ಅತಿಯಾದ ಕೆಮ್ಮು ಕಾಡುತ್ತಿದ್ದರೆ ಇವುಗಳ ಸೇವನೆ ಮಾಡಿ ನೋಡಿ

1 Min Read

ಕೆಲವೊಬ್ಬರಿಗೆ ಕೆಮ್ಮು ಹುಟ್ಟಿದರೆ ಕಡಿಮೆ ಆಗುವುದೇ ಇಲ್ಲ. ಕೆಮ್ಮಿ ಕೆಮ್ಮಿ ದೇಹದ ನರಗಳೆಲ್ಲ ಇನ್ನೇನು ಕಿತ್ತು ಬಂತೇನೋ ಎಂಬಷ್ಟು ಫೀಲ್ ಆಗುತ್ತದೆ. ಮಾತ್ರೆ, ಟಾನಿಕ್ ತೆಗೆದುಕೊಂಡರು ಈ ಕೆಮ್ಮು ಮಾತ್ರ ಕಡಿಮೆಯಾಗಲ್ಲ. ಅಂಥ ಕೆಮ್ಮಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ ಫಾಲೋ ಮಾಡಿ ನೋಡಿ.

* ಕೆಮ್ಮು ಮತ್ತು ಗಂಟಲು ನೋವು ನಿವಾರಿಸುವುದಕ್ಕೆ ನೀವೂ ಜೇನುತುಪ್ಪವನ್ನು ಬಳಕೆ ಮಾಡಿಕೊಳ್ಳಬಹುದು. ಶುಂಠಿ ರಸದೊಂದಿಗೆ ಜೇನುತುಪ್ಪ ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

* ಅನಾನಸ್ ತಿನ್ನುವುದರಿಂದಾನೂ ಕೆಮ್ಮು ಕಡಿಮೆಯಾಗುತ್ತದೆ‌. ಅನಾನಸ್ ನಲ್ಲಿ ಬ್ರೋಮೆಲಿನ್ ಅಂಶವೊಂದು ಕಂಡು ಬರುತ್ತದೆ. ಇದು ಕೆಮ್ಮನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.

* ಪುದೀನ ಕೂಡ ಕೆಮ್ಮನ್ನು ಕಡಿಮೆ ಮಾಡುತ್ತದೆ. ಕೆಮ್ಮು ಹೆಚ್ಚಾಗಿದ್ದರೆ ಪುದೀನಾ ಟೀ ಮಾಡಿಕೊಂಡು ಕುಡಿಯಬಹುದು. ಪುದೀನಾ ಎಲೆಗಳನ್ನು ಬಿಸಿ ನೀರಿಗೆ ಹಾಕಿ ಕುದಿಸಿ, ಅದರ ಹಬೆ ತೆಗೆದುಕೊಳ್ಳಬಹುದು.

* ನಿಮಗೆಲ್ಲಾ ಗೊತ್ತಿರುವಂತೆ ದೊಡ್ಡ ಪತ್ರೆ ಕೆಮ್ಮಿಗೆ ರಾಮಬಾಣವಿದ್ದಂತೆ. ಕೆಮ್ಮು ಹಾಗೂ ಕಫದ ನಿವಾರಣೆಗೆ ದೊಡ್ಡ ಪತ್ರೆ ರಾಮಬಾಣವಿದ್ದಂತೆ. ದೊಡ್ಡಪತ್ರೆಯನ್ನು ಜಜ್ಜಿ ಆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಇದು ಆಂಟಿಬಯೋಟಿಕ್ ಗುಣಗಳಿಂದ ಸಮೃದ್ಧವಾಗಿದೆ.

* ಶುಂಠಿ ಕೆಮ್ಮು ಹೋಗಲಾಡಿಸಲು ಬೆಸ್ಟ್ ಮನೆ ಮದ್ದಾಗಿದೆ. ಇದರಲ್ಲಿ ಔಷಧೀಯ ಗುಣಗಳು ಸಂಪನ್ನವಾಗಿದೆ. ಶುಂಠಿಯೂ ನೈಸರ್ಗಿಕ ಉರಿಯೂತ ನಿವಾರಕವಾಗಿದೆ. ಶುಂಠಿ ಚಹಾ ಕುಡಿಯುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

* ಒಂದು ವೇಳೆ ಕೆಮ್ಮು ದೀರ್ಘಕಾಲದವರೆಗೂ ನಿಮ್ಮನ್ನು ಕಾಡುತ್ತಿದ್ದರೆ ಅರಿಶಿನದ ನೀರು ಬೆಸ್ಟ್ ಮೆಡಿಸಿನ್. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಮ್ಮು ಕಡಿಮೆ ಮಾಡಲು ಅರಿಶಿನದ ಚಹಾ ಅಥವಾ ನೀರು ಕುಡಿಯಿರಿ.

Share This Article
Leave a Comment

Leave a Reply

Your email address will not be published. Required fields are marked *