ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವರು ಎಂದರೆ ಅದು ತಿರುಪತಿ ತಿಮ್ಮಪ್ಪ. ದೇಶದ ನಾನಾ ಭಾಗಗಳಿಂದ ತಿರುಪತಿ ತಿಮ್ಮಪ್ಪನಿಗೆ ಭಕ್ತರಿದ್ದಾರೆ. ದೇವಸ್ಥಾನಕ್ಕೆ ಕೆಲವರು ಬೆಟ್ಟದ ಮೇಲಕ್ಕೆ ಗಾಡಿಯಲ್ಲಿ ಹೋದರೆ, ಇನ್ನು ಕೆಲ ಭಕ್ತರು ಬೆಟ್ಟ ಹತ್ತಿಕೊಂಡು ಹೋಗುತ್ತಾರೆ. ಆದ್ರೆ ಹೀಗೆ ಬೆಟ್ಟ ಹತ್ತುವಾಗ ಚಿರತೆಯ ಬಗ್ಗೆ ಕೊಂಚ ಗಮನವಿರಲಿ.
ಪಾದಚಾರಿ ಮಾರ್ಗದಲ್ಲಿ ತೆರಳುವಾಗ ಚಿರತೆಯೊಂದು ಬಾಲಕಿಯನ್ನು ಹೊತ್ತುಕೊಂಡು ಹೋಗಿದೆ. ತನ್ಮ ಮನೆಯವರ ಜೊತೆಗೆ ಲಕ್ಷಿತಾ ಎಂಬ ಆರು ವರ್ಷದ ಪುಟ್ಟ ಬಾಲಕಿ ಕೂಡ ಬೆಟ್ಟ ಹತ್ತುತ್ತಿದ್ದಳು. ಆದ್ರೆ ಈ ವೇಳೆಮಾರ್ಗ ಮಧ್ಯದಲ್ಲಿಯೇ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಸತ್ಯ ಗೊತ್ತಾಗಿದೆ. ಚಿರತೆಯೊಂದು ಮಗುವನ್ನು ಹೊತ್ತುಕೊಂಡ ಹೋದ ದೃಶ್ಯ ಸೆರೆಯಾಗಿದೆ. ಸದ್ಯ ಪೊಲೀಸರು ನಾಪತ್ತೆಯಾದ ಕಾಡಲ್ಲೆಲ್ಲಾ ಹುಡುಕಾಟ ನಡೆಸಿದಾಗ, ಮಗುವಿನ ಮೃತದೇಹ ಸಿಕ್ಕಿದೆ. ಚಿರತೆಯ ದಾಳಿಗೆ ಲಕ್ಷಿತಾಳ ಪ್ರಾಣವೇ ಹೋಗಿದೆ. ತಿರುಪತಿಯಲ್ಲಿಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾದಯಾತ್ರೆಯ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದರಿಂದ ಒಳ್ಳೆಯದ್ದಾಗುತ್ತದೆ, ಪುಣ್ಯ ಸಿಗುತ್ತದೆ ಎಂದು ನಂಬಿ, ತಿಮ್ಮಪ್ಪನ ಮೇಲೆ ಭಾರ ಹಾಕಿ ಹೊರಟ ಭಕ್ತರಿಗೆ, ಯಾವತ್ತಿಗೂ ಅರಗಿಸಿಕೊಳ್ಳಲಾಗದ ನೋವು ಸಿಕ್ಕಿದೆ.