Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Lucknow fire: ಇಬ್ಬರು ಬಲಿ.. 18 ಜನರ ಸ್ಥಳಾಂತರ.. ಹೋಟೆಲ್‌ನಲ್ಲಿಯೇ ಸಿಲುಕಿದ 15 ಮಂದಿ..!

Facebook
Twitter
Telegram
WhatsApp

 

 

ಲಕ್ನೋದ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಿವಾಸಿಗಳು ಸಿಲುಕಿಕೊಂಡಿದ್ದಾರೆ. ಹೋಟೆಲ್ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿದೆ. ಸ್ಥಳೀಯ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಗೋಮತಿ ನದಿಯ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಬೆಂಕಿ ನಂದಿಸುವ ಕೆಲಸ ನಡೆಯುತ್ತಿದ್ದು, ಈಗಾಗಲೇ ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. 18 ಜನರನ್ನು ಸ್ಥಳಾಂತರ ಮಾಡಲಾಗಿದೆ. ಹೋಟೆಲ್‌ನಲ್ಲಿಯೇ ಇನ್ನು 15 ಮಂದಿ ಸಿಲುಕಿದ್ದಾರೆ.

ಡಾ.ಶ್ಯಾಮ ಪ್ರಸಾದ್ ಮುಖರ್ಜಿ (ಸಿವಿಲ್) ಆಸ್ಪತ್ರೆಗೆ ಇಲ್ಲಿಯವರೆಗೆ 9 ಜನರನ್ನು ದಾಖಲಿಸಲಾಗಿದೆ. ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಆರ್.ಪಿ.ಸಿಂಗ್ ಮಾತನಾಡಿ, “ಇಲ್ಲಿಯವರೆಗೆ 7 ಜನರನ್ನು ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ.” ಎಂದಿದ್ದಾರೆ.

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ತಲುಪಿದ್ದಾರೆ. ಲಕ್ನೋದ ಲೆವಾನಾ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಮೂರು ಅಂತಸ್ತಿನ ಕಟ್ಟಡದಲ್ಲಿ ಇನ್ನೂ ಐದಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಲಕ್ನೋ ಹೋಟೆಲ್ ನಗರದ ಹೃದಯಭಾಗದಲ್ಲಿದೆ. ಸಿಕಂದರ್ ಬಾಗ್, ಚತ್ತರ್ ಮಂಜಿಲ್ ಅರಮನೆ ಮತ್ತು ನವಾಬ್ ವಾಜಿದ್ ಅಲಿ ಶಾ ಝೂಲಾಜಿಕಲ್ ಗಾರ್ಡನ್ ಇಲ್ಲಿಂದ ಬಹಳ ಹತ್ತಿರದಲ್ಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ :  ವಿದ್ಯಾರ್ಥಿಗಳಿಗೆ ಎಸ್.ರೇವಣಸಿದ್ದಪ್ಪ ಕಿವಿಮಾತು

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಮೇ. 18  : ಚರಿತ್ರೆಗೆ ದಾಖಲೆ ಮುಖ್ಯ. ದಾಖಲೆ ಇಲ್ಲದೆ ಚರಿತ್ರೆ ಬರೆಯುವುದು ಕಷ್ಟ ಎಂದು ಸರ್ಕಾರಿ

ಪವಿತ್ರಾ ಸಾವಿನ ಬಳಿಕ ಚಂದ್ರಕಾಂತ್ ಆತ್ಮಹತ್ಯೆ: ಹೆಂಡತಿ ಬಿಟ್ಟು ರಿಲೇಷನ್ ಶಿಪ್ ನಲ್ಲಿದ್ದರಾ ಚಂದ್ರು..?

ತೆಲುಗಿನಲ್ಲಿ ಖ್ಯಾತಿ ಪಡೆದಿದ್ದ ನಟಿ ಪವಿತ್ರಾ ಜಯರಾಂ ಆಕ್ಸಿಡೆಂಟ್ ನಲ್ಲಿ ತೀರಿಕೊಂಡ ಬಳಿಕ, ಅವರ ಗೆಳೆಯ ಚಂದ್ರಕಾಂತ್ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಚಂದ್ರಕಾಂತ್ ಸಾವಿನ ಬಗ್ಗೆ ಅವರ ಪತ್ನಿ ಮಾತನಾಡಿದ್ದು, ಪವಿತ್ರಾ ಮೇಲೆ ಆರೋಪ

ಪವಿತ್ರಾ ಜಯರಾಂ ನಿಧನ : ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆಯಿಂದ ಸಾವು..!

ಕಿರುತೆರೆ ನಟಿ ಪವಿತ್ರಾ ಜಯರಾಂ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ನಟ ದರ್ಶನ್ ಅವರ ಸಿನಿಮಾಕ್ಕೂ ಒಕೆ ಎಂದಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಹೈದ್ರಾಬಾದ್ ತಲುಪುವ

error: Content is protected !!