Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ತುಮಕೂರು ಸ್ಟೇಡಿಯಂಗೆ ಮಹಾತ್ಮ ಗಾಂಧಿ ಹೆಸರು ತೆಗೆದು ಪರಮೇಶ್ವರ್ ಹೆಸರು ನಾಮಕರಣ : ಭುಗಿಲೆದ್ದ ಆಕ್ರೋಶ..!

---Advertisement---

ತುಮಕೂರು: ಜಿಲ್ಲೆಯ ಕ್ರೀಡಾಂಗಣಕ್ಕೆ‌ ಈ ಮೊದಲು ಮಹಾತ್ಮ ಗಾಂಧಿ ಎಂಬ ಹೆಸರನ್ನಿಡಕಾಗಿತ್ತು. ಆದರೆ ಈಗ ಆ ಹೆಸರಿನ ಬದಲಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರ ಹೆಸರನ್ನ ಇಡಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಾ ಇದೆ. ಯಾಕಂದ್ರೆ ನರೇಗಾ ಯೋಜನೆಯಲ್ಲಿ ಮಹತ್ಮಾ ಗಾಂಧಿ ಹೆಸರನ್ನ ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಿರುವಾಗ ತುಮಕೂರಿ‌ನಲ್ಲಿ ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ ಗೃಹ ಸಚಿವರ ಹೆಸರಿಟ್ಟಿದ್ದು, ಎಷ್ಟು ಸರಿ ಎಂಬ ವಿರೋಧವನ್ನ ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ನಡೆಯೋದು ಇಲ್ಲಿನೆ. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಯಾವುದೇ ಅಧಿಕೃತ ಹೆಸರನ್ನ ಇಟ್ಟಿರಲಿಲ್ಲ. ಆದರೂ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣ ಎಂದೇ ಕರೆಯಲಾಗುತ್ತಿತ್ತು. ಆದರೆ ಈಗ ಒಳಾಂಗಣ ಕ್ರೀಡಾಂಗಣಕ್ಕೆ ಇದ್ದಕ್ಕಿದ್ದ ಹಾಗೇ ಗೃಹ ಸಚಿವರ ಹೆಸರನ್ನ ಇಡಲಾಗಿದೆ.

ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಎಂದು ನಾಮಫಲಕ ಹಾಕಲಾಗಿದೆ. ಇದೀಗ ಈ ನಾಮಫಲಕ ವಿವಾದಕ್ಕೆ ಈಡಾಗಿದೆ. ಜಿಲ್ಲಾ ಬಿಜೆಪಿ ಘಟಕ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಪರಮೇಶ್ವರ್ ಅವರ ಹೆಸರನ್ನು ತೆಗೆದು ಹಾಕುವಂತೆ ಒತ್ತಾಯಿಸಿದೆ. ಮತ್ತೆ ಮಹಾತ್ಮಾ ಗಾಂಧಿ ಅವರ ಹೆಸರನ್ನೇ ಹಾಕುವಂತೆ ಒತ್ತಾಯಿಸಿದೆ. ಇದೇ ಜನವರಿ 16ರಿಂದ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಇಲ್ಲದೇ ಇದ್ದರೂ, ಅಧಿಕಾರಿಗಳು ನಾಮಫಲಕ ಬದಲಾಯಿಸಿರೋದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...