ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಕೆಲ ದಿನಗಳಿಂದ ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಇಂದು ಸಂಜೆ ಸುರಿದ ಮಳೆ ತಂಪೆರೆದಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವಿತ್ತು. ದಿನವಿಡೀ ಸೆಖೆ ಮತ್ತು ಧಗೆಯಿಂದ ಬೇಸತ್ತಿದ್ದ ಜನರಿಗೆ ಸಂಜೆ ದಿಢೀರನೆ ತಂಪಾದ ಗಾಳಿಯೊಂದಿಗೆ ಸುರಿದ ಮಳೆ ನಿರಾಳತೆ ತಂದಿದೆ. ರಸ್ತೆಗಳು ಮಳೆನೀರಿನಿಂದ ತೋಯ್ದಿದ್ದು, ಬಿಸಿಲಿನ ತಾಪ ಕಡಿಮೆಯಾಗಿ ಹವಾಮಾನ ಆಹ್ಲಾದಕರವಾಗಿದೆ.

ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಕೆಲಕಾಲ ಪರದಾಡಿದರೂ, ಸುಡುವ ಬೇಗೆಯಿಂದ ಮುಕ್ತಿ ಸಿಕ್ಕಿದ್ದಕ್ಕೆ ನಗರದ ಜನತೆ ಕೂಲಾಗಿದ್ದಾರೆ.










