ಅವಳಿ ಜಿಲ್ಲೆಗೆ ಕೀರ್ತಿ ತಂದ UPSC ಫಲಿತಾಂಶ : ಚಿತ್ರದುರ್ಗದ ಡಾ.ಬೆನಕ ಪ್ರಸಾದ್, ದಾವಣಗೆರೆಯ ಅವಿನಾಶ್ ರ್ಯಾಂಕ್ ವಿಜೇತರು

2 Min Read

ಚಿತ್ರದುರ್ಗ, (ಮೇ30): ಇಂದು ಯುಪಿಎಸ್ಸಿ 2021 ಫಲಿತಾಂಶ ಬಂದಿದ್ದು, ಈ ಫಲಿತಾಂಶದಿಂದಾಗಿ ರಾಜ್ಯಕ್ಕೆ ಮತ್ತು ಅವಳಿ ಜಿಲ್ಲೆಗೆ ಕೀರ್ತಿ ಬಂದಂತಾಗಿದೆ.

ದಾವಣಗೆರೆಯ ಅವಿನಾಶ್ ಆಲ್ ಇಂಡಿಯಾ ರ್ಯಾಂಕ್ ನಲ್ಲಿ 31ನೇ ಸ್ಥಾನ ಮತ್ತು ಚಿತ್ರದುರ್ಗದ ಡಾ.ಬೆನಕ ಪ್ರಸಾದ್ 92ನೇ ರ್ಯಾಂಕ್ ಪಡೆದಿದ್ದಾರೆ.

ಡಾ. ಬೆನಕ ಪ್ರಸಾದ್ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದ ಜಯಪ್ಪ ಮತ್ತು ಪಂಕಜ ದಂಪತಿಯ ಪುತ್ರರಾಗಿದ್ದಾರೆ.

2019 ರಿಂದ ಬೆಂಗಳೂರಿನ ಮಾಗಡಿ ರಸ್ತಯೆಲ್ಲಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದರು. ಇವರ ಪ್ರಾಥಮಿಕ ಶಿಕ್ಷಣವಾಗಿದ್ದು ನಾಗರಕಟ್ಟೆಯಲ್ಲಿಯೇ. ನಂತರದ ಪ್ರೌಢಶಿಕ್ಷಣ ಅಂತೋಣಿ ಶಾಲೆ, ಮಂಗಳೂರಿನ ಖಾಸಗಿ ಶಾಲೆಯಲ್ಲಿ ಪಿಯುಸಿ ಮತ್ತು ಎಂಬಿಬಿಎಸ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಇದೀಗ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಇನ್ನು ದಾವಣಗೆರೆಯ ಅವಿನಾಶ್ ಐಎಎಸ್ ಆಲ್ ಇಂಡಿಯಾ ರ್ಯಾಂಕ್ ನಲ್ಲಿ 31ನೇ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಅವಿನಾಶ್ ದಾವಣಗೆರೆಯ ಲಾಯರ್ ರಸ್ತೆಯ ಸ್ಮಿತಾ ಮತ್ತು ವಿಠಲ್ ರಾವ್ ಪುತ್ರ. ಕೇವಲ 25ನೇ ವರ್ಷಕ್ಕೆ ಅದ್ಭುತವಾದ ಸಾಧನೆ ಮಾಡಿದ್ದಾರೆ. ಅವಿನಾಶ್ ಬೆಂಗಳೂರಿನಲ್ಲಿಯೇ ಕೋಚಿಂಗ್ ಪಡೆದಿದ್ದು, ಪ್ರಾಥಮಿಕ ಶಿಕ್ಷಣ – ದಾವಣಗೆರೆ  ಬಾಪೂಜಿ ಸ್ಕೂಲ್ , ಹೈಸ್ಕೂಲ್  ತೋಳಹುಣಸೆ  ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಇಂಗ್ಲೀಷ್  ಮೀಡಿಯಂ  ರೆಸಿಡೆನ್ಸಿಯಲ್  ಸ್ಕೂಲ್ , ದವನ್ ಪಿ ಯು ಕಾಲೇಜ್ ನಲ್ಲಿ ಪಿ ಯುಸಿ ಕಾಮರ್ಸ್ ವ್ಯಾಸಂಗ ಮಾಡಿ, ನಂತರ  ಕ್ಲಾಟ್ ಎಕ್ಸಾಂ ಬರೆದು ಆಲ್ ಇಂಡಿಯಾ ಲೆವಲ್ ನಲ್ಲಿ 19 ನೇ ರ್ಯಾಂಕ್ ಪಡೆದು  ಇಂಡಿಯನ್ ನ್ಯಾಷನಲ್ ಲಾ ಸ್ಕೂಲ್ ಸೇರಿದ ಅವಿನಾಶ್  ಐದು ವರ್ಷಗಳ ಲಾ ಡಿಗ್ರಿಯನ್ನು ಪಡೆದಿದ್ದಾರೆ. ನಂತರ ಯುಪಿಎಸ್ ಸಿ ಪರೀಕ್ಷೆಗೆ ಇನ್ ಸೈಟ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ಮೊದಲ ಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು  ಸಾಧನೆಗೆ ಪಾತ್ರರಾಗಿದ್ದಾರೆ.

Rank ಪಡೆದ ರಾಜ್ಯದ 24 ಅಭ್ಯರ್ಥಿಗಳು.

1.ಅವಿನಾಶ್ – ದಾವಣಗೆರೆ (31ನೇ Rank )
2.ಬೆನಕ ಪ್ರಸಾದ್ – ಚಿತ್ರದುರ್ಗ (92ನೇ Rank )
3.ನಿಖೀಲ್ ಬಸವರಾಜ್ ಪಾಟೀಲ್ (139ನೇ Rank )
4.ವಿನಯ್ ಕುಮಾರ್ ಗದ್ಗೆ (151ನೇ Rank )
5.ಚಿತ್ತರಂಜನ್ (155ನೇ Rank )
6.ಮನೋಜ್ ಕುಮಾರ್ (157ನೇ Rank )
7.ಅಪೂರ್ವ ಬಸೂರ್ (191ನೇ Rank )
8.ನಿತ್ಯಾ ಆರ್ (207ನೇ Rank )
9.ಮಂಜನಾಥ್ ಆರ್ (219ನೇ Rank )
10.ರಾಜೇಶ್ ಪೊನ್ನಪ್ಪ (222ನೇ Rank )
11.ಸಾಹಿತ್ಯ ಅಲದಕಟ್ಟಿ (250ನೇ Rank )
12.ಕಲ್ಪಶ್ರೀ ಕೆ. ಆರ್ (291ನೇ Rank )
13.ಅರುಣ್ ಎಂ (308ನೇ Rank )
14.ದೀಪಕ್ ರಾಮಚಂದ್ರ ಸೇಠ್ (311ನೇ Rank )
15.ಹರ್ಷವರ್ಧನ್ ಬಿ.ಜೆ (318ನೇ Rank )
16.ವಿನಯ್ ಕುಮಾರ್ ಡಿ ಹೆಚ್ (352ನೇ Rank )
17.ಮೇಘನಾ ಕೆ.ಟಿ (425ನೇ Rank )
18.ಅವಿನಂದನ್ ಬಿಎಂ (455ನೇ Rank )
19.ಸವಿತಾ ಗೋಯಲ್ (479ನೇ Rank )
20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ Rank )
21.ಚೇತನ್ ಕೆ (532ನೇ Rank )
22.ಶುಭಂ ಪ್ರಕಾಶ್ (568ನೇ Rank )
23.ಪ್ರಶಾಂತ್ ಕುಮಾರ್ ಬಿ ಒ (641ನೇ Rank )
24.ಸುಚಿನ್ ಕೆ ವಿ (682ನೇ Rank )

UPSC ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್ – upsc.gov.in ಗೆ ಭೇಟಿ ನೀಡಿ.

 

Share This Article
Leave a Comment

Leave a Reply

Your email address will not be published. Required fields are marked *