Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಂತ್ರಜ್ಞಾನ ಬಳಕೆ ಜನಕಲ್ಯಾಣಕ್ಕಾಗಿ ಆಗಬೇಕು : ಸಿ.ಎಸ್. ಗಾಯತ್ರಿ

Facebook
Twitter
Telegram
WhatsApp

ಚಿತ್ರದುರ್ಗ (ಡಿ.23): ತಂತ್ರಜ್ಞಾನಗಳು ಜನರ ಹಿತರಕ್ಷಣೆಗೆ ಹಾಗೂ ಅವರಿಗೆ ತ್ವರಿತವಾಗಿ ಸೇವೆ ಒದಗಿಸಲು, ಜನಕಲ್ಯಾಣಕ್ಕಾಗಿ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಗುಡ್ ಗೌರ್ನೆನ್ಸ್ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ತ್ವರಿತವಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಸರ್ಕಾರ ಸಕಾಲ, ಸೇವಾಸಿಂಧು, ಗ್ರಾಮಒನ್ ಮುಂತಾದ ಇಂಟರ್‍ನೆಟ್ ಆಧಾರಿತ ತಂತ್ರಾಂಶಗಳನ್ನು ಜಾರಿಗೊಳಿಸಿದೆ.  ಇದರಿಂದಾಗಿ ಸಾರ್ವಜನಿಕರು ಸೇವೆಗಳಿಗಾಗಿ ಕಾಯುವಂತಹ, ಕಚೇರಿಗಳಿಗೆ ಅಲೆದಾಡುವ ಹಾಗೂ ಜನರು ಅನಗತ್ಯ ವೆಚ್ಚ ಮಾಡುವಂತಹ ವ್ಯವಸ್ಥೆಯನ್ನು ತಪ್ಪಿಸಲು, ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.  ಪ್ರಮುಖವಾಗಿ ಸಕಾಲ ಯೋಜನೆಯಲ್ಲಿ, ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಸೇವೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಹಾಗೂ ಅರ್ಜಿಗಳ ವಿಲೇವಾರಿಗೆ ಕಾಲಮಿತಿಯನ್ನು ನಿಗದಿಪಡಿಸಿ, ಸೇವೆ ನೀಡಲಾಗುತ್ತಿದೆ.  ಅದೇ ರೀತಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿ, ಜಾತಿ, ಆದಾಯ ಪ್ರಮಾಣಪತ್ರ, ಪಹಣಿ ಮುಂತಾದ ಸೇವೆಗಳನ್ನು ಸ್ಥಳೀಯವಾಗಿಯೇ ಗ್ರಾಮಗಳಲ್ಲಿ ದೊರಕುವಂತೆ ಮಾಡಲಾಗಿದೆ.  ಹೀಗೆ ತಂತ್ರಜ್ಞಾನಗಳು ಜನರ ಕಲ್ಯಾಣಕ್ಕಾಗಿ, ಜನೋಪಯೋಗಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತಿರುವುದು ಒಳ್ಳೆಯ ಆಡಳಿತದ ಲಕ್ಷಣವಾಗಿದೆ. ಅಧಿಕಾರಿಗಳು, ಸಾರ್ವಜನಿಕರಿಗೆ ಆದಷ್ಟು ತ್ವರಿತವಾಗಿ ವಿಳಂಬಕ್ಕೆ ಅವಕಾಶವಾಗದ ರೀತಿಯಲ್ಲಿ ಸೇವೆಗಳನ್ನು ಒದಗಿಸಬೇಕು.  ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಗಾಯತ್ರಿ ಅವರು ಹೇಳಿದರು.

ಜಿಲ್ಲಾ ಎನ್‍ಐಸಿ ಅಧಿಕಾರಿ ರಾಮಕೃಷ್ಣ ಶಾಸ್ತ್ರಿ ಮಾತನಾಡಿ, ಸಕಾಲ ಯೋಜನೆ 2011 ರಲ್ಲಿ ಜಾರಿಗೆ ತರುವ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿ ಅನುಷ್ಠಾನಗೊಳಿಸಲಾಯಿತು.  ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ಸಹಕಾರದಿಂದಾಗಿ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ವಿಯಾದ ಪರಿಣಾಮವಾಗಿ, ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಯಿತು.  ಈಗ 100 ಇಲಾಖೆ, ಸಂಸ್ಥೆಗಳಲ್ಲಿ 1178 ವಿವಿಧ ಸೇವೆಗಳನ್ನು ಸಕಾಲ ಯೋಜನೆಯಡಿ ಕಾಲಮಿತಿಯೊಳಗೆ ಒದಗಿಸಲಾಗುತ್ತಿದ್ದು,  ಈವರೆಗೆ 23.30 ಕೋಟಿ ಅರ್ಜಿಗಳು ಸಕಾಲದಡಿ ವಿಲೇವಾರಿಯಾಗಿವೆ.   ಸರ್ಕಾರ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಇ-ಆಫೀಸ್ ಜಾರಿಗೊಳಿಸಿದ್ದು, ಈ ರೀತಿ ತಂತ್ರಜ್ಞಾನ ಬಳಕೆ ಸಂದರ್ಭದಲ್ಲಿ ಅಧಿಕಾರಿಗಳು, ನಿರ್ಲಕ್ಷ್ಯ ತೋರದೆ ಇಂತಹ ವ್ಯವಸ್ಥೆಗೆ ಹೊಂದಿಕೊಳ್ಳಬೇಕು, ಅಂದಾಗ ಮಾತ್ರ ಒಳ್ಳೆಯ ಆಡಳಿತ ನೀಡಲು ಸಾಧ್ಯ ಎಂದರು.

ಗುಡ್ ಗೌರ್ನೆನ್ಸ್ ಕಾರ್ಯಗಾರದ ಅಂಗವಾಗಿ ಇ-ಆಫೀಸ್, ಇ-ಪಾರ್ ತಂತ್ರಾಂಶಗಳ ಬಗ್ಗೆ ಮಾಹಿತಿ ನೀಡಿದ ಇ-ಆಫೀಸ್ ಕನ್ಸಲ್ಟೆಂಟ್ ಗಣಪತಿ ಅವರು, ಸರ್ಕಾರವು ಕಚೇರಿಗಳಲ್ಲಿ ಪಾರದರ್ಶಕತೆ ಹಾಗೂ ತ್ವರಿತಗತಿಯಲ್ಲಿ ಕಡತಗಳ ವಿಲೇವಾರಿಯಾಗುವಂತೆ ಮಾಡಲು ಇ-ಆಫೀಸ್ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಈಗ ಬಹಳಷ್ಟು ಇಲಾಖೆಗಳಲ್ಲಿ ಇದು ಅನುಷ್ಠಾನಗೊಂಡಿದೆ.  ಇದರಿಂದ ಕಡತಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಹೆಚ್ಚಿದ್ದು, ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನೂ ನೀಡಲಾಗಿದೆ ಎಂದರು.  ಅಲ್ಲದೆ ಅಧಿಕಾರಿಗಳು ತಮ್ಮ ವಾರ್ಷಿಕ ವರದಿಗಳನ್ನು ಆನ್‍ಲೈನ್‍ನಲ್ಲಿಯೇ ಸಲ್ಲಿಸಲು ಅನುಕೂಲವಾಗುವಂತೆ ಇ-ಪಾರ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದು, ಇದರಿಂದ ಅಧಿಕಾರಿಗಳಿಗೆ ಅನಗತ್ಯ ಕಿರಿಕಿರಿ ತಪ್ಪಿದಂತಾಗಿದೆ ಎಂದರು.

ಗ್ರಾಮಒನ್ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಕಾರ್ತಿಕ್, ಮಾತನಾಡಿ, ಎಲ್ಲ ಬಗೆಯ ಸರ್ಕಾರಿ ಸೇವೆಗಳು ಸ್ಥಳೀಯವಾಗಿ, ನಾಗರಿಕರಿಗೆ ತ್ವರಿತವಾಗಿ ತಲುಪಿಸುವಂತಾಗಲು ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲಿ 7363 ಇಂತಹ ಕೇಂದ್ರಗಳಿವೆ.  ಜಿಲ್ಲೆಯಲ್ಲಿ 308 ಗ್ರಾಮ ಒನ್ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಸದ್ಯ 200 ಕೇಂದ್ರಗಳು ಪ್ರಾರಂಭವಾಗಿವೆ.  ಇದರಲ್ಲಿ ಆರೋಗ್ಯ ಕಾರ್ಡ್, ಜಾತಿ, ಆದಾಯ ಪತ್ರ, ಪಹಣಿ ಮುಂತಾದ ಸೇವೆಗಳು ಗ್ರಾಮಗಳಲ್ಲಿಯೇ ಸಿಗುತ್ತಿವೆ.  ರಾಜ್ಯದಲ್ಲಿ ಈವರೆಗೆ 1.41 ಕೋಟಿ ಅರ್ಜಿಗಳು ಗ್ರಾಮ ಒನ್ ಗಳಲ್ಲಿ ಸ್ವೀಕೃತಗೊಂಡು ವಿಲೇವಾರಿಯಾಗಿವೆ ಎಂದರು.

ಕಾರ್ಯಗಾರದಲ್ಲಿ ಪತ್ರಾಂಕಿತ ಕಚೇರಿ ಸಹಾಯಕ ನಾಗರಾಜ್, ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದ ಸಮರ್ಥ್, ಸಕಾಲ ಕನ್ಸಲ್ಟೆಂಟ್ ಆದರ್ಶ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!