ಇಷ್ಟು ದಿನ ರಷ್ಯಾದ ಪರ ಯುದ್ಧ ಮಾಡುತ್ತಿದ್ದಂತ ವ್ಯಾಗ್ನರ್ ಪಡೆ ಇದ್ದಕ್ಕಿದ್ದ ಹಾಗೆ ರಷ್ಯಾದ ವಿರುದ್ಧ ತಿರುಗಿ ಬಿದ್ದಿದ್ದು, ಜಗತ್ತಿನ ಅತ್ಯಂತ ಸುದ್ದಿ ಆಗಿತ್ತು. ಆದರೆ ರಾತ್ರೋರಾತ್ರಿ ಯಾಕೋ ದಿಢೀರ್ ಅಂತ ತನ್ನ ನಿರ್ಧಾರವನ್ನು ಬದಲಿಸಿದ್ದು ಈಗ ಸೈಲೆಂಟ್ ಆಗಿದೆ. ವ್ಲಾಡಿಮರ್ ಪುಟಿನ್ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ರಷ್ಯಾದ ವಿರುದ್ಧವೇ ಯುದ್ಧ ಸಾರುವುದಕ್ಕೆ ಸನ್ನದ್ಧವಾಗಿತ್ತು. ಶನಿವಾರದ ರಾತ್ರಿವರೆಗೆ ಮಾಸ್ಕೋದತ್ತ ಮುನ್ನುಗ್ಗುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಸಂಜೆಯೊಳಗೆ ವ್ಯಾಗ್ನಿಮರ್ ಪಡೆ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದೆ.
ರಷ್ಯಾದಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿದೆ ಎಂದು ತಿಳಿದ ತಕ್ಷಣ ರಷ್ಯಾ ಸ್ನೇಹಿತವಾದ ಬೆಲರೂಸ್ ಸಂಧಾನಕ್ಕೆ ಮುಂದಾಗಿದೆ. ಇಬ್ಬರ ನಡುವೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಮಾಸ್ಕೋದತ್ತ ಮುನ್ನುಗ್ಗದೆ ದಾಳಿ ನಿಲ್ಲಿಸಲು ನಮ್ಮ ಸೈನಿಕರಿಗೆ ನಾವು ಸೂಚಿಸಿದ್ದೇವೆ. ರಕ್ತಪಾತ ನಮಗೆ ಇಷ್ಟವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.
ಒಂದು ನಗರ ನಮ್ಮ ಕೈತಪ್ಪಿದೆ. ಬಂಡಾಯ ಏಳುವವರ, ಬೆನ್ನಿಗೆ ಚೂರಿ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಪಡೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇಂಥ ಸಶಸ್ತ್ರ ಬಂಡಾಯದಿಂದ ದೇಶವನ್ನು ರಕ್ಷಿಸಿಕೊಳ್ಳಲು ನಾವು ಬದ್ಧ ಮತ್ತು ಸಿದ್ಧರಾಗಿದ್ದೇವೆ ಎಂದು ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.