ಹಾವೇರಿ:(ಮೇ.19): ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.88.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿರುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 23,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20,274 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ 9,519 ಬಾಲಕರು ಹಾಗೂ 10,755 ಬಾಲಕಿಯರು ಸೇರಿ ಶೇ.88.1 ರಷ್ಟು ಫಲಿತಾಂಶ ಲಭಿಸಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು 37, ಅನುದಾನ ರಹಿತ 30 ಶಾಲೆಗಳು ಹಾಗೂ ಅನುದಾನಿತ 10 ಶಾಲೆಗಳು ಸೇರಿ 77 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ.
ಬ್ಯಾಡಗಿ ತಾಲೂಕಿನಲ್ಲಿ 888 ಬಾಲಕರು ಹಾಗೂ 1023 ಬಾಲಕಿಯರು ಸೇರಿ 1911 (ಶೇ.87.7)ವಿದ್ಯಾರ್ಥಿಗಳು,
ಹಾನಗಲ್ ತಾಲೂಕಿನಲ್ಲಿ 1436 ಬಾಲಕರು ಹಾಗೂ 1798 ಬಾಲಕಿಯರು ಸೇರಿ 3234(ಶೇ.85.4) ವಿದ್ಯಾರ್ಥಿಗಳು,
ಹಾವೇರಿ ತಾಲೂಕಿನಲ್ಲಿ 1746 ಬಾಲಕರು ಹಾಗೂ 1841 ಬಾಲಕಿಯರು ಸೇರಿ 3587(ಶೇ.90.1) ವಿದ್ಯಾರ್ಥಿಗಳು,
ಹಿರೇಕೆರೂರ ತಾಲೂಕಿನಲ್ಲಿ 1364 ಬಾಲಕರು ಹಾಗೂ 1595 ಬಾಲಕಿಯರು ಸೇರಿ 2959(ಶೇ.88.5) ವಿದ್ಯಾರ್ಥಿಗಳು,
ರಾಣೇಬೆನ್ನೂರ ತಾಲೂಕಿನಲ್ಲಿ 1930 ಬಾಲಕರು ಹಾಗೂ 2053 ಬಾಲಕಿಯರು ಸೇರಿ 3983(ಶೇ.87.6) ವಿದ್ಯಾರ್ಥಿಗಳು,
ಸವಣೂರ ತಾಲೂಕಿನಲ್ಲಿ 943 ಬಾಲಕರು ಹಾಗೂ 1021 ಬಾಲಕಿಯರು ಸೇರಿ 1964(ಶೇ.88.1) ವಿದ್ಯಾರ್ಥಿಗಳು,
ಶಿಗ್ಗಾಂವ ತಾಲೂಕಿನಲ್ಲಿ 1212 ಬಾಲಕರು ಹಾಗೂ 1424 ಬಾಲಕಿಯರು ಸೇರಿ 2636 (89.4) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.