Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಸ್ಪಂದನಾ ಅಸ್ಥಿ ವಿಸರ್ಜನೆ : ಶ್ರೀರಂಗಪಟ್ಟಣದಲ್ಲಿಯೇ ಅಸ್ತಿ ವಿಸರ್ಜನೆ ಮಾಡಲು ಕಾರಣವೇನು ಗೊತ್ತಾ..?

---Advertisement---

 

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ‌ ನಿಧನರಾಗಿ ಇಂದಿಗೆ 5 ದಿನ. ಹೀಗಾಗಿ ಕುಟುಂಬಸ್ಥರು ಮುಂದಿನ ಕಾರ್ಯವಿಧಾನಗಳನ್ನು ಮಾಡಲು ಮುಂದಾಗಿದ್ದಾರೆ. ಐದು ದಿನಕ್ಕೆ ಅಸ್ಥಿ ಬಿಡುವ ಕಾರ್ಯ ಮಾಡುತ್ತಿದ್ದಾರೆ.

ಕುಟುಂಬಸ್ಥರು ಮೊದಲಿಗೆ ಹರಿಶ್ಚಂದ್ರ ಘಾಟ್ ಬಳಿ ತೆರಳಿ, ಅಲ್ಲಿ ಪೂಕೆ ಸಲ್ಲಿಸಲಿದ್ದಾರೆ. ನಂತರ ಅಸ್ಥಿ ತೆಗೆದುಕೊಂಡು ಶ್ರೀರಂಗಪಟ್ಟಣಕ್ಕೆ ಹೊರಡಲಿದ್ದಾರೆ. ಶ್ರೀರಂಗಪಟ್ಟಣದ ನದಿಯಲ್ಲಿ ಪೂಜೆ ಸಲ್ಲಿಸಿ, ಅಸ್ಥಿಯನ್ನು ಬಿಡಲಿದ್ದಾರೆ.

ಅಸ್ಥಿ ಬಿಡುವುದಕ್ಕೆ ಎಲ್ಲರೂ ಶ್ರೀರಂಗಪಟ್ಟಣವನ್ನೇ ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿನ ಕಾವೇರಿ ನದಿಗೆ ಅಸ್ಥಿ ಬಿಟ್ಟರೆ, ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಹೆಚ್ಚಾಗಿನೇ ಇದೆ. ಹೀಗಾಗಿ ಮೃಯಪಟ್ಟವರ ಅಸ್ಥಿ ಬಿಡಲು ಶ್ರೀರಂಗಪಟ್ಟಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಆತ್ಮೀಯವಾಗಿದ್ದರು. ಗಂಡ ಹೆಂಡತಿ ಎನ್ನುವುದಕ್ಕಿಂತ ಸ್ನೇಹಿತರಾಗಿದ್ದರು. ತನ್ನೆಲ್ಲ ಕಷ್ಟಗಳಲ್ಲಿ ಜೊತೆ ನಿಲ್ಲುವ ದೇವತೆ ಎಂದೇ ವಿಜಯ್ ರಾಘವೇಂದ್ರ ಹೇಳ್ತಾ ಇದ್ರು. ಈಗ ಸ್ಪಂದನಾ ಇಲ್ಲದೆ ವಿಜಯ್ ರಾಘವೇಂದ್ರ ಒಂಟಿಯಾಗಿದ್ದಾರೆ. ಶೌರ್ಯ ಇನ್ನು ಚಿಕ್ಕ ಮಗು. ಕುಟುಂಬಸ್ಥರಿಗಂತು ದಿಕ್ಕೆ ತೋಚದಂತೆ ಆಗಿದೆ. ಇಂದು ಅಸ್ಥಿ ಬಿಡುವುದಕ್ಕೆ ಇಡೀ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...