Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ “75ನೇ ಸ್ವಾತಂತ್ರ್ಯ ದಿನಾಚರಣೆ

Facebook
Twitter
Telegram
WhatsApp

ಚಿತ್ರದುರ್ಗ, (ಆ.15) : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ  ಆಚರಿಸಲಾಯಿತು.”

ಸ್ವ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ.ಬಿ.ವಿಜಯ ಕುಮಾರ್ ಅವರು ದೇಶದ ಬಗ್ಗೆ ಒಲವು ಅಭಿಮಾನ ಕೇವಲ ಈ ದಿನಕ್ಕಷ್ಟೇ  ಸೀಮಿತವಾಗದೆ, ಪ್ರತಿ ದಿನ ಪ್ರತಿ ಕ್ಷಣ ನಮ್ಮಲ್ಲಿರಬೇಕು ಎಂದರು. ಅಲ್ಲದೆ ದೇಶಕ್ಕಾಗಿ  ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಭಕ್ತರನ್ನು ಸ್ಮರಿಸಿದರು.

ಇಂದು ದೇಶದೆಲ್ಲೆಡೆ   ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಎಲ್ಲೆಡೆ ಸಡಗರ ಸಂಭ್ರಮದಿಂದ  ಆಚರಿಸುತ್ತಿದ್ದೇವೆ. ಅಲ್ಲದೇ ‘ಹರ್ ಘರ್ ತಿರಂಗ’ ಕಾರ್ಯಕ್ರಮದಡಿ ಮನೆ ಮನೆಗಳಲ್ಲೂ ಕೂಡ ತ್ರ್ರಿವರ್ಣಧ್ವಜ ಹಾರಿಸುವುದರ ಮೂಲಕ  ಕೇವಲ ಕಚೇರಿ, ಶಾಲಾ ಕಾಲೇಜುಗಳಿಗೆ,  ಸಂಘ ಸಂಸ್ಥೆಗಳಿಗೆ ಸೀಮಿತವಾಗಿದ್ದ ಸ್ವ್ವಾತಂತ್ರ್ಯ ದಿನಾಚರಣೆ ಮನೆ ಮನೆಗಳಿಗೂ ವ್ಯಾಪಿಸಿದ್ದು ಶ್ಲಾಘನಾರ್ಹ ವಿಚಾರವಾಗಿದೆ ಎಂದರು.

ಸಂಸ್ಥೆಯ  ಅಕಾಡೆಮಿಕ್ ಅಡ್ಮಿನಿಸ್ಟ್ರೇಟರ್ ಡಾ|| ಸ್ವಾಮಿ ಕೆ.ಎನ್. ಮಾತನಾಡುತ್ತಾ ಭಾರತ, ವಿಶ್ವಗುರು ಎಂದರೆ ತಪ್ಪಾಗಲಾರದು ಕಾರಣ  ವಿಶ್ವಕ್ಕೆ ಯೋಗವನ್ನು  ಕಲಿಸಿದ ದೇಶ ನಮ್ಮದು, ಶಾಲೆಗಳು ಅನ್ನುವ ವಿಚಾರವೇ ಗೊತ್ತಿಲ್ಲದ ಕಾಲದಲ್ಲಿ ಗುರುಕುಲಗಳು ಇದ್ದಂತಹ ದೇಶ ನಮ್ಮದು ವಿಶ್ವದಲ್ಲೇ ಅತ್ಯಂತ ಪುರಾತನವಾದ ಸಾಹಿತ್ಯ  ಋಗ್ವೇದ  ಉದಯಿಸಿದ ದೇಶ ನಮ್ಮದು  ಇಂತಹ ಸಂಪತ್ ಭರಿತವಾದ ದೇಶ ಇದೀಗ  ಸ್ವತಂತ್ರ್ಯ  ಬಂದು 75 ವರ್ಷಗಳನ್ನು ಮುಗಿಸಿದೆ. ಇನ್ನು ಮುಂದೆ ನಮ್ಮ ದೇಶ  ವಿಶ್ವದ  ಪ್ರಗತಿಯ  ಪಥದಲ್ಲಿ ಸಾಗುವಲ್ಲಿ ನಮ್ಮೆಲ್ಲರ  ಪಾತ್ರ ಅಮೂಲ್ಯವಾದುದು ಹಾಗಾಗಿ 75ರ ಆಚರಣೆಯನ್ನು  ಸ್ಮರಣೀಯವಾಗಿಸುತ್ತಾ ಮುಂದೆ   ಬರುವ ಸ್ವಾತಂತ್ರ್ಯ ದಿನಾಚರಣೆಗೆ  ಒಂದಿಲ್ಲೊಂದು  ಕೊಡುಗೆ ನಮ್ಮ ದೇಶದಿಂದ ವಿಶ್ವಕ್ಕೆ  ತಲುಪಲಿ ಎಂದು ಆಶಿಸುತ್ತೇನೆ ಎಂದರು.

ಸಂಸ್ಥೆಯ ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ  ಮಾತಾನಾಡುತ್ತಾ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಡಗರ ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂತೋಷಕ್ಕೆ ಹಲವು ಮಹಾ ನಾಯಕರ  ತ್ಯಾಗ ಬಲಿದಾನ  ಕಾರಣವಾಗಿದೆ. ಭಗತ್ ಸಿಂಗ್‍ರ ಇನ್ಕ್ವಿಲಾಬ್ ಜಿಂದಾ ಬಾದ್ ಘೋಷಣೆ ಯುವಕರಿಗೆ ಪ್ರೇರಣೆ, ದೇಶ ಭಕ್ತಿಯನ್ನು ನಮ್ಮ ರಕ್ತದ ಕಣ ಕಣದಲ್ಲೂ ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಹಗಲಿರುಳು ಶ್ರಮಿಸೋಣ ಎಂದು ಕರೆ ಕೊಟ್ಟರು.

ಸಂಸ್ಥೆಯ    ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ ಡಿ.  ಮಾತನಾಡುತ್ತಾ ಇಂದಿಗೆ ಸ್ವಾತಂತ್ರ್ಯ ಬಂದು 75  ವಸಂತಗಳನ್ನು ಮುಗಿಸಿ  ಮುಂದೆ ದಾಪುಗಾಲು ಇಡುತ್ತಿದ್ದೇವೆ.  ಮುಂದಿನ ದಿನಗಳಲ್ಲಿ  ದೇಶದ  ಪ್ರಗತಿ, ಬೆಳವಣಿಗೆ ಮಕ್ಕಳಾದ ನಿಮ್ಮ ಕೈಯಲ್ಲಿದೆ. ದೇಶಕ್ಕಾಗಿ ಹಲವಾರು ಮಹನೀಯರು  ಪ್ರಾಣ  ತೆತ್ತು  ಸ್ವತಂತ್ರ್ಯವನ್ನು ನಮ್ಮ ದೇಶಕ್ಕೆ ಕೊಟ್ಟಿದ್ದನ್ನು ಸ್ಮರಿಸುತ್ತಾ ದೇಶದ  ಬಾವಿ ಭವಿಷ್ಯಕ್ಕೆ   ನಿಮ್ಮಗಳ ಕೊಡುಗೆ ಅಮೂಲ್ಯವಾದುದು ಎಂದು  ಮಕ್ಕಳನ್ನು ಕುರಿತು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಿಸುತ್ತಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ.ಎಸ್.ಎಂ ಪೃಥ್ವೀಶ್, ಶ್ರೀಮತಿ ಸುನೀತಾ ವಿಜಯ್ ಕುಮಾರ್  ಮಹೇಶ್ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ತಿಪ್ಪೇಸ್ವಾಮಿ, ಸಂಸ್ಥೆಯ ಶಿಕ್ಷಕ / ಶಿಕ್ಷಕೇತರ ವರ್ಗ ಹಾಗೂ ಮಹೇಶ್ ಪಿ.ಯು ಕಾಲೇಜಿನ ಸಿಬ್ಬಂದಿ ವರ್ಗ, ಹಾಗೂ ಶಾಲಾ ಪೋಷಕರು ಕಾರ್ಯಕ್ರದಮಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿ/ನಿಯರಾದ ವಿನುತಾ ಮತ್ತು  ಸನತ್  ನಿರೂಪಿಸಿದರು, ಕಾರ್ತಿಕ್ ಸ್ವಾಗತಿಸಿದರು,  ವಿದ್ಯಾಶ್ರೀ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ : ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಬಾಳಿ ಬದುಕಬೇಕಿದ್ದ, ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ನೇಹಾಳನ್ನು ಕ್ರೂರವಾಗಿ ಕೊಂದಿದ್ದಾನೆ ಫಯಾಜ್. ಆದರೆ ಇನ್ನು ಆ ನೋವು ಯಾರಲ್ಲಿಯೂ ಕಡಿಮೆಯಾಗಿಲ್ಲ, ಆ ಘಟನೆ ಇನ್ನು ಕಣ್ಣಿಗೆ ಕಟ್ಟಿದಂತೆಯೆ ಇದೆ. ಹೀಗಿರುವಾಗ

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷೆ ಆರತಿ ಚಿತ್ರದುರ್ಗ ನಗರಕ್ಕೆ ಭೇಟಿ ಯೋಗ, ಪ್ರಾಣಾಯಾಮ ಕುರಿತು ಮಾಹಿತಿ

ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷರಾದ ಆರತಿ ಮತ್ತು ವಿಭಾಗೀಯ ಮಟ್ಟದ ಪದಾಧಿಕಾರಿ ಜ್ಯೋತಿ ಅವರು ಚಿತ್ರದುರ್ಗ ನಗರಕ್ಕೆ ಮಂಗಳವಾರ ಭೇಟಿ ನೀಡಿದರು. ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯ

ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ : ಸಿಎಂ ಸಿದ್ದರಾಮಯ್ಯ ಅವರಿಗೆ ವಿಜಯೇಂದ್ರ ತಿರಗೇಟು

ರಾಜ್ಯ ಬಿಜೆಪಿ ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ

error: Content is protected !!