Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೆಬ್ರವರಿ 7 ಕ್ಕೆ ಅನ್ಲಾಕ್ ರಾಘವ ಚಿತ್ರ ರಾಜ್ಯದಾದ್ಯಂತ ಬಿಡುಗಡೆ : ಅವಿನಾಶ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಜ. 31 : ಚಿತ್ರದ ನಾಯಕನಿಗೆ ಯಾವುದೇ ರೀತಿಯ ಬೀಗಗಳನ್ನು ಕೈಗೆ ಸಿಗುವ ವಸ್ತುಗಳನ್ನು ಬಳಸಿ ಸಲೀಸಾಗಿ ಅನ್‌ಲಾಕ್ ಮಾಡುವ ಟ್ಯಾಲೆಂಟ್ ಇರುತ್ತದೆ. ಆದರೆ, ಲೈಫ್ ಎಂಬ ಜರ್ನಿಯಲ್ಲಿ ಅವನು ಲಾಕ್ ಆದಾಗ, ಹೇಗೆ ಅದನ್ನು ಅನ್‌ಲಾಕ್ ಮಾಡಿಕೊಂಡು ಹೊರಬರುತ್ತಾನೆ ಎನ್ನುವುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ ಎಂದು ಐಪ್ಲೆಕ್ಸ್‌ನ ಅವಿನಾಶ ತಿಳಿಸಿದ್ದಾರೆ.

ಚಿತ್ರದುರ್ಗ ಪತ್ರಕರ್ತರ ಭವನದಲ್ಲಿ ಸುದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 7 ಕ್ಕೆ ಅನ್ಸಾಕ್ ರಾಘವ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ರಾಮಾ ರಾಮಾ ರೇ ಖ್ಯಾತಿಯ ಡಿ.ಸತ್ಯಪ್ರಕಾಶ್ ಕಥೆ, ಚಿತ್ರಕತೆ ಬರೆದಿದ್ದಾರೆ. ರಾಜು ಜೇಮ್ಸ್ ಬಾಂಡ್ ಫೇಮ್‌ನ ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಮತ್ತು ಐಪ್ಲೆಕ್ಸ್ ಸಹಯೋಗದಲ್ಲಿ ನಿರ್ಮಾಣ ಆಗಿರೋ ಈ ಸಿನಿಮಾದಲ್ಲಿ ಪ್ರಾಮಿಸಿಂಗ್ ಹೀರೋ ನಮ್ಮ ಮಿಲಿಂದ್ ಗೌತಮ್ ಮತ್ತು ಲವ್ ಮಾಕ್ರೇಲ್ 2 ಖ್ಯಾತಿಯ ಬೆಡಗಿ ರೇಚಲ್ ಡೇವಿಡ್ ಜೊತೆಯಾಗಿ ಅಭಿನಯಿಸಿದ್ದಾರೆ.

ಹಾಸ್ಯ ನಟ ಸಾಧು ಕೋಕಿಲ ಅವರು ಒಂದು ವಿಭಿನ್ನ ಹಾಸ್ಯ ಪಾತ್ರದ ಮೂಲಕ ಕಾಮಿಡಿಯ ಕಚಗುಳಿ ಇಡಲಿದ್ದಾರೆ. ಚಿತ್ರದಲ್ಲಿ 3 ಬ್ಯೂಟಿಫುಲ್ ಹಾಡುಗಳಿವೆ. ಹೃದಯಶಿವ ಅವರು, ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಹಾಗೂ ವಾಸುಕಿ ವೈಭವ್ ಅವರ ಹಾಡುಗಳನ್ನು ಬರೆದಿದ್ದಾರೆ. ವರಾಹ ರೂಪಂ ಹಾಡಿರೋ ಸಾಯಿ ವಿಶ್ವೇಶ್, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅಂಕಿತಾ ಕುಂಡು ಅವರ ಹಿನ್ನೆಲೆ ಗಾಯನ ಇದೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದೆ. ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರುಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ ಎಂದರು.

ಕೋಟೆನಗರಿ ಚಿತ್ರದುರ್ಗದ ಬೆಟ್ಟ, ಗುಡ್ಡ, ರಸ್ತೆ, ಗಲ್ಲಿಗಳು ಹಾಗೂ ಬೆಂಗಳೂರಿನ ಸುಂದರ ತಾಣಗಳು, ಕಲರ್‌ಫುಲ್ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಮುಖ ಪಾತ್ರಗಳಲ್ಲಿ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳು, ಇಂಪಾದ ಹಾಡುಗಳು, ವಿಶೇಷ ಪಾತ್ರದೊಂದಿಗೆ ಸಾಧು ಕೋಕಿಲ ಅವರ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ, ಅದ್ಭುತ ಛಾಯಾಗ್ರಹಣ, ಕಲಾವಿದರ ಮನಮೋಹಕ ಅಭಿನಯ ಹಾಗೂ ಅತ್ಯದ್ಭುತ ನಿರ್ದೇಶನದಿಂದ ಕೂಡಿದೆ ಎಂದರು.

ಒಂದು ಕಂಪ್ಲೇಟ್ ಮನರಂಜನಾ ಪ್ಯಾಕೇಜ್ ’ಅನ್‌ಲಾಕ್ ರಾಘವ’. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಸಾಕಷ್ಟು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ’ರಾಘವ ರಾಘವ’ ಹಾಡು ಇನ್ನಾಗ್ರಾಮ್ ನಲ್ಲಿ ಟ್ರೆಂಡಿಂಗ್ನಲ್ಲಿದೆ. ಕೇರಳ ಮತ್ತು ತೆಲುಗುನಲ್ಲೂ ಸಿನಿಮಾ ರಿಲೀಸ್ ಮಾಡಿ ಅಂತ ಬೇಡಿಕೆ ಬಂದಿದೆ. ತಮ್ಮ ಮೊದಲ ಸಿನಿಮಾ ’ವೀಕೆಂಡ್’ ನಲ್ಲೇ ಹಿರಿಯ ನಟ ಅನಂತ್ ನಾಗ್ ಅವರೊಂದಿಗೆ ಪರದ ಹಂಚಿಕೊಂಡು ಅದ್ಭುತ ಅಭಿನಯದಿಂದ ನಿಸಿ ಪ್ರೇಕ್ಷಕರ ಮನ ಗೆದ್ದಿರುವ ಚಂದನವನದ ಭರವಸೆಯ ನಾಯಕ ಮಿಲಿಂದ್ ಗೌತಮ್. ಅನ್‌ಲಾಕ್ ರಾಘವ ಚಿತ್ರದಲ್ಲಿ ನಾಯಕನಾಗಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಲವ್ ಮಾಕ್ರೇಲ್ 2 ಬೆಡಗಿ ರೇಚಲ್ ಡೇವಿಡ್, ಮಿಲಿಂದ್‌ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿ ತೆರೆ ಮೇಲೆ ಮೋಡಿ ಮಾಡಲಿದೆ. ’ಅನ್‌ಲಾಕ್ ರಾಘವ’ ಚಿತ್ರ ಆರಂಭದಿಂದ ಕೊನೆವರೆಗೂ ಪ್ರೇಕ್ಷಕರಿಗೆ ಪೈಸಾ ವಸೂಲ್ ಅನುಭವ ನೀಡುವುದಂತೂ ಗ್ಯಾರಂಟಿ ಎಂದಿದ್ದಾರೆ.

ಗೋಷ್ಟಿಯಲ್ಲಿ ನಾಯಕ ಮಿಲಿಂದ್ ಗೌತಮ್, ಮಯೂರ ಮೋಷನ್ ಪಿಕ್ಚರ್ಸ್‌ನ ಸುದೀಂದ್ರ, ರಾಘವೇಂದ್ರ ಕೀರ್ತಿ, ಧರ್ಮಂದ್ರೆ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...