Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಭಿಮಾನಿಗಳಿಗೆ ಪತ್ರ ಬರೆದು ಮೂರು ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಿದ ಕಿಚ್ಚ ಸುದೀಪ್..!

Facebook
Twitter
Telegram
WhatsApp

ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಮುಗಿದ ಮೇಲೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಯಾವ ಸಿನಿಮಾದ ಅಪ್ಡೇಟ್ ಅನ್ನು ನೀಡಿರಲಿಲ್ಲ. ಅಭಿಮಾನಿಗಳು ಕಾಯುತ್ತಲೆ ಇದ್ದಾರೆ. ಕ್ರಿಕೆಟ್ ಆಟದ ಫೋಟೋಗಳಿಗೆ ಮುಂದಿನ ಸಿನಿಮಾ ಯಾವಾಗ ಎಂದೇ ಪ್ರಶ್ನಿಸುತ್ತಾ ಇದ್ದರು. ಇದೀಗ ಅದಕ್ಕೆ ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಸಿನಿಮಾದ ಬಗೆಗಿನ ಅಪ್ಡೇಟ್ ತಿಳಿಸಿದ್ದಾರೆ.

ಸುದೀಪ್ ಅವರು ಬರೆದ ಪತ್ರದಲ್ಲಿ ಇಂತಿದೆ: “ನೀವೆಲ್ಲರು ನನ್ನ ಮುಂದಿನ ಸಿನಿಮಾವನ್ನು ಕಿಚ್ಚ 46 ಎಂದು ಕರೆಯುತ್ತಿದ್ದೀರಿ. ಅದರ ಬಗ್ಗೆ ಟ್ವೀಟ್, ಮೀಮ್ಸ್ ಮಾಡಯತ್ತಿದ್ದೀರಿ. ನನಗೆ ಇದೆಲ್ಲ ಸ್ಪೆಷಲ್ ಎನಿಸುತ್ತದೆ. ಅದಕ್ಕೆ ಧನ್ಯವಾದಗಳು. ತುಂಬ ಶ್ರಮವಹಿಸಿ ವಿಕ್ರಾಂತ್ ರೋಣ ಮಾಡಿದ್ದರಿಂದ, ಬಿಗ್ ಬಾಸ್, ಒಟಿಟಿ ಸೀಸನ್ ಹೀಗೆ ಮಾಡಿದ್ದರಿಂದ ವಿಕ್ರಾಂತ್ ರೋಣ ಬಳಿಕ ಒಂದು ಬ್ರೇಕ್ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್. ಒಂದು ಬ್ರೇಕ್ ನ ಅವಶ್ಯಕತೆ ಇತ್ತು.


ಕ್ರಿಕೆಟ್ ನನಗೆ ತುಂಬಾ ರಿಲ್ಯಾಕ್ಸ್ ನೀಡುತ್ತದೆ. ಕೆಸಿಸಿ ನನಗೆ ತುಂಬಾ ಖುಷಿ ಕೊಟ್ಟಿದೆ. ಬ್ರೇಕ್ ಟೈಮ್ ನಲ್ಲಿ ಸ್ಕ್ರಿಪ್ಟ್ ಗಳನ್ನು ನೋಡುತ್ತಿದ್ದೆ. ಮೂರು ಸ್ಕ್ರಿಪ್ಟ್ ಗಳನ್ನು ಫೈನಲ್ ಮಾಡಿದ್ದೇನೆ. ಅಂದರೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇದಕ್ಕೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರು ಸ್ಕ್ರಿಪ್ಟ್ ಗಳಿಗೂ ಹೋಂ ವರ್ಕ್ ನಡೆಯುತ್ತಿದೆ. ಚಿತ್ರತಂಡದವರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾರೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Gold Price Today : 90 ಸಾವಿರದ ಸಮೀಪಕ್ಕೆ ಬೆಳ್ಳಿ : ಬಂಗಾರದ ಬೆಲೆ ಎಷ್ಟು ಗೊತ್ತಾ ?

  ಸುದ್ದಿಒನ್ :  ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತಗಳು ಆಗುತ್ತಿರುತ್ತವೆ.  ಬೆಲೆಗಳು ಒಂದು ದಿನ ಕಡಿಮೆಯಾದರೆ ಮತ್ತೆ ಮರುದಿನ ಏರಿಕೆಯಾಗುತ್ತವೆ. ಈಗ ಮದುವೆ ಸೀಸನ್ ಅಲ್ಲದಿದ್ದರೂ ಬೆಲೆ ಹೆಚ್ಚುತ್ತಲೇ

ಮನೆ ಇಲ್ಲ, ಕಾರು ಇಲ್ಲ.. ಪ್ರಧಾನಿ ಮೋದಿ ಆಸ್ತಿ ಎಷ್ಟು ಕೋಟಿ ಗೊತ್ತಾ?

ಸುದ್ದಿಒನ್ :  ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನಾಮನಿರ್ದೇಶನದ ಸಂದರ್ಭದಲ್ಲಿ, ಮೋದಿ ಅವರು

ಅಂಕಿತಾ ಸಾಧನೆ ಕೊಂಡಾಡಿದ ಸಿಎಂ ಸಿದ್ದರಾಮಯ್ಯ: ಮೆಳ್ಳಿಗೇರಿ ಶಾಲೆಗೆ 50 ಲಕ್ಷ ಅನುದಾನ

ಬಾಗಲಕೋಟೆ: ಇತ್ತಿಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಆ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಏಕೈಕ ವಿದ್ಯಾರ್ಥಿನಿ ಫಸ್ಟ್ ರ್ಯಾಂಕ್ ಬಂದಿರುವುದು. ಬಾಗಲಕೋಟೆಯ ಅಂಕಿತ. ಬಡತನದಲ್ಲಿಯೇ ಬೆಳೆದರು ಇಡೀ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದಿದ್ದಾರೆ. ಅಂಕಿತಾಗೆ

error: Content is protected !!