Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಯುಗಾದಿ-ರಂಜಾನ್ ಸಂಭ್ರಮ ; ಚಿಕನ್- ಮಟನ್ ಬೆಲೆ ಏರಿಕೆ

Chiken
---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 22 : ಜಿಲ್ಲೆಯಾದ್ಯಂತ ಯುಗಾದಿ ಹಾಗೂ ರಂಜಾನ್ ಹಬ್ಬದ ಸಂಭ್ರಮ ಮುಂದುವರೆದಿದೆ. ಹಬ್ಬದ ಸಂದರ್ಭದಲ್ಲಿ ಚಿಕನ್ ಮತ್ತು ಮಟನ್ ಸವಿಯುವುದು ವಿಶೇಷ. ಎರಡೂ ದೊಡ್ಡ ಹಬ್ಬಗಳು ಒಟ್ಟಿಗೆ ಬಂದದ್ದರಿಂದ ಮಟನ್ ಮತ್ತು ಚಿಕನ್ ಗೆ ಬೇಡಿಕೆ ಹೆಚ್ಚಾಗಿದೆ.

ಶನಿವಾರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಚಿಕನ್ ಮತ್ತು ಮಟನ್ ಖರೀದಿಸಿ ಹಬ್ಬವನ್ನು ಸಂಭ್ರಮಿಸಿದರು. ಇಂದು ಭಾನುವಾರವಾದ್ದರಿಂದ ಹಿಂದೂಗಳ ಹಬ್ಬ ಯುಗಾದಿ ನಂತರ ಮಾಂಸ ಸವಿಯುವ ವಾಡಿಕೆಯಿದೆ. ಕುಟುಂಬದವರು, ಬಂಧು-ಮಿತ್ರರೊಂದಿಗೆ ಸೇರಿ ಮಾಂಸದೂಟ ಸವಿಯುವ ಪರಂಪರೆಯ ಹಿನ್ನೆಲೆ ಮಾಂಸ ಖರೀದಿಸಲು ಜನರು ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.


ಮಟನ್ ಹಾಗೂ ಚಿಕನ್ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆ ಕೂಡ ಏರಿಕೆಯಾಗಿದೆ. ಸಾಮಾನ್ಯವಾಗಿ ₹600- 650 ಇದ್ದ ಮಟನ್ ದರ ಇಂದು ₹800 – 850 ರವರೆಗೆ ಏರಿಕೆಯಾಗಿದೆ. ಚಿಕನ್ ದರ ಈ ಮೊದಲು 200 ರೂಪಾಯಿ ಗಳಿದ್ದು ಇಂದು ಮಾತ್ರ 240 ರಿಂದ 260 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಕೆಲವೆಡೆ ಇನ್ನಷ್ಟು ದರ ಹೆಚ್ಚಳ ಕಂಡುಬಂದಿದೆ.

ನಾಟಿ ಕೋಳಿ ಒಂದು ಕೆ.ಜಿ.ಗೆ 400 ರೂಪಾಯಿ ಇದ್ದದ್ದು ಈಗ 600 ರೂಪಾಯಿಗೆ ಏರಿಕೆಯಾಗಿದೆ. ನಾಟಿ ರೆಡಿ ಚಿಕನ್ ಕೆಜಿಗೆ ಮೊದಲು 600 ಇದ್ದು ಈಗ 800 ರೂಪಾಯಿ ಆಗಿದೆ.

ನಗರದ ಸಂತೇಪೇಟೆ ಮೈದಾನದ ಚಿಕನ್ ಮಟನ್ ಮಾರುಕಟ್ಟೆ, ಗೋಪಾಲಪುರ ರಸ್ತೆ, ಜೋಗಿಮಟ್ಟಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನರು ಮಾಂಸ ಖರೀದಿಸಲು ಮುಗಿಬಿದ್ದರು. ಬೆಳಿಗ್ಗೆ 7:30 ರ ವೇಳೆಗಾಗಲೇ ಜನರು ಮಾಂಸ ಖರಿದಿಸಲು ಬಂದಿದ್ದರು. ಸಮಯ ಕಳೆದಂತೆ ಹೆಚ್ಚು ಜನರು ಬಂದದ್ದರಿಂದ ಸರತಿ ಸಾಲಿನಲ್ಲಿ ನಿಂತು ಚಿಕನ್ ಮತ್ತು ಮಟನ್ ಖರೀದಿಸಿದರು. ಇದರ ಜೊತೆಗೆ ನಿಂಬೆಹಣ್ಣು, ಶುಂಠಿ, ಪುದೀನ ಮತ್ತು ಕೊತ್ತುಂಬರಿ ಸೊಪ್ಪು ಕೂಡಾ ಖರೀದಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ‘ಗುಡ್ಡೆ ಮಾಂಸ’ಕ್ಕೆ ವಿಶೇಷ ಬೇಡಿಕೆ ಇದೆ. ಮಾಳಪ್ಪನಹಟ್ಟಿ, ಮೆದೇಹಳ್ಳಿ, ಮದಕರಿಪುರ, ಗೋನೂರು, ತುರುವನೂರು, ಹಾಯ್ಕಲ್ ಮುಂತಾದ ಗ್ರಾಮಗಳಲ್ಲಿ ಮುಂಜಾನೆಲೇ ಕುರಿ-ಮೇಕೆ ಕತ್ತರಿಸಿ ಗುಡ್ಡೆ ಮಾಡಲಾಗಿದ್ದು, ಜನರು ದೊಡ್ಡ ಸಂಖ್ಯೆಯಲ್ಲಿ ಖರೀದಿಗೆ ಆಗಮಿಸಿದ್ದಾರೆ. ಹಳ್ಳಿಗಳಲ್ಲಿ ಮಟನ್ ಒಂದು ಕೆಜಿಗೆ 600 – 700 ರೂಪಾಯಿಗಳವರೆಗೂ ಮಾರಾಟವಾಯಿತು.
ಈ ಬಾರಿ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಿ ಕೋಳಿ ವಿಶೇಷ ಬೇಡಿಕೆ ಕಂಡುಬಂದಿದೆ. ಆರೋಗ್ಯದ ದೃಷ್ಟಿಯಿಂದ ನಾಟಿ ಹಾಗೂ ಜವಾರಿ ಆಹಾರಕ್ಕೆ ಜನರು ಹೆಚ್ಚು ಆದ್ಯತೆ ನೀಡುತ್ತಿರುವುದು ಗಮನಾರ್ಹ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now