ಕೊರೊನಾದಿಂದ ಒಂದು ವರ್ಷದಿಂದ ಚೇತರಿಸಿಕೊಳ್ಳಲಾಗಿತ್ತು. ಕೊರೊನಾ ಹೊರತಾಗಿ ಜೀವನ ಮಾಡುವುದನ್ನು ಎಲ್ಲರು ಕಲಿತಿದ್ದರು. ಆದರೆ ಇದೀಗ ಕೊರೊನಾದ ಭಯದೊಂದಿಗೆ ಮೆದುಳು ತಿನ್ನುವ ಅಮೀಬಾ ಬೇರೆ ಬಂದಿದೆ. ಇದು ಜನರಲ್ಲಿ ಸಹಜವಾಗಿಯೇ ಆತಂಕವನ್ನು ಹುಟ್ಟು ಹಾಕಿದೆ. ಈಗಾಗಲೇ ಈ ರೋಗಕ್ಕೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.
ಇತ್ತಿಚೆಗಷ್ಟೆ ದಕ್ಷಿಣ ಕೊರಿಯಾದಲ್ಲಿ ಈ ರೋಗಕ್ಕೆ ವ್ಯಕ್ತಿ ಬಲಿಯಾಗಿದ್ದ. ನೆಗ್ಲೆರಿಯಾ ಪೌಲೇರಿ ಎಂಬ ಹೆಸರಿನ ಈ ರೋಗಕ್ಕೆ ಎಲ್ಲರೂ ಆತಂಕಗೊಳ್ಳುತ್ತಿದ್ದಾರೆ. ಕಾಯಿಲೆ ಕಂಡು ಬಂದ ಹತ್ತು ದಿನಕ್ಕೆ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ. ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ವ್ಯಕ್ತಿಯಲ್ಲಿ ಈ ಸೋಂಕು ಕಂಡು ಬಂದಿತ್ತು. ಅಂದೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಹಲವು ರೋಗ ಲಕ್ಷಣಗಳು ಕಂಡು ಬಂದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಗುಣಮುಖರಾಗದೆ ಸಾವನ್ನಪ್ಪಿದರು.
ಈ ನೆಗ್ಲೆರಿಯಾ ಪೌಲೆರಿ ಎಂಬುದು ಒಂದು ಅಮಿಬಾ ರೀತಿಯ ಜೀವಿಯಾಗಿದೆ. ಈ ಜೀವಿಗಳು ಸಾಮಾನ್ಯವಾಗಿ ಕೊಳಗಳು, ನದಿಗಳು ಮತ್ತಿ ಕೆರೆಗಳಂತ ಸ್ಥಳದಲ್ಲಿ ವಾಸವಾಗಿರುತ್ತವೆ. ಈ ಜೀವಿಗಳು ಮನುಷ್ಯನ ಮೂಗಿಗೆ ಸೇರಿಕೊಂಡರೆ, ಅಲ್ಲಿಂದ ನಿಧಾನವಾಗಿ ಮೆದುಳಿನ ಭಾಗಕ್ಕೆ ಹೋಗುತ್ತವೆ. ಮೆದುಳನ್ನು ನಿಧಾನವಾಗಿ ತಿನ್ನುತ್ತಾ ಬರುತ್ತದೆ. ಇದರಿಂದ ಮೆದುಳು ಸಂಪೂರ್ಣವಾಗಿ ಹಾಳಾಗುತ್ತದೆ.
ಈ ಕಾಯಿಲೆ ಬಂದವರಿಗೆ ಗಂಟಲು ನೋವು, ವಾಂತಿ, ತಲೆನೋವು, ಮಂದಗೊಂಡ ಮಾತು ಹೀಗೆ ಅನೇಕ ಲಕ್ಷಣಗಳು ಕಾಣಿಸುತ್ತವೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗಿ ಐದು ದಿನದಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ.