ಬೆಂಗಳೂರು: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಮೂಲಕ ಗಾಂಧಿ ಹೋರಾಟ ಮಾಡಿದ್ರು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಾಂಧೀಜಿ ಅವರ ಹೋರಾಟ ರೈತ ಚಳವಳಿಯಿಂದ ಆರಂಭವಾಗಿದೆ. ಈಗಲೂ ನಮ್ಮ ರೈತರು ಪ್ರತಿಭಟನೆ ಮಾಡ್ತಾಯಿದ್ದಾರೆ.
ಆದ್ರೆ ಸರ್ಕಾರ ಅವರ ಮಾತನಾಡಿಸುವಂಥ ಗೋಜಿಗೂ ಹೋಗಿಲ್ಲ.ಇಂದು ಗಾಂಧೀಜಿ ಅವರು ಇದ್ದಿದ್ದರೆ ಕಣ್ಣೀರ್ ಹಾಕ್ತಾಯಿದ್ರು, ಗುಜರಾತ್ ನಲ್ಲಿ ಅಂದು ನೆರೆ ಬಂದಾಗ ಗಾಂಧೀಜಿ ಹೋಗಿದ್ರು,ಅವರಿಗೆ ತೆರಿಗೆ ವಿನಾಯಿತಿ ಮಾಡಬೇಕೆಂದು ಬ್ರಿಟಿಷರಿಗೆ ಒತ್ತಾಯಿಸಿದರು ಗಾಂಧೀಜಿ. ಅಂದು ಗಾಂಧೀಜಿ ಅವರಿಗೆ ಸತ್ಯ,ಅಹಿಂಸೆ ಒಂದು ಆಯುಧವಾಗಿತ್ತು. ಆದ್ರೆ ಇಂದು ಬದೇಶದ ಪ್ರಧಾನಿ ಮೋದಿ ಸತ್ಯದ ನಾಡಿನಲ್ಲಿ ಸುಳ್ಳಿನ ರಾಜ್ಯಭಾರ ಮಾಡ್ತಾಯಿದ್ದಾರೆ..
ಅಂದು ಸತ್ಯ ಮುಖ್ಯವಾಗಿತ್ತು ಇಂದು ಮತ ಮುಖ್ಯವಾಗಿದೆ.ಲೋಕ್ ಪಾಲ್ ಮಸೂದೆ ಒಪ್ಪಿಗೆ ನೀಡಿದ್ರು ಸರ್ವಾನುಮತದಿಂದ ಲೋಕ್ ಪಾಲ್ ಕಾಯ್ದೆ ಮಾಡಿದ್ವಿ ಎಂದು ಹೇಳಿದರು.
2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದು,ಬಿಜೆಪಿ ಕಾನೂನು ಒಪ್ಪಿಗೆ ಕೊಟ್ಟಿದ್ದು 2021 ರಲ್ಲಿ ಆದ್ರೆ ಇಲ್ಲಿವರೆಗೂ ಅನುಷ್ಟಾನಕ್ಕೆ ತಂದಿಲ್ಲ. ಸಮಿತಿಯಲ್ಲಿ ಅಣ್ಣಾ ಹಜಾರೆ ಇದ್ರು ಇಂದು ಅವರು ಏನು ಮಾಡ್ತಾಯಿಲ್ಲ ಕೇಜ್ರಿವಾಲ್ ದೆಹಲಿ ಸಿಎಂ ಆಗಿ ಸೈಲೆಂಟ್ ಆಗಿದ್ದಾರೆ. ಗಾಂಧೀಜಿ ಅವರ ಪ್ರಕಾರ ಸತ್ಯ, ಶಾಂತಿ ಮೂಲಕ ಗೆಲ್ಲಲ್ಲು ಸಾಧ್ಯ ಎಂದು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದರು.