ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂಭತ್ತು ದಿನಗಳು ಮಾತ್ರ ಬಾಕಿ ಇದೆ. ಈ ಬೆನ್ನಲ್ಲೆ ನಟ ಉಪೇಂದ್ರ ಅವರು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ನಟ ಉಪೇಂದ್ರ ತಮ್ಮ ಅಭ್ಯರ್ಥಿಗಳನ್ನು ಜನರಿಗೆ ತೋರಿಸಿದ್ದಾರೆ.
110 ಜನ ನಾಮಿನೆಷನ್ ಮಾಡಿದ್ದಾರೆ. ಇದು ವಿಚಾರಗಳ ಪ್ರಚಾರ ಎಂದಿದ್ದಾರೆ ಉಪೇಂದ್ರ ಅವರು. ಮೊದಲಿನಿಂದ ಏನು ಹೇಳಿದ್ದೀನೋ ಇವತ್ತು ಅದೇ ಹೇಳುತ್ತಾ ಇದ್ದೀನಿ. ರಾಜಕೀಯ ಮಾಡೋದು ಬೇಡ. ಕಾಯಕ ಸಂಸ್ಕೃತಿ ಬರಬೇಕು. ನಾಯಕ ಸಂಸ್ಕೃತಿ ಬೇಡ. ನಿಮ್ಮ ತಲೆಯಲ್ಲಿರುವುದನ್ನು ಎಲ್ಲವನ್ನು ತೆಗೆದು ಹಾಕಿ. ನಿಮ್ಮ ಕ್ಷೇತ್ರದ ಜನರಿಗೆ ಏನು ಬೇಕು ಎಂಬುದು ಅವರಿಗೆ ಗೊತ್ತು. ಪ್ರಚಾರಕ್ಕೆ ಹೋಗ್ತಾ ಇಲ್ಲ. ಕೆಲವೊಂದು ಹಳ್ಳಿಗಳಲ್ಲಿ ಹೇಳ್ತಾರೆ. ನೀವ್ಯಾಕೆ ಬರ್ತೀರಾ. ನಾವೇ ಪ್ರಚಾರ ಮಾಡ್ತೀವಿ ಅಂತ. ಅದಕ್ಕಿಂತ ಮತ್ತೊಂದು ಖುಷಿ ಇಲ್ಲ. ಒಂದು ಕಾಲದಲ್ಲಿ ಪಕ್ಷ ನೋಡಿ ವೋಟು ಹಾಕ್ತಾ ಇದ್ರು. ಈಗ ವ್ಯಕ್ತಿ ನೋಡಿ ವೋಟ್ ಹಾಕ್ತಾರೆ. ಸಮಾಜ ಸೇವೆ ಅನ್ನೋದು ಪರ್ಸನಲ್ ಅದನ್ನೆಲ್ಲಾ ಇಟ್ಟುಕೊಂಡು ರಾಜಕೀಯ ಮಾಡಬಾರದು.
ನಾನೇನಾದ್ರೂ ಒಂದು ಮೆಸೇಜ್ ಮಾಡುದ್ರೆ ಪ್ರಜಾಕೀಯ ಬೇಡ ಎನ್ನುವವರು ಬಂದು ಕಮೆಂಟ್ ಹಾಕ್ತಾರೆ. ಬೇಕು ಎನ್ನುವವರು ಸುಮ್ಮನೆ ಇರುತ್ತಾರೆ. ಹಳೆ ಪಕ್ಷಗಳ ರೀತಿಯಾದಂತ ಪ್ರಚಾರವೇ ಬೇಕಾ. ಇಲ್ಲ ಪ್ರಜಾಕೀಯದಂತ ರೀತಿ ನೀತಿ ಬೇಕಾ ಅನ್ನೋದನ್ನ ನೀವೇ ಯೋಚನೆ ಮಾಡಿ ಎಂದಿದ್ದಾರೆ.