ನಿಮ್ಮ ಮಕ್ಕಳು ಸುರಕ್ಷಿತವಾಗಿ ಬರ್ತಾರೆಂದು ಭರವಸೆ ನೀಡಿದ ಕೇಂದ್ರ ಸಚಿವ

ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ಹೆಚ್ಚಾಗಿದ್ದು, ಭಾರತೀಯರ ವಿದ್ಯಾರ್ಥಿಗಳದ್ದೇ ಚಿಂತೆಯಾಗಿದೆ. ಈ ಹಿನ್ನೆಲೆ ಕೇಂದ್ರ ಸಚಿವ ವಿ ಕೆ ಸಿಂಗ್ ಪೋಷಕರಿಗೆ ಭರವಸೆ ನೀಡಿದ್ದಾರೆ. ಯಾವುದೇ ಆತಂಕ ಬೇಡ ಎಂದಿದ್ದಾರೆ.

ಉಕ್ರೇನ್ ನಲ್ಲಿರುವ ಭಾರತೀಯರ ಪರಿಸ್ಥಿತಿ ಘೋರವಾಗಿದೆ. ಹೀಗಾಗಿ ಅವರನ್ನ ಸುರಕ್ಷಿತವಾಗಿ ಅವರನ್ನ ಕರೆತರುತ್ತಿದ್ದಾರೆ. ಈಗಾಗಲೇ ಸಾಕಷ್ಟು ಭಾರತೀಯರನ್ನ ಕರೆತಂದಿದ್ದು, ಇನ್ನು ಸಾಕಷ್ಟು ಕನ್ನಡಿಗರು ಉಕ್ರೇನ್ ನಲ್ಲಿಯೇ ಸಿಲುಕಿದ್ದಾರೆ. ಅವರನ್ನ ಸುರಕ್ಷಿತ ಕರೆತರುವ ಪ್ರಯತ್ನ ನಡೆಯುತ್ತಿದೆ.

ನೀವೂ ಮಂಗಳ ಗ್ರಹದಲ್ಲಿ ಸಿಲುಕಿಕೊಂಡರು ಭಾರತೀಯ ರಾಯಭಾರಿ ನಿಮ್ಮನ್ನ ರಕ್ಷಿಸಲಿದೆ. ಸಮಸ್ಯೆಯಲ್ಲಿ ಸಿಲುಕಿದ ಒಬ್ಬ ಭಾರತೀಯನನ್ನು ಅಲ್ಲಿಯೇ ಉಳಿಯಲು ಬಿಡುವುದಿಲ್ಲ. ಎಲ್ಲರನ್ನು ರಕ್ಷಿಸುತ್ತೇಚೆ ಎಂದು ತಿಳಿಸಿದ್ದಾರೆ. ಶೀಘ್ರವೇ ನಿಮ್ಮ ಮಕ್ಕಳು ಹಾಗೂ ನಿಮ್ಮ ಕುಟುಂಬದವರು ಸುರಕ್ಷಿತವಾಗಿ ನಿಮ್ಮ ಮನೆ ಸೇರುತ್ತಾರೆ. ನಿಮ್ಮ ದೇಶ ನಿಮ್ಮ ಪ್ರೀತಿ ಪಾತ್ರರನ್ನು ಯಾವಾಗಲೂ ಸುರಕ್ಷಿತವಾಗಿರಿಸುತ್ತೆ ಎಂದು ವಿ ಕೆ ಸಿಂಗ್ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *