ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಬಿಜೆಪಿ ವಿರುದ್ಧ ಮಹತ್ವದ ನೀರ್ಣಯ ಕೈಗೊಂಡಿದೆ. ಬಿಟ್ ಕಾಯಿನ್ ಸೇರಿದಂತೆ ವಿವಿಧ ಹಗರಣಗಳಿಗೆ ವಿಶೇಷ ತನಿಖಾ ತಂಡ ನೇಮಿಸಿದರೆ, ಭಾರೀ ಸದ್ದು ಮಾಡಿದ್ದ 40 ಪರ್ಸೆಂಟ್ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಈಗಾಗಲೇ ತನಿಖೆಗೆ ವಹಿಸಿರುವ ಕಾಂಗ್ರೆಸ್, ಈ ಬಗ್ಗೆ ಟ್ವೀಟ್ ಮಾಡಿದೆ. 40% ಕಮಿಷನ್ ಹಗರಣದ ದಾಖಲೆ ಕೊಡಿ ಎನ್ನುತ್ತಿದ್ದ @BJP4Karnataka ಭ್ರಷ್ಟರಿಗೆ ಈಗ ತನಿಖಾ ಸಮಿತಿಯೇ ದಾಖಲೆ ನೀಡಲಿದೆ. ಸಾಕ್ಷಿ ಕೇಳುತ್ತಿದ್ದವರಿಗೆ ಸಾಕ್ಷಿ ಕೊಡಲು ತಯಾರಾಗಿದ್ದಾರೆ.
ಬಿಜೆಪಿಗರಿಗೆ ಹೊಸ ಜೈಲು ಕಟ್ಟಬೇಕೋ ಅಥವಾ ಬಿಜೆಪಿ ಕಚೇರಿಗೇ ಕಂಬಿ ಹಾಕಬೇಕೋ, ಚಿಂತಿಸಬೇಕಿದೆ. ದೇಶದಲ್ಲಿ ಆದಾಯ ತೆರಿಗೆಗಿಂತ GST ತೆರಿಗೆಯೇ ಹೆಚ್ಚು ಸಂಗ್ರಹವಾಗುತ್ತಿದೆ. ದಿನನಿತ್ಯದ ಜನಸಾಮಾನ್ಯರ ಸುಲಿಗೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆಸಕ್ತಿ. @BJP4Karnataka ನಾಯಕರು ಈ ತೆರಿಗೆ ಸುಲಿಗೆಯ ಬಗ್ಗೆ ತುಟಿ ಬಿಚ್ಚುದಿರುವುದೇಕೆ? ಎಂದು ಟ್ವೀಟ್ ಮಾಡಿದೆ.