Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲರೂ ಒಂದೇ ಎಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸಲು ಪ್ರಧಾನಿ ನರೇಂದ್ರಮೋದಿರವರು ಏಕ್‍ ಭಾರತ್ ಶ್ರೇಷ್ಠ ಭಾರತ್ ಘೋಷಣೆ :  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ದೇಶದಲ್ಲಿ ಬೇರೆ ಬೇರೆ ಭಾಷೆ, ಜಾತಿ, ಧರ್ಮ ಆಚಾರ, ವಿಚಾರ, ಆಹಾರ ಪದ್ದತಿಯಿದ್ದರೂ ಎಲ್ಲರೂ ಒಂದೇ ಎಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸುವುದಕ್ಕಾಗಿ ಪ್ರಧಾನಿ ನರೇಂದ್ರಮೋದಿರವರು ಏಕ್‍ಭಾರತ್ ಶ್ರೇಷ್ಠ ಭಾರತ್ ಎನ್ನುವ ಘೋಷ ವಾಕ್ಯವನ್ನು ಮೊಳಗಿಸಿದ್ದಾರೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶ್ಲಾಘಿಸಿದರು.

ನಗರ ಬಿಜೆಪಿ.ಹಾಗೂ ವಿವಿಧ ಭಾಷಿಕರ ಪ್ರಕೋಷ್ಠ ವತಿಯಿಂದ ಕೋಟೆ ಎದುರಿನಲ್ಲಿರುವ ರಾಘವೇಂದ್ರ ಕಾಲೇಜಿನಲ್ಲಿ ಬುಧವಾರ ನಡೆದ ಏಕ್‍ಭಾರತ್ ಶ್ರೇಷ್ಠ ಭಾರತ್ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ದೇಶದ ಎಲ್ಲಾ ಭಾಗಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶ ಒಗ್ಗಟ್ಟಾಗಿದೆ. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಗುರುವನ್ನಾಗಿಸಬೇಕೆಂದು ಪ್ರಧಾನಿ ಕನಸು ಕಂಡಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿರುವ ವಿಭಿನ್ನ ಸಂಸ್ಕøತಿಯನ್ನು ನೃತ್ಯದ ಮೂಲಕ ಪರಿಚಯಿಸುವುದಕ್ಕಾಗಿ ಏಕ್‍ಭಾರತ್ ಶ್ರೇಷ್ಠಭಾರತ್ ಎನ್ನುವ ಪರಿಕಲ್ಪನೆಯಿಟ್ಟುಕೊಂಡಿರುವ ಪ್ರಧಾನಿ ಮೋದಿರವರು ಎಲ್ಲಾ ಜಾರ್ತಿ-ಧರ್ಮದವರನ್ನು ಪರಸ್ಪರ ಬೆಸೆಯುವ ಗುರಿಯಿಟ್ಟುಕೊಂಡಿದ್ದಾರೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಭಾರತದಲ್ಲಿರುವ ಎಲ್ಲಾ ಜಾತಿ, ಧರ್ಮದವರನ್ನು ಏಕತೆಯಲ್ಲಿ ಬೆಸೆಯುವುದಕ್ಕೆ ಕಾರಣಕರ್ತರಾದ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಪ್ರೀತಿಯನ್ನು ಒಂದು ಮಾರ್ಗವೆಂದು ಅಂತಹ ಪ್ರೀತಿಗೆ ಇತರರನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಎಂದು ಪ್ರತಿಪಾದಿಸಿದ್ದರು. ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳು ನೃತ್ಯದ ಮೂಲಕ ಭಾರತದ ಸಂಸ್ಕøತಿ, ಆಚಾರ ವಿಚಾರವನ್ನು ಸಾದರ ಪಡಿಸಿರುವುದು ಹೆಮ್ಮೆಯ ಸಂಗತಿ ಎಂದು ಗುಣಗಾನ ಮಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಸಾಂಸ್ಕøತಿಕ ವೈಶಿಷ್ಠತೆ, ಭಾಷೆಯನ್ನು ಗೌರವಿಸುವ ಮನಸ್ಥಿತಿ ಎಲ್ಲರಲ್ಲಿಯೂ ಮೂಡಿ ಶ್ರೀಮಂತ ಪರಂಪರೆ ರಾಷ್ಟ್ರೀಯತೆಯನ್ನು ಎತ್ತಿಹಿಡಿಯಬೇಕೆಂಬುದು ಪ್ರಧಾನಿ ಮೋದಿರವರ ಆಶಯ, ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ವಿಭಿನ್ನ ವೇಷಭೂಷಣಗಳನ್ನು ಧರಿಸಿ ಸಾಂಸ್ಕøತಿಕ ನೃತ್ಯ ಮಾಡಿರುವುದು ನಿಜಕ್ಕೂ ನಮ್ಮ ದೇಶದ ಸಂಸ್ಕøತಿಯನ್ನು ಎಲ್ಲೆಡೆ ಸಾರುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿರವರ ಹುಟ್ಟುಹಬ್ಬದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೇಶಾದ್ಯಂತ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಇವೆಲ್ಲದಕ್ಕೂ ಸೇವಾ ಮನೋಭಾವನೆ ಅತಿ ಮುಖ್ಯ ಎಂದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ನಮ್ಮ ದೇಶದಲ್ಲಿ ವೇಷಭೂಷಣ, ಜಾತಿ, ಧರ್ಮ ವಿಭಿನ್ನವಾಗಿರಬಹುದು. ಆದರೆ ನಾವೆಲ್ಲರೂ ಒಂದೆ ತಾಯಿಯ ಮಕ್ಕಳು ಎನ್ನುವ ಸೌಹಾರ್ಧತೆಯಿದೆ. ಇದಕ್ಕೆ ಪ್ರಧಾನಿ ಮೋದಿರವರ ಏಕ್‍ಭಾರತ್ ಶ್ರೇಷ್ಠಭಾರತ್ ಪರಿಕಲ್ಪನೆ ಪ್ರಮುಖ ಕಾರಣ. ಚಿತ್ರದುರ್ಗದಲ್ಲಿ ಬೇರೆ ಬೇರೆ ರಾಜ್ಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಪಶ್ಚಿಮ ಬಂಗಾಳ, ರಾಜಸ್ತಾನ, ಮಹಾರಾಷ್ಟ್ರ, ಆಂಧ್ರ, ಕೇರಳದ ವಿದ್ಯಾರ್ಥಿಗಳು ನೃತ್ಯದ ಮೂಲಕ ಏಕತೆಯನ್ನು ಪ್ರದರ್ಶಿಸುತ್ತಿರುವುದು ನಿಜಕ್ಕೂ ಸಮಂಜನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ನರೇಂದ್ರಹೊನ್ನಾಳ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಖಜಾಂಚಿ ಮಾಧುರಿ ಗಿರೀಶ್, ಉಪಾಧ್ಯಕ್ಷ ಸಂಪತ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಕಿರಣ್, ಯಶವಂತ್, ರಾಘವೇಂದ್ರ ಕಾಲೇಜಿನ ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನುಗ್ಗೆಕಾಯಿಗೆ ಫುಲ್ ಡಿಮ್ಯಾಂಡ್ : ಕೆಜಿಗೆ 500 ರೂಪಾಯಿ

ಚಿಕ್ಕಬಳ್ಳಾಪುರ: ಒಂದೆಡೆ ಚಳಿಗಾಲ.. ಮತ್ತೊಂದೆಡೆ ಸೈಕ್ಲೋನ್ ನಿಂದಾಗಿ ಜಿಟಿಜಿಟಿ ಮಳೆ. ಇದೆಲ್ಲದರಿಂದ ನುಗ್ಗೆಕಾಯಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಚಳಿಗಾಲಕ್ಕೆ ನುಗ್ಗರಕಾಯಿ ತಿನ್ನುವುದರಿಂದ ದೇಹಕ್ಕೆ ಒಂದಷ್ಟು ವಿಟಮಿನ್ ಗಳು ಸಿಗುತ್ತವೆ. ಇದರಿಂದ ಶೀತ, ನೆಗಡಿಯಿಂದ ದೂರ

ಇಂದು ಕೂಡ ಏರಿಕೆಯಾಯ್ತು ಚಿನ್ನದ ಬೆಲೆ : ಎಷ್ಡಿದೆ ಇಂದಿನ ದರ..?

  ಬೆಂಗಳೂರು: ಇಂದು ಕೂಡ ಚಿನ್ನದ ದರ ಏರಿಕೆಯತ್ತಲೇ ಮುಖ ಮಾಡಿದೆ. ಒಂದು ರೂಪಾಯಿಯಷ್ಟು ದರ ಏರಿಕೆಯಾಗಿದೆ. ನಿನ್ನೆಯಷ್ಟೇ 40 ರೂಪಾಯಿ ದರ ಹೆಚ್ಚಳವಾಗಿತ್ತು. ಆದರೆ ಇಂದು ಬೆಳ್ಳಿಯ ಬೆಲೆ ಕುಸಿತವಾಗಿದೆ. 10 ಪೈಸೆಯಷ್ಟು

ಡಿಸೆಂಬರ್ 7ರ ಬಳಿಕ ಯತ್ನಾಳ್, ಸೋಮಶೇಖರ್ ಭವಿಷ್ಯ ನಿರ್ಧಾರ : ಏನಂದ್ರು ವಿಜಯೇಂದ್ರ..?

ಕಲಬುರಗಿ: ರಾಜ್ಯ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧವೇ ಯತ್ನಾಳ್ ಬಣ ಪಣ ತೊಟ್ಟಿ‌ನಿಂತಿದೆ. ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುತ್ತೇವೆ ಎನ್ನುತ್ತಿದ್ದಾರೆ. ಈ ಬೆಳವಣಿಗೆ ಈಗಾಗಲೇ ಹೈಕಮಾಂಡ್

error: Content is protected !!