ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ಉರಿಗೌಡ ಮತ್ತು ನಂಜೇಗೌಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದ್ದಾರೆ. ಅಶ್ವತ್ಥ್ ನಾರಾಯಣ್ ಅವರು ಅದ್ಯಾವಾಗ ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಅಂದ್ರೋ ಅಂದಿನಿಂದಾನೂ ಈ ವಿಚಾರ ಚಾಲ್ತಿಯಲ್ಲಿದೆ.
ಅಷ್ಟೆ ಅಲ್ಲ ಇದೃ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಸಚಿವ ಮುನಿರತ್ನ ಘೋಷಣೆ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಯಾವಾಗ ಎಂಬುದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಬಿಜೆಪಿ ನಾಯಕರ ಸಿನಿಮಾ ಮಾಡುವ ವರ್ತನೆಗೆ ವಿರೋಧ ವ್ಯಕ್ತಪಡಿಸಿದರು. ಇದು ಒಕ್ಕಲಿಗ ಸಮುದಾಯಕ್ಕೆ ಮಾಡುವ ಅವಮಾನ ಎಂದು ಹೇಳಿದ್ದರು. ಇದೀಗ ಈ ವಿಚಾರಕ್ಕೆ ಆದಿಚುಂಚನಗಿರಿ ಅಂಗಳಕ್ಕೆ ಸಮಸ್ಯೆ ಹೋಗಿದೆ.
ನಾಳೆ ಆದಿಚುಂಚನಗಿರಿ ಶ್ರೀಗಳನ್ನು ಮುನಿರತ್ನ ಅವರು ಭೇಟಿಯಾಗಲಿದ್ದಾರೆ. ಭೇಟಿಯ ಬಳಿಕ ಮುಂದಿನ ನಿರ್ಧಾರ ತಿಳಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಮುನಿರತ್ನ, ನಾನು ನಿರ್ಮಾಪಕನಾಗಿ ಸಿನಿಮಾ ಮಾಡೋಣಾ ಅಂತಿದ್ದೀನಿ
ಶ್ರೀಗಳ ಜೊತೆಗೆ ಮಾತನಾಡ್ತೀನಿ. ಸಲಹೆ ಪಡೆದು ಮುಂದಿನ ನಿರ್ಧಾರ ಮಾಡ್ತೇನೆ. ಶ್ರೀಗಳನ್ನು ಭೇಟಿ ಮಾಡ್ತೀನಿ, ಅಲ್ಲಿಯ ತನಕ ಚಿತ್ರದ ಹೆಚ್ಚೇನು ಮಾತನಾಡುವುದಿಲ್ಲ ಎಂದಿದ್ದಾರೆ.