Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮರಾಠ ಸಮುದಾಯವನ್ನು 3 ಬಿ ಯಿಂದ 2ಎಗೆ ವರ್ಗಾಯಿಸಿ : ಮುಖಂಡರ ಮನವಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್, ಮೊ : 87220 22817

ಚಿತ್ರದುರ್ಗ,(ಡಿ.07) : ಮರಾಠ ಸಮುದಾಯವನ್ನು ಪ್ರವರ್ಗ 3 ಬಿಯಿಂದ 2ಎಗೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮರಾಠ ಸಮುದಾಯದ ಮುಖಂಡರು ಇಂದು ಮನವಿಯನ್ನು ಸಲ್ಲಿಸಿದರು.

ಈಗ ಸರ್ಕಾರ ಕ್ಷತ್ರೀಯ ಮರಾಠ ಸಮಾಜಕ್ಕೆ ನೀಡುತ್ತಿರುವ 3ಬಿಯಿಂದಾಗಿ ಸಮುದಾಯ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಕುಂಠಿತವಾಗಿದೆ. ಪ್ರವರ್ಗ 3ಬಿನಲ್ಲಿ ಅನೇಕ ಜಾತಿ ಮತ್ತು ಉಪ ಜಾತಿ ಹಾಗೂ ಪ್ರಬಲ ಕೋಮುಗಳನ್ನು ಸೇರಿಸಿ ಶೇ.5ರಷ್ಟು ಮೀಸಲಾತಿ ನಿಗಧಿ ಪಡಿಸಲಾಗಿದೆ.

ಸರ್ಕಾರದ ಈ ಮೀಸಲಾತಿ ಪ್ರವರ್ಗ 3ಬಿ ಅಡಿಯಲ್ಲಿ ಒಟ್ಟು ಜನಸಂಖ್ಯೆಯ ಶೈಕ್ಷಣಿಕ ಸಾಮಾಜಿಕ ಸಮಾನತೆ ಇರುವ ಯಾವುದೇ ತರ್ಕವಿಲ್ಲದೆ ಅವೈಜ್ಞಾನಿಕವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಾ ಅಭಿವೃದ್ದಿ ಕ್ಷಿಣಿಸುತ್ತಿದೆ. ಇದರಿಂದ ನಮ್ಮ ಸಮಾಜವನ್ನು 3ಬಿ ಯಿಂದ 2ಎಗೆ ವರ್ಗಾಯಿಸಿ ಆದೇಶವನ್ನು ಹೊರಡಿಸುವಂತೆ ಎಂದು ಆಗ್ರಹಿಸಿದರು.

ಕಳೆದ 2 ದಶಕಗಳಿಂದ ಕಾಲಕಾಲಕ್ಕೆ ಸರ್ಕಾರಗಳಿಗೆ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದೆ. ಇದರ ಬಗ್ಗೆ ಹಲವಾರು ಭಾರಿ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ 2012ರಲ್ಲಿ ಶಂಕರಪ್ಪರವರ ಆಯೋಗದ ವರದಿ ಅನ್ವಯ ಕ್ಷತ್ರೀಯ ಮರಾಠ ಸಮಾಜವನ್ನು 2ಎಗೆ ಸೇರ್ಪಡೆ ಮಾಡುವಂತೆ ವರದಿಯನ್ನು ನೀಡಿತ್ತು.

ಆದರೆ ಕಳೆದ 1ದಶಕ ಕಳೆದರು ಸಹಾ ಸರ್ಕಾರಗಳು ಏನನ್ನು ಕ್ರಮ ತೆಗೆದುಕೊಂಡಿಲ್ಲ ಇದನ್ನು ಸಮಾಜ ಖಂಡಿಸುತ್ತದೆ. ಸರ್ಕಾರ ನಮ್ಮ ಹೋರಾಟಕ್ಕೆ ಮನ್ನಣೆಯನ್ನು ನೀಡದಿದ್ದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗೋಪಾಲರಾವ್ ಜಾಧವ್, ಮಹಿಳಾ ಉಪ ಅಧ್ಯಕ್ಷರಾದ ಶ್ರೀಮತಿ ಉಷಾಬಾಯಿ ಜಾಧವ್, ಉಪಾಧ್ಯಕ್ಷರಾದ ಸುರೇಶ್‍ರಾವ್ ಜಾಧವ್, ಹರೀಶ್‍ರಾವ್ ಜಾಧವ್, ಚಂದ್ರೋಜಿರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗಾಯಕ್‍ವಾಡ್, ಖಂಜಾಚಿ ನೀತೀಶ್ ಜಾಧವ್, ಸಹ ಕಾರ್ಯದರ್ಶೀ ಕೃಷ್ಣೋಜಿರಾವ್ ಮುಖಂಡರಾದ ಲಕ್ಷಣರಾವ್, ವಿದ್ಯಾನಂದ ವಿನಂತ ಜಾಧವ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!