Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೆ. 06 ರಿಂದ 15 ರವರೆಗೆ ಶ್ರೀ ಪಾಲ್ಗುಣೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 02 : ನಗರದ ಬುರುಜನಹಟ್ಟಿಯ ಸಾವಂತನರಹಟ್ಟಿಯಲ್ಲಿನ ಶ್ರೀ ಪಾಲ್ಗುಣೇಶ್ವರಸ್ವಾಮಿ ಪ್ರಸನ್ನ ಶ್ರೀ ಪಾಲ್ಗುಣೇಶ್ವರ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ (ರಿ.)ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ದೇವಸ್ಥಾನದಲ್ಲಿ ಫೆ. 06 ರಿಂದ 15ರವರೆಗೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷರಾದ ಹೆಚ್.ರಂಗಸ್ವಾಮಿ ತಿಳಿಸಿದ್ದಾರೆ.

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಐತಿಹಾಸಿಕ ಏಳುಸುತ್ತಿನ ಕೋಟೆಯಲ್ಲಿರುವ ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನವು ಅತ್ಯಂತ ಪುರಾತನ ದೇವಸ್ಥಾನವಾಗಿದ್ದು ಹೊಯ್ಸಳ ಕಾಲದಲ್ಲಿ ನಿರ್ಮಿತವಾಗಿರುತ್ತದೆ. ಚಿತ್ರದುರ್ಗದ ಅರಸರಾದ ರಾಜವೀರ ಮದಕರಿನಾಯಕರ ಕಾಲದಲ್ಲಿ ಅಭಿವೃದ್ಧಿ ಹೊಂದಿ ಮಹಾ ಶಿವರಾತ್ರಿ ದಿನದಂದು ವಿಶೇಷ ಪೂಜೆ ಹಾಗೂ ಪ್ರತಿದಿನ ಸ್ವಾಮಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿದವು ಎಂದು ಪುರಾವೆಗಳಿವೆ ಎಂದು ಹೇಳುತ್ತದೆ. ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಾಲಯವು ಚಿತ್ರದುರ್ಗ ಕೋಟೆಯ ಒನಕೆ ಓಬವ್ವನ ಕಿಂಡಿ ಗವಿಯನ್ನು ದಾಟಿ ಪಶ್ಚಿಮದಿಕ್ಕಿನ ಕೋಟೆಯ ಪ್ರಾಕಾರದ ಪಕ್ಕದಲ್ಲಿಯೇ ಮುಂದೆ ಸಾಗಿದರೆ ಬಲಭಾಗದಲ್ಲಿ ದಿನ್ನೆಯೊಂದರ ಮೇಲೆ ಈ ದೇವಾಲಯ ನಿಂತಿದೆ. ಬೆಟ್ಟದ ಮೇಲಿನ ಗುಹಾಲಯಗಳಲ್ಲಿ ಇದೂ ಒಂದು. ನವರಂಗ ಮತ್ತು ವಿಶಾಲವಾದ ಗರ್ಭಗುಡಿ ಹೊಂದಿರುವ ಈ ದೇಗುಲದಲ್ಲಿ ಬೃಹತ್ತಾದ ಪಾಲ್ಗುಣೇಶ್ವರ ಸ್ಪಟಿಕ ಲಿಂಗವಿದೆ. ಇದರ ಮುಖಮಂಟಪವು ಹಿಡಂಬೇಶ್ವರ ಮತ್ತು ಸಂಪಿಗೆ ಸಿದ್ದೇಶ್ವರ ದೇವಾಲಯಗಳ ರಚನೆಯನ್ನು ಹೋಲುತ್ತಿದ್ದು, 1260ರಲ್ಲಿ ನಿರ್ಮಾಣಗೊಂಡಿತು ಇಲ್ಲಿರುವ ಶಾಸನದ ಪ್ರಕಾರ ಈ ಗುಡಿಯನ್ನು ಪೂರೈಸಿದವನು ಹರಿಹರದ ಮಹಾಪ್ರಧಾನಿ ಸೋಮಣ್ಣ ದೇವಸ್ಥಾನದ ಪಕ್ಕದಲ್ಲಿಯೇ ವೀರಗಲ್ಲೊಂದು ನಿಂತಿದೆ. ಇತಿಹಾಸವು ಪಾಲ್ಗುಣೇಶ್ವರ ಸ್ಪಟಿಕ ಲಿಂಗವನ್ನು ಅರ್ಜುನನು ಪ್ರತಿಷ್ಠಾಪಿಸಿದನೆಂದು ಚಿತ್ರ ಸಮೇತ ದೇವಸ್ಥಾನದ ರಚನೆಯ ಪುರಾವೆಗಳಿವೆ ಹೇಳುತ್ತದೆ ಎಂದಿದ್ದಾರೆ.

ಶ್ರೀ ಪಾಲ್ಗುಣೇಶ್ವರ ದೇವಸ್ಥಾನ ಸೇವಾ ಸಮಿತಿಯ ಮೇಲ್ವಿಚಾರಕ ಉಸ್ತುವಾರಿಗಳು ಎಸ್.ಬಿ.ಎಲ್, ಮಲ್ಲಿಕಾರ್ಜುನ್ ಮಾತನಾಡಿ, ಫೆ. 06 ರಿಂದ 15ರವರೆಗೆ ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ. 06ನೇ ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ನೂತನವಾಗಿ ನಿರ್ಮಿಸಿದ ಮೂರ್ತಿಯ ಮುಖಪದ್ಮ,  ಪ್ರಭಾವಳಿಯನ್ನು ಲೋಕಾರ್ಪಾಣೆ ಕಾರ್ಯಕ್ರಮ ಮೆರಣವಣೆಗೆ ನಗರದ ರಾಜ್ಯಬೀದಿಗಳಲ್ಲಿ ಅನೇಕ ಕಲಾತಂಡಗಳೊಂದಿಗೆ ಮೆರವಣಿಗೆ ಮುಖಾಂತರ ಶ್ರೀ ಪಾಲ್ಗುಣೇಶ ಸ್ವಾಮಿ ದೇವಸ್ಥಾನಕ್ಕೆ ಅರ್ಪಣೆಮಾಡಲಾಗುವುದು. ಫೆ. 07 ನೇ ಶನಿವಾರದಂದು ಬೆಳಗ್ಗೆ 10ಗಂಟೆಗೆ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಈ ಪೂಜೆ ಕಾರ್ಯಕ್ರಮಕ್ಕೆ ಡಾ. ಮಹರ್ಷಿ ಆನಂದ ಗುರೂಜೀ ಈ ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದು, ಸಂಜೆ 5ಗಂಟೆಗೆ ಹಳೇ ಮ್ಯಾಥಮಿಕ ಶಾಲಾ ಆವರಣದಲ್ಲಿ ಡಾ. ಮಹರ್ಷಿ ಆನಂದ ಗುರೂಜಿ ರವರಿಂದ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ. 08 ನೇ ಭಾನುವಾರದಂದು ಚಿತ್ರದುರ್ಗ ನಗರದೇವತೆಗಳಾದ ನವದುರ್ಗೆಯರ ಸಿಹಿನೀರು ಹೊಂಡದ ಆವರಣದಲ್ಲಿ ಗಂಗಾಪೂಜಾ ಕಾರ್ಯಕ್ರಮ ನಂತರ ರಾಜಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಪಾಲ್ಗುಣೇಶ್ವರ ಸ್ವಾಮಿ ಸನ್ನಿದಿಗೆ ತಲುಪಲಿದೆ.  ಫೆ. 09 ನೇ ಸೋಮವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರ ಹೋಮ ಹಾಗೂ ಪ್ರಸಾದ ವಿನಿಯೋಗ ಫೆ. 10ನೇ ಮಂಗಳವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕೀರ್ತಿ ಆಸ್ಪತ್ರೆ, ಸಹಕಾರದೊಂದಿಗೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್ & ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಬರದಂತೆ ಎಚ್‍ಪಿವಿ ವ್ಯಾಕ್ಸಿನ್‍ನ್ನು ದೇವಸ್ಥಾನವತಿಯಿಂದ ನೀಡಲಾಗುವುದು ಫೆ. 11ನೇ ಬುಧವಾರದಂದು ಕಾಶಿಯ ಲ್ಲಿರುವ ಮುಖ್ಯ ಅರ್ಚಕರಾದ ಶ್ರೀಕಾಶಿ ವಿಶ್ವನಾಥನರವರಿಂದ  ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಗಂಗಾರತಿ ಪೂಜೆ ಮತ್ತು ವಿಶೇಷ ಪೂಜೆ ಫೆ, 12 ನೇ ಗುರುವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ಮೂರ್ತಿಗೆ ಅರ್ಧನಾರೀಶ್ವರನ ಅವತಾರದ ವಿಶೇಷ ಪೂಜೆ ಮತ್ತು ಜಿಲ್ಲೆಯ ಮಂಗಳಮುಖಿಯರಿಗೆ ಬಾಗಿನ ಸಮರ್ಪಣೆ ಫೆ. 13ನೇ ಶುಕ್ರವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಮಧ್ಯಪದೇಶದ ಉಜ್ಜಿಯಿನಿಯ ಮಹಾಕಾಳೇಶ್ವರನ ಅಲಾಂಕರದ ರೀತಿ ವಿಶೇಷ ಪೂಜೆ ಫೆ.14ನೇ ಶನಿವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ನಂದಿ ಕಾಮಧೇನುವಿನ ವಿಶೇಷ ಪೂಜೆ ಫೆ.15ನೇ ಭಾನುವಾರದಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಹೂವಿನ ಅಲಾಂಕರದೊಂದಿಗೆ ಪೂಜೆ ಕಾರ್ಯಕ್ರಮ ಹಾಗೂ ರಾತ್ರಿಯಿಂದ ಅಖಂಡ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಶ್ರೀಪಾಲ್ಗುಣೇಶ್ವರ ದೇವಸ್ಥಾನ ಸೇವಾ ಸಮಿತಿಯ ಮೇಲ್ವಿಚಾರಕ ಉಸ್ತುವಾರಿಗಳಾದ ಕೆ.ಜಿ.ಟಿ. ಗುರುಮೂರ್ತಿ, ಎಸ್.ಟಿ. ನವೀನ್‍ಕುಮಾರ್ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...