Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂಪೂರ್ಣ ಬಾಲ್ಯ ವಿವಾಹ ತಡೆಗೆ ಪ್ರಯತ್ನಿಸಿ : ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ

Facebook
Twitter
Telegram
WhatsApp

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ .ಅಕ್ಟೋಬರ್ .11: ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು. ತರಬೇತಿಯಲ್ಲಿ ಹೆಣ್ಣು ಮಕ್ಕಳ ಎದುರಿಸುವ ಎಲ್ಲಾ ರೀತಿಯಲ್ಲಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕು. ಇದರ ಜೊತೆಯಲ್ಲಿ  ತರಬೇತಿಯಲ್ಲಿ ಮಕ್ಕಳ ಶ್ರಯಸ್ಸು, ಅಭಿವೃದ್ಧಿ, ರಕ್ಷಣೆಗೆ ಬೇಕಾದ ಚಿಂತನೆಗಳು ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ಬಿ.ಎಸ್.ರೇಖಾ ತಿಳಿಸಿದರು.

ಅಂತರಾಷ್ಟ್ರೀಯ  ಹೆಣ್ಣು ಮಗುವಿನ ದಿನಾಚರಣೆ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಜಿ.ಪಂ, ತಾ.ಪಂ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಬುಧವಾರ ಹೊಳಲ್ಕರೆ ಪಟ್ಟಣದ ಸಂವಿಧಾನ ಸೌಧದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗರ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ, ಹಿಂಸೆ, ಶೋಷಣೆ ತಡೆಗಟ್ಟಬೇಕು. ಸಾಮಾಜಿಕ ಶೋಷಣೆಯಿಂದ ಹೆಣ್ಣು ಮಕ್ಕಳನ್ನು ಮುಕ್ತಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕುವ ವಾತಾವರಣ ಸೃಷ್ಠಿಯಾಗಬೇಕು.ಎಲ್ಲಾ ರಂಗದಲ್ಲೂ ಹೆಣ್ಣು ಮಕ್ಕಳು ಎಲ್ಲಾವನ್ನು ಸಾಧನೆ ಮಾಡುತ್ತಿದ್ದಾರೆ.  ಇಂದು ಹೆಣ್ಣು ಮಕ್ಕಳನ್ನು ಕಾಪಾಡುವುದು ಪೋಷಕರಿಗೆ ಸವಾಲಾಗಿದೆ.

ಪೋಷಕರು ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಪಾಲನೆ ಮಾಡುತ್ತಾರೆ. ಆದರೆ ಸಮಾಜದಲ್ಲಿ ನಡೆವ ಅಪರಾಧಗಳ ಚಿಂತಿಸಿಲ್ಲ. ಇದರ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಮಕ್ಕಳನ್ನು ಶಾಲೆಗೆ ಸೇರಿಸಿ ಸುಮ್ಮನಾಗದೆ, ಅಲ್ಲಿನ ಶಿಕ್ಷಕರು, ವ್ಯವಸ್ಥೆ, ಪರಿಸರದ ಬಗ್ಗೆ ಪೋಷಕರು ಸಾದ ಎಚ್ಚರಿಕೆಯಿಂದ ಇರಬೇಕು. ಎಷ್ಟೋ ಪ್ರಕರಣಗಳಲ್ಲಿ ಅತ್ಯಚಾರ ಪರಿಚಯಸ್ಥರಿಂದ ಹಾಗಿವೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಮನೆಯೊಳಗೆ ಮತ್ತು ಹೊರಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ತಿಪ್ಪೇಸ್ವಾಮಿ ಮಾತನಾಡಿ, ದೇಶದ ಜನ ಸಂಖ್ಯೆಯಲ್ಲಿ ಶೇ 46 ರಷ್ಟು ಮಕ್ಕಳಿದ್ದಾರೆ. ಶೇ 67ರಷ್ಟು  ಗ್ರಾಮೀಣ ಪ್ರದೇಶದಲ್ಲಿದ್ದಾರೆ. ದೇಶದಲ್ಲಿ ಬಹುದೊಡ್ಡ ಸಂಪನ್ಮೂಲವನ್ನು ಮಕ್ಕಳ ರಕ್ಷಣೆ ಮಾಡುವುದು ದೊಡ್ಡ ಸವಾಲಾಗಿದೆ. ಬಾಲ್ಯವಿವಾಹ, ಪೋಸ್ಕೋ ಪ್ರಕರಣಗಳು ಹೆಣ್ಣು ಮಕ್ಕಳ ಶೋಷಣೆ ಮಾಡುತ್ತಿವೆ. ಸರಕಾರ ಹೆಣ್ಣು ಮಕ್ಕಳ ರಕ್ಷಣೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಎಲ್ಲಾ ಇಲಾಖೆ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತ ಸೂಚಿಸಿದ್ದರೂ ಅದು ಅಂಕೆ-ಸಂಖ್ಯೆಗಳ ಹಾಳೆಯ ಮೇಲಿದೆ. ಇದರಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಶರವಣನ್, ಮಕ್ಕಳ ಮೇಲಿನ ದೌರ್ಜನ್ಯಗಳು ಕೋವಿಡ್ ನಂತರ ಹೆಚ್ಚಾಗಿವೆ. ಕೋವಿಡ್ ಕಾಲದಲ್ಲಿ ಶೇ300 ರಷ್ಟು ಬಾಲವಿವಾಹ, ಲೈಗಿಂಕ ದೌರ್ಜನ್ಯ ನಡೆದಿದೆ ಎನ್ನುವ ವರದಿ ಇದೆ. ಪ್ರತಿಯೊಬ್ಬರು ಸಾಮಾಜಿಕ ಬದ್ದತೆಯಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಶ್ರಮಿಸಬೇಕು. ಹೆಣ್ಣು ಮಕ್ಕಳನ್ನು ಶೋಷಣಿಯಿಂದ ಮುಕ್ತಗೊಳಿಸಬೇಕೆಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ವಿಜಯ್, ನ್ಯಾಯಾಧೀಶರಾದ ಎಂ.ಪಿ.ಉಮೇಶ್, ನಿರುಪಮ ರೇಣಕಪ್ಪ ಢಂಗ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್, ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಬಾಲನ್ಯಾಯ ಮಂಡಳಿ ಸದಸ್ಯೆ ಸವಿತಾ.ಸಿ. ಯೂನಿಸೆಪ್ ರಾಜ್ಯ ಸಂಯೋಜಕ ರಾಘವೇಂದ್ರ ಭಟ್ ಸೇರಿದಂತೆ ವಿವಿಧ ಇಲಾಖೆ ಮುಖ್ಯಸ್ಥರು ಇದ್ದರು. ‌ಇದೇ ಸಂದರ್ಭದಲ್ಲಿ
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!