ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22 : ಇಂದು ಇಡಿ ಅಧಿಕಾರಿಗಳು ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ವೀರೇಂದ್ರ ಪಪ್ಪಿ ಅವರ ಸಹೋದರ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರವಾಗಿ ಇನ್ನು ಏನು ಗೊತ್ತಿಲ್ಲ. ಕಾನೂನು ಪ್ರಕಾರ ಅವರು ಏನು ಕೇಳುತ್ತಾರೋ ಅದನ್ನ ನೀಡುತ್ತೇವೆ. ಒಳಗೆ ಹೋದ್ಮೇಲೆ ಅವರು ಏನು ಕೇಳುತ್ತಾರೆ ಎಂಬುದು ಗೊತ್ತಾಗುತ್ತೆ. ನಾನು ಈಗ ಬೆಂಗಳೂರಿನಿಂದ ಬಂದಿದ್ದೀನಿ. ಎಂಎಲ್ಎ ಅವರು ಕೂಡ ಬೆಂಗಳೂರಿನಿಂದ ಈಗ ಬರ್ತಾ ಇದ್ದಾರೆ. ಇಡಿ ಅಂತ ಹೇಳ್ತಾ ಇದ್ದಾರೆ. ನೋಡ್ಬೇಕು ಏನು ಅಂತ.

ರಾಜಕೀಯ ಪ್ರೇರಿತ ಏನು ಅದೆಲ್ಲ ನಮಗೆ ಗೊತ್ತಿಲ್ಲ. ಅಕ್ರಮ ಅದು ಇದು ಅಂತ ಇದ್ರೆ ಅವರು ಏನು ಕೇಳ್ತಾರೆ ಅದಕ್ಕೆ ಉತ್ತರ ಕೊಡುವುದಕ್ಕೆ ನಾವೂ ಸಿದ್ದ ಎಂದಿದ್ದಾರೆ. ಸಿಕ್ಕಿಂ ಹೊಟೇಲ್ ನಲ್ಲಿ ವೀರೇಂದ್ರ ಪಪ್ಪಿ ಅವರನ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಈ ಮೂಲಕ ವಿಚಾರಣೆಗೆ ಅವರನ್ನು ಕರೆದುಕೊಂಡು ಬರ್ತಿದ್ದಾರೆ ಎಂದು ಹೇಳಲಾಗ್ತಿದೆ.
ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿರುವ ಅವರ ನಾಲ್ಕು ಮನೆಗಳ ಮೇಲೆ ಮಾಡಲಾಗಿದ್ದು, ವೀರೇಂದ್ರ ಪಪ್ಪಿ ಅವರ ಸಹೋದರರಾದ ಕೆ. ಸಿ. ನಾಗರಾಜ್,ಕೆ.ಸಿ.ತಿಪ್ಪೇಸ್ವಾಮಿ ಅವರ ಮನೆ ಮೇಲೂ ಸಹ ದಾಳಿ ಮಾಡಲಾಗಿದ್ದು ಪರಿಶೀಲನೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಸುಮಾರು ಐದು ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ವೀರೇಂದ್ರ ಪಪ್ಪಿ ಅವರ ಮನೆ ಮೇಲೆ ದಾಳಿಯಾಗಿದೆ. ಈ ದಾಳಿಯ ವೇಳೆ ಹಲವು ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಇನ್ನು ಇಡಿ ಅಧಿಕಾರಿಗಳು ಏನೇ ಪ್ರಶ್ನೆಗಳನ್ನ ಕೇಳಿದ್ರು ಅದಕ್ಕೆ ಉತ್ತರ ಕೊಡ್ತೀನಿ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











