Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎರಡೂವರೆ ವರ್ಷ ಆಗಲಿ ಅಂತ ಹೈಕಮಾಂಡ್ ಗೆ ಹೇಳಿದ್ದೆ : ಅಧಿಕಾರದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

---Advertisement---

ಚಾಮರಾಜನಗರ: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೆ ಅಧಿಕಾರ ಹಂಚಿಕೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಕೂಡ ಈ ಅವಧಿಯನ್ನು ಪೂರ್ಣ ಮಾಡಲೇಬೇಕೆಂಬ ಆಸೆಯನ್ನ ಹೊತ್ತಿದ್ದಾರೆ‌. ಇದರ ನಡುವೆ ಇನ್ನು ಎಷ್ಟು ಬಜೆಟ್ ಮಂಡನೆ ಮಾಡ್ತೀವಿ ಎಂಬುದನ್ನ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು 2028 ರ ಚುನಾವಣೆಯ ನೇತೃತ್ವದ ಬಗ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ. ನೋಡೋಣಾ ಇನ್ನು ಚುನಾವಣೆ ಬರಲಿ ಎಂದಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ್ದು, ಜನ ಎಲ್ಲಿಯವರೆಗೂ ಅಪೇಕ್ಷೆ ಪಡುತ್ತಾರೆ ಅಲ್ಲಿಯವರೆಗೂ ಬಜೆಟ್ ಮಂಡನೆ ಮಾಡ್ತೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಆಗಿರುವ ದರೋಡೆ ದೊಡ್ಡಮಟ್ಟದ್ದು. ಈ ದರೋಡೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸುಳಿವು ಸಿಕ್ಕಿದೆ. ಅವರ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಕೋರರು ಯಾರಿದ್ದಾರೆ ಅವರನ್ನು ಅರೆಸ್ಟ್ ಮಾಡಲು ಹೇಳಿದ್ದೇವೆ. ರಾಜ್ಯದಲ್ಲಿ ಮಳೆಯಿಂದಾದ ಸಮಸ್ಯೆಗೆ ಪರಿಹಾರ ಕೊಡಲು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರಕ್ಕೆ ಸೂಚಿಸಿದ್ದೇನೆ ಅಂತ ತಿಳಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಇದರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಜನ ನಂಗೆ ಐದು ವರ್ಷ ಅಧಿಕಾರ ಮಾಡಬೇಕು ಅಂತ ಆಶೀರ್ವಾದ ಮಾಡಿದ್ದಾರೆ. ನಾವೀಗ ಅದನ್ನ ಈಡೇರಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯಾವ ಕ್ರಾಂತಿಯೂ ಇಲ್ಲ. ಕ್ರಾಂತಿ ಅಂತ ಹುಟ್ಟು ಹಾಕಿದವರೇ ಮಾಧ್ಯಮದವರು. ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ. ಐದು ವರ್ಷ ಏನು ಅಧಿಕಾರ ಕೊಟ್ಟಿದ್ದಾರೆ, ಐದು ವರ್ಷ ಆದ್ಮೇಲೆ ಚುನಾವಣೆ ನಡೆಯುತ್ತೆ, ಆಗಲೂ ನಾವೇ ಗೆಲ್ಲುತ್ತೀವಿ. ಎರಡೂವರೆ ವರ್ಷ ಆಗಲಿ ಆಮೇಲೆ ನೋಡೋಣಾ ಅಂತ ಹೈಕಮಾಂಡ್ ಗೆ ಹೇಳಿದ್ದೆ ಅದರ ಮೇಲೆ ಚರ್ಚೆಗಳು ಹುಟ್ಟುಕೊಂಡಿವೆ. ರಿಶಫಲ್ ಬಗ್ಗೆ ಮಾತನಾಡಿದ್ದೆ ಅದರ ಮೇಲೆ ಚರ್ಚೆಗಳು ಹುಟ್ಟುಕೊಂಡಿವೆ ಅಷ್ಟೇ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...