ವರದಿ ಮತ್ತು ಫೋಟೋ ಕೃಪೆ
ಡಾ.ಎಚ್.ಕೆ.ಎಸ್.ಸ್ವಾಮಿ
ಉಪಾಧ್ಯಕ್ಷರು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ,
94830 49830
ಚಿತ್ರದುರ್ಗ : ಏಳು ಸುತ್ತಿನ ಕೋಟೆಯ ಮುಂಭಾಗದಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಬಂದು ತಿಂದು ಬಿಸಾಡುವ ಪ್ಲಾಸ್ಟಿಕ್ ಕವರ್ ಗಳು ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಅವುಗಳನ್ನ ಹಾಕಲು ಒಂದು ಕಸದ ಬುಟ್ಟಿಯ ವ್ಯವಸ್ಥೆ ಮಾಡಿ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ಒತ್ತಾಯಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಪರಿಸರದ ಬಗ್ಗೆ ಕಾಳಜಿಯನ್ನ ಮರೆತಂತಿದೆ. ದಿನನಿತ್ಯ ಕೋಟೆ ವೀಕ್ಷಣೆಗೆಂದು ಬರುವ ಸಾವಿರಾರು ಪ್ರವಾಸಿಗರು, ಹೊರಗಡೆ ಗೇಟಿನ ಮುಂಭಾಗದಲ್ಲಿ ತಿಂದು ಬಿಸಾಡುವ ಪ್ಲಾಸ್ಟಿಕ್ ಕವರ್ ಗಳು, ಸಿಪ್ಪೆಗಳನ್ನ ಹಾಕಲು ಕಸದ ಬುಟ್ಟಿ ವ್ಯವಸ್ಥೆಯನ್ನು ಮಾಡದೆ ಹಾಗೆ ಬಿಟ್ಟಿರುವುದರಿಂದ ತಿಂದ ಎಲ್ಲಾ ಕಸವನ್ನ ರಸ್ತೆಯಲ್ಲಿ ಎಸೆಯುತಿರುವುದರಿಂದ, ಅದು ಗಾಳಿಯಲ್ಲಿ ಹಾರಾಡಿಕೊಂಡು, ತೇಲಾಡಿಕೊಂಡು, ಅಕ್ಕಪಕ್ಕದ ರಸ್ತೆಯ ಮನೆಗಳ ಮುಂದೆ ಬಂದು ಬೀಳುತ್ತಿರುವ ದೃಶ್ಯ ನೋಡುಗರಿಗೆ ಅಸಹ್ಯ ಹುಟ್ಟಿಸುವಂತೆ ಆಗಿದೆ.
ನಗರದ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕಾದಂತ ನಗರ ಸಭೆಯವರಾಗಲಿ, ಕೋಟೆಯ ವ್ಯವಸ್ಥಾಪಕರಾಗಲಿ ಈ ಕಸದ ಬುಟ್ಟಿಯ ಬಗ್ಗೆ ಇನ್ನೂ ಗಮನ ಹರಿಸಿಲ್ಲ. ಹಾಗಾಗಿ ಶೀಘ್ರವಾಗಿ ಅಲ್ಲಿಗೊಂದು ಕಸದ ಬುಟ್ಟಿಗಳನ್ನು ಇಟ್ಟು, ಬಂದ ಟೂರಿಸ್ಟ್ ಗಳಿಗೆ ತಿಂದಾದ ಮೇಲೆ ಕಸವನ್ನ ಅದರಲ್ಲಿ ಹಾಕುವಂತಹ ವ್ಯವಸ್ಥೆ ಮಾಡಿದರೆ, ಕೋಟೆಯ ಮುಂಭಾಗದಲ್ಲಿ ಸ್ವಚ್ಛತೆ ಮತ್ತು ಪರಿಸರ ಸುಂದರವಾಗುವುದು, ಇಲ್ಲವಾದರೆ ಕಸ ಹೊಡೆಯುವವರೆಗೂ ಅಲ್ಲಿ ಕಸವನ್ನು ತುಳಿದುಕೊಂಡೆ ಜನರು ಓಡಾಡುತ್ತಿರುತ್ತಾರೆ.
ಇದರ ಬಗ್ಗೆ ಅಧಿಕಾರಿಗಳು ಶೀಘ್ರವಾಗಿ ಗಮನಹರಿಸಿ ಅಲ್ಲೊಂದಿಷ್ಟು ಕಸದ ಬುಟ್ಟಿಗಳನ್ನ ಇಟ್ಟು ಪರಿಸರ ಕಾಳಜಿಯನ್ನ ತೋರಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.