ಬೆಂಗಳೂರು: ವರ್ತೂರು ಸ್ನೇಹಿತೆ ಶ್ವೇತಾ ಗೌಡ ವಂಚನೆ ಮಾಡಿರುವುದು ದಿನೇ ದಿನೇ ಬಯಲಾಗುತ್ತಲೇ ಇದೆ. ಬೆಂಗಳೂರೊನ ಕಮರ್ಷಿಯಲ್ ಸ್ಟ್ರೀಟ್ ಹ್ಯುವೆಲ್ಲರಿ ಶಾಪ್ ಗೆ ಲಕ್ಷಾಂತರ ರೂಪಾಯಿ ವಂಚಿಸಿ ಅರೆಸ್ಟ್ ಆಗಿದ್ದಾರೆ. ಈಗ ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಗೂ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಸುಭಾಷ್ ನಗರದಲ್ಲಿ ಪ್ರಗತಿ ಎಂಬ ಜ್ಯುವೆಲ್ಲರಿ ಶಾಪ್ ಇದೆ. ಆ ಶಾಪ್ ಮಾಲೀಕನಿಂದ 20 ಲಕ್ಷಕ್ಕೂ ಅಧಿಕ ಮಿತ್ತದ ಜ್ಯುವೆಲ್ಲರಿ ಪಡೆದು ಮೋಸ ಮಾಡಿದ್ದಾರೆ. ಈ ಸಂಬಂಧ ಬಾಲರಾಜ್ ದೂರು ಕೂಡ ನೀಡಿದ್ದಾರೆ. ಒಂದು ಸಲ ಪ್ರಗತಿ ಜ್ಯುವೆಲ್ಲರಿ ಮಾಲೀಕ ಬಾಲರಾಜ್ ಶೇಟ್ ಅವರನ್ನ ಸಂಜಯ್ ಬಾಫ್ನಾ ಮೂಲಕ ಭೇಟಿಯಾಗಿದ್ದಳಂತೆ. ಕೋಟಿ ಕೋಟಿ ಚಿನ್ನದ ವ್ಯವಹಾರ ಮಾಡುತ್ತೇನೆ. 250 ಗ್ರಾಮನ ಆಂಟಿಕ್ ಒಡವೆಯನ್ನ ಮಾಡಿಕೊಡಿ ಎಂದು ಕೇಳಿದ್ದಳಂತೆ. ಆದರೆ ಚಿನ್ನಾಭರಣ ಬೇಕು ಅಂತ ಹೇಳಿದವಳು ಮತ್ತೆ ಭೇಟಿಯಾಗಲು ಸಿಕ್ಕಿರಲಿಲ್ಲವಂತೆ. ಬಳಿಕ ಚಿನ್ನಾಭರಣವನ್ನು ಬಾಲರಾಜ್ ಶೇಟ್ ಕಳಯಹಿಸಿಕೊಟ್ಟಿದ್ದರಂತೆ. ಆಗಲೂ ಯಾರೂ ಚಿನ್ನಾಭರಣ ತೆಗೆದುಕೊಂಡಿರಲಿಲ್ಲವಂತೆ. ಶ್ವೇತಾಗೆ ಚಿನ್ನಾಭರಣದ ಫೋಟೋ ಕಳುಹಿಸಿದ್ದರಂತೆ.
ಆಗ ಈ ಒಡವೆಗಳು ನನಗೆ ಬೇಕು ಎಂದು ಹಠ ಮಾಡಿದ್ದರಂತೆ ಶ್ವೇತಾ. ಚಿನ್ನ ಪಡೆದು 9 ಲಕ್ಷಕ್ಕೆ ಎರಡು ಚೆಕ್ ಕೊಟ್ಟು ಉಳಿದ 4 ಲಕ್ಷದ 75 ಸಾವಿರ ರೂಪಾಯಿಯನ್ನು ಆರ್ಜಿಎಸ್ ಮಾಡುತ್ತೇನೆಂದು ಹೋದವಳದ್ದು ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಚೆಕ್ ಕೂಡ ಬೌನ್ಸ್ ಆಗಿವೆ. ಇದಾದ ಮೇಲೆ ಶ್ವೇತಾಳನ್ನ ಸಂಪರ್ಕ ಮಾಡಲು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಅರೆಸ್ಟ್ ಮಾಡಿದ್ದ ಸುದ್ದಿ ಬಂದಿದೆ. ಈಗ ಬಾಲರಾಜ್ ಕೂಡ ಪೊಲೀಸ್ ಕಂಪ್ಲೈಂಟ್ ನೀಡಿದ್ದಾರೆ.