರ್ವಸ್ವವಾದೆ. ಉಸಿರಲಿ ಬೆರೆತು ಜೀವಂತವಾದೆ. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು. ಮರೆಯದೆ, ತೊರೆಯದೆ ಎದೆಗೊತ್ತಿ ಪ್ರೀತಿಸುವೆ. ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು” ಎಂದು ತಮ್ಮದೇ ಧ್ವನಿಯಲ್ಲಿ ಒಂದು ವಿಡಿಯೋ ಮಾಡಿ ಹಾಕಿದ್ದಾರೆ.

