ಮಕ್ಕಳನ್ನ ಬೆಳೆಸುವಾಗ ಅವರಿಗೆ ಉತ್ತಮವಾದ ಆಹಾರ ನೀಡೋದು ತುಂಬಾ ಮುಖ್ಯ. ಜೊತೆಗೆ ಮಕ್ಕಳು ಕೊಡೋ ಫುಡ್ ತಿನ್ನೋದೇ ಕಷ್ಟ. ಹೀಗಾಗಿ ಯಾವ್ ಯಾವ ಆಹಾರದಲ್ಲಿ ಪೌಷ್ಟಿಕಾಂಶ ಕೊಡಲು ಸಾಧ್ಯವೋ ಆ ಆಹಾರವನ್ನೆಲ್ಲಾ ಕೊಡೋದು ಉತ್ತಮ. ಅದರಲ್ಲಿ ತಾವರೆ ಹೂವಿನಲ್ಲಿ ಪೌಷ್ಟಿಕಾಂಶವೂ ಸಿಗುತ್ತೆ, ಬುದ್ಧಿಶಕ್ತಿಯೂ ಬೆಳೆಯುತ್ತೆ.
ತಾವರೆ ಬೀಜದಲ್ಲಿ ಅತ್ಯಧಿಕ ವಿಟಮಿನ್ ಗಳು ಇದೆ. ಹೀಗಾಗಿ ನಾರಿನಂಶ ಕೂಡ ಅತ್ಯಧಿಕವಾಗಿ ಸಿಗುತ್ತೆ.
ವಿಟಮಿನ್ ಸಿ ಅಂಶವಿದ್ದು, ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.
ಇದರಲ್ಲಿ ನೈಸರ್ಗಿಕವಾಗಿಯೇ ಮ್ಯಾಶ್ಚರೈಸೇಷನ್ ಉತ್ಪತ್ತಿಯಾಗುತ್ತದೆ. ಹೀಗಾಗಿ ಚರ್ಮದ ಕಾಂತಿಗೆ ಉತ್ತಮವಾದ ಔಷಧ.
ತಾವರೆ ಹೂವಿನ ಕಾಯಿಯನ್ನ ಸೇವನೆ ಮಾಡುವುದರಿಂದ ಆಮಶಂಕೆ ನಿವಾರಣೆಯಾಗುತ್ತೆ, ಜೀರ್ಣಶಕ್ತಿ ಹೆಚ್ಚುತ್ತೆ. ಹೃದಯದ ತೊಂದರೆ ಇರುವವರು ಇದನ್ನ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ.
ತಾವರೆ ಎಲೆಯಿಂದ ಮಾಡಿದ ಟೀ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಅಧಿಕ ತೂಕವನ್ನು ಕಡಿಮೆಗೊಳಿಸಿಕೊಳ್ಳಬಹುದು.