ತಲೆಯಲ್ಲಿ ಹುಟ್ಟು ಇದೆ.. ಏನ್ ಮಾಡಿದ್ರು ಹೋಗ್ತಿಲ್ಲ ಅನ್ನೋದು ಹಲವರ ಟೆನ್ಶನ್. ಡ್ಯಾಂಡ್ರಾಫ್ ಇದ್ರೆ ಮುಖದ ಸೌಂದರ್ಯಕ್ಕೂ ಸಮಸ್ಯೆಯೇ.. ಪಿಂಪಲ್ ಆಗ್ತಾನೆ ಇರುತ್ತೆ. ಹೀಗಾಗಿ ಅದಕ್ಕೊಂದಿಷ್ಟು ಪರಿಹಾರ ಇಲ್ಲಿದೆ..
• ತೆಂಗಿನ ಎಣ್ಣೆಗೆ ತುಳಸಿ, ಕರಿಬೇವು, ಜಜ್ಜಿದ ನೆಲ್ಲಿಕಾಯಿ, ಸ್ಪಲ್ಪ ಬೇವಿನ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಚೆನ್ನಾಗಿ ಅಂಶ ಎಣ್ಣೆಗೆ ಬಿಟ್ಟುಕೊಂಡ ಮೇಲೆ ಸೋಸಿ ಬಳಸಿ. ದಿನ ಬಿಟ್ಟು ದಿನ ketoconazole 2% ಶಾಂಪೂನಲ್ಲಿ ಸ್ನಾನ ಮಾಡುತ್ತಾ , ತಲೆಗೆ ಎಣ್ಣೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ.
• ವಾರಕ್ಕೆ 1 ಸಲ ಕೊಬ್ಬರಿ ಎಣ್ಣೆಗೆ ನಿಂಬೆ ರಸ ಹಾಕಿ ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ.
• 15 ಒಣ ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ಒಂದು ಲೋಟ ಕುದಿಸಿ ಆರಿಸಿದ ನೀರಲ್ಲಿ ನೆನೆಯಲು ಹಾಕಿ. ದಿನ ಬೆಳಗ್ಗೆ ತಿಂಡಿ ತಿನ್ನುವುದಕ್ಕಿಂತ 1 ತಾಸು ಮೊದಲು ಹುಬ್ಬಿದ ಒಣ ದ್ರಾಕ್ಷಿಯನ್ನ ಅದೇ ನೀರಲ್ಲಿ ಚೆನ್ನಾಗಿ ಹಿಸುಕ್ಕಿ ನೀರು ಸಮೇತ ಸೇವಿಸಿ.
• ಮೆಂತ್ಯ ನೆನೆಸಿ ರುಬ್ಬಿ ವಾರಕೊಮ್ಮೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
• ನಿಂಬೆ ಹಣ್ಣನ್ನು ತಲೆಗೆ ಉಜ್ಜಿಕೊಂಡು ಒಂದು ಘಂಟೆಯ ನಂತರ ಸ್ನಾನ ಮಾಡಿ ತಿಂಗಳಿಗೆ ಎರಡು ಬಾರಿ ಬಳಸಿ ಕಡಿಮೆಯಾಗುತ್ತದೆ.
• ಕೊಬ್ಬರಿ ಎಣ್ಣೆಗೆ ಸ್ವಲ್ಪ ತುಳಸಿ ಎಲೆ ಹಾಕಿ ಕುದಿಸಿ ನಂತರ ಎಣ್ಣೆ ಇಳಿಸುವಾಗ ಸ್ವಲ್ಪ ಪಚ್ಚ ಕರ್ಪೂರ ಹಾಕಿ ಪಚ್ ಕರ್ಪೂರ ಹಾಕಿದ ಮೇಲೆ ಜಾಸ್ತಿ ಕುದಿಸಬೇಡಿ.ತಣ್ಣಗಾದ ನಂತರ ಬಾಟಲಿಗೆ ಹಾಕಿ ಇಟ್ಟುಕೊಂಡು ದಿನಾ ಅಥವಾ ಎರಡು ದಿನಕ್ಕೆ ಹಚ್ಚಿ.