ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

suddionenews
1 Min Read

ಚಿತ್ರದುರ್ಗ, (ಜೂ.21) : ನಗರದ ಪ್ರತಿಷ್ಠಿತ  ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 8 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು  ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಕಲ ರೋಗಗಳಿಗೂ ಯೋಗ ಮದ್ದು. ಯೋಗ ಮಾಡಿ, ನಿರೋಗಿಯಾಗಿ. ವಿಶ್ವಕ್ಕೆ ಯೋಗ ಗುರು ಎಂದರೆ ಭಾರತ, ಇದು ಭಾರತೀಯರಾದ ನಮ್ಮೆಲ್ಲರಿಗೂ  ಹೆಮ್ಮೆಯ ಸಂಗತಿ. ‘ಯೋಗ’ ಇದು ಮೂಲತಃ ಭಾರತದ  ಪಾರಂಪರಿಕ  ದೈಹಿಕ ಅಭ್ಯಾಸವಾಗಿದ್ದು, ಮನುಷ್ಯನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪೂರ್ವಜರು ಹಾಕಿಕೊಟ್ಟ ಬುನಾದಿಯಾಗಿದೆ.

ಪ್ರಸ್ತುತ  ದೇಶದ ಪ್ರಧಾನಿಯವರು ಯೋಗವನ್ನು  ಅಂತಾರಾಷ್ಟ್ರೀಯ ದಿನವನ್ನಾಗಿ ದೃಢೀಕರಿಸುವುದರ  ಮೂಲಕ ಪ್ರಪಂಚದ   ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯೋಗ ಕಲಿಕೆ  ಮತ್ತು ಅಭ್ಯಾಸ ಕೇವಲ ಜೂನ್ 21ಕ್ಕೆ ಸೀಮಿತವಾಗದೇ  ನಿರಂತರವಾಗಿರಲಿ  ನೀವು ಕಲಿಯಿರಿ ಮತ್ತು ಕಲಿಸಿರಿ ಎಂದು ಯೋಗದ ಮಹತ್ವವನ್ನು ಕುರಿತು  ತಿಳಿಸಿದರು.

ಜೂನ್ 21ರ  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಯಶಸ್ವಿಯಾಗುವಲ್ಲಿ ಯೋಗ ಶಿಕ್ಷಕಿಯಾದ  ಶ್ರೀಮತಿ ಸುನಿತಾ  ಒಂದು ವಾರಗಳ ಕಾಲ ನಿರಂತರ ಅಭ್ಯಾಸದಿಂದ ಮಕ್ಕಳು  ವ್ಯವಸ್ಥಿತವಾಗಿ ವಿವಿಧ ಆಸನಗಳನ್ನು ಮತ್ತು  ಭಂಗಿಗಳನ್ನು  ಮಕ್ಕಳು ಉತ್ಸಾಹದಿಂದ  ಭಾಗವಹಿಸಿದ್ದರು.

ಯೋಗ ಶಿಕ್ಷಕಿಯಾದ ಶ್ರೀಮತಿ ಸುನಿತಾ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ.ಡಿ, ಕ್ಯಾಂಪಸ್ ಇನ್‍ಚಾರ್ಜ್ ಪೃಥ್ವೀಶ್ ಎಸ್.ಎಂ, ಹೆಡ್ ಕೋ-ಆರ್ಡಿನೇಟರ್ ಬಸವರಾಜಯ್ಯ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *