ಪ್ರಕೃತಿಯ ಸಿರಿಮುಡಿಗೆ
ಕಳೆಕಟ್ಟಿದೆ
ಪ್ರಕೃತಿಯೇ ತೋರಣ ಕಟ್ಟಿ
ಸಜ್ಜಾಗಿ ನಿಂತಿದೆ
ಎಲ್ಲೆಲ್ಲೂ ನವೋಲ್ಲಾಸ
ನವಚೈತನ್ಯ ತುಂಬಿದೆ
ಮಾವು-ಬೇವು ಹಚ್ಚಹಸಿರು
ಹೊತ್ತು ಸಾಗಿದೆ
ನವ ವಸಂತನ
ಆಗಮನ
ದುಂಬಿಯ ಝೇಂಕಾರ
ಚಂದ್ರಮಾನ
ನವ ವಧುವಿನಂತೆ
ನಿಸರ್ಗದ ಶೃಂಗಾರ
ತನ್ನ ನಲ್ಲವಸಂತನಾಗಮನದ
ಕಾತುರ
ಅನ್ನದಾತನ ಮೊಗದಲಿ
ಮುಗುಳ್ನಗೆಯ ಹೊಂಬೆಳಕು
ನೂತನ ವರ್ಷಾರಂಭದ
ಯುಗಾದಿಯ ಹೊಸಬೆಳಕು
ಸೃಷ್ಟಿಕರ್ತ ಬ್ರಹ್ಮದೇವ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ
ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ
ಪಟ್ಟಾಭಿಷೇಕವಾದ ಸುದಿನ
ಮನೆಮಂದಿಯೆಲ್ಲ
ನಸುಕಿನಲ್ಲೆದ್ದು
ಅಭ್ಯಂಜನ ಸ್ನಾನದಿಂದ
ಮಿಂದೆದ್ದು
ಮನೆಯ ಬಾಗಿಲಿಗೆ ಮಾವಿನ ಎಲೆ ಬೇವಿನ ಎಲೆಯ ತೋರಣ
ಮನೆಯೊಳಗೆ
ಕಡಲೆಬೇಳೆ ಹೋಳಿಗೆ ಹೂರಣ
ಯುಗಾದಿ ಎಂದರೆ
ಹೊಸತನ ಸಂಕೇತ
ಪ್ರಕೃತಿಯಲ್ಲಿ ಸಂವತ್ಸರದಲ್ಲಿ
ಕಾಣುವೆವು ಹೊಸತನ
ಬೇವು-ಬೆಲ್ಲ
ಸುಖ ದುಃಖಗಳ ಸಂಕೇತ
ಎರಡನ್ನೂ ಸಮಾನವಾಗಿ ಸ್ವೀಕರಿಸ ಬೇಕಂತ
ಬಾಲಾಜಿ, ನಾಗಲಕ್ಷ್ಮಿ ಹಾರ್ಡ್ವೇರ್