ಸುದ್ದಿಒನ್,ಆಗಸ್ಟ್.9: ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯುವ ಅಥ್ಲೀಟ್ ಶಹನವಾಜ್ ಖಾನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಮೆರಿಕದ ಯೂಜಿನ್‌ನಲ್ಲಿರುವ ಹೇವಾರ್ಡ್ ಫೀಲ್ಡ್‌ನಲ್ಲಿ ನಡೆದ ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 18 ವರ್ಷದ ಶಹನವಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಯು-20 ವಿಶ್ವ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ಶಹನವಾಜ್, 7.84 ಮೀಟರ್ ದೂರ ಜಿಗಿಯುವ ಮೂಲಕ ಮೂರನೇ ಸ್ಥಾನ ಪಡೆದು ಪೋಡಿಯಂ ಏರಿದರು. ಈ ಸ್ಪರ್ಧೆಯಲ್ಲಿ ಇಟಲಿಯ ಡೇನಿಯಲ್ ಇಂಜೋಲಿ (7.97 ಮೀ) ಚಿನ್ನದ ಪದಕ ಹಾಗೂ ಆಸ್ಟ್ರೇಲಿಯಾದ ಮೇಸನ್ ಮೆಕ್‌ಗ್ರೋಡರ್ (7.96 ಮೀ) ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ಅಂಜು ಬಾಬಿ ಜಾರ್ಜ್ 2003ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ನಂತರ, ವಿಶ್ವಮಟ್ಟದ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಯೂ ಶಹನವಾಜ್‌ಗೆ ಸಲ್ಲುತ್ತದೆ.
ಈ ಋತುವಿನಲ್ಲಿ ಶಹನವಾಜ್‌ಗೆ ಇದು ಎರಡನೇ ಐತಿಹಾಸಿಕ ಪದಕವಾಗಿದೆ. ಇದಕ್ಕೂ ಮೊದಲು ಅವರು ಏಷ್ಯನ್ ಯು-20 ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿಯೂ 7.84 ಮೀಟರ್ ಜಿಗಿದು ಚಿನ್ನದ ಪದಕವನ್ನು ಜಯಿಸಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 8.30 ಮೀಟರ್ ಜಿಗಿಯುವ ಮೂಲಕ ಯುವ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.


🚨 Watch Shahnavaz win BRONZE at the World Athletics U20 Championships 2026.
He won bronze in the men’s long jump final with a best attempt of 7.84m, which came in his 3rd attempt.
No athlete in the field was able to breach the 8m mark.
🥇 Daniele Inzoli (Italy) – 7.97m
🥈… pic.twitter.com/iWzPLb7cFF— nnis Sports (@nnis_sports) August 9, 2026










