ಇಂದು ಅಂತರಾಷ್ಟ್ರೀಯ ಯೋಗದಿನ : ಜನರಿಗೆ ರಾಜಕಾರಣಿಗಳ ಸಂದೇಶವೇನು..?

suddionenews
1 Min Read

ಮನುಷ್ಯನಿಗೆ ಫಿಟ್ನೆಸ್ ಎಂಬುದು ಬಹಳ ಮುಖ್ಯ. ಆರೋಗ್ಯವಾಗಿರುವುದಕ್ಕೆ ಯಾವುದಾದರೊಂದು ರೀತಿಯ ವ್ಯಾಯಾಮದ ಅಗತ್ಯವಿದೆ. ಅದರಲ್ಲೂ ಯೋಗಾಭ್ಯಾಸ ಮಾಡಿದವರಂತು ಸದಾ ಆರೋಗ್ಯವಂತು ಚೆನ್ನಾಗಿಯೇ ಕಾಪಾಡಿಕೊಳ್ಳಬಹುದು. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಇದರ ಅಂಗವಾಗಿ ರಾಜಕಾರಣಿಗಳು ಯೋಗದ ಮಹತ್ವವನ್ನು ಸಾರಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರತಿ ವರ್ಷ ಕೂಡ ಒಂದು ವಿಶೆಷ ಜಾಗಕ್ಕೆ ಹೋಗಿ ಯೋಗ ಮಾಡಿ, ಯೋಗದ ಮಹತ್ವವನ್ನು ತಿಳಿಸುತ್ತಾರೆ‌. ಈ ಬಾರಿ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ. ಇಡೀ ಜಗತ್ತಿನ ಒಳಿತಿಗಾಗಿ ಇರಿವ ಯೋಗವನ್ನು ಪ್ರಬಲ ವಿಷಯವಾಗಿ ಇಂದು ಜಗತ್ತು ನೋಡುತ್ತಿದೆ. ಭೂತಕಾಲದ ವಿಷಯಗಳನ್ನು ಬಿಟ್ಟು ಪ್ರಚಲಿತದಲ್ಲಿ ನೆಮ್ಮದಿಯಿಂದ, ಆರೋಗ್ಯಯುತವಾಗಿ ಹೇಗೆ ಬದುಕಬೇಕೆಂಬುದನ್ನು ಯೋಗ ನಮಗೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರದ ವತಿಯಿಂದ ಯೋಗೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ. ಇದರಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಕೂಡ ಭಾಗಿಯಾಗಿದ್ದರು. ಈ ವೇಳೆ ಆರೋಗ್ಯ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ. ಬಳ್ಳಾರಿಯಲ್ಲೂ ಯೋಗ ದಿನಾಚರಣೆಯನ್ನು ಆಚರಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ ಯೋಗದ ಮಹತ್ವವನ್ನು ಸಾರಿದರು. ಜೊತೆಗೆ ಕನ್ನಡದ ಕಂಪನ್ನು ಅಲ್ಲಿಯೂ ಸಾರಿದರು.

ಇನ್ನು ದೆಹಲಿಯಲ್ಲಿ ಆಯೋಜನೆ ಮಾಡಿದ್ದ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.ಈ ವೇಳೆ ಇಂದು ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಯೋಗ ದಿನವನ್ನು ಮೋದಿ ಅವರು ಮೈಸೂರಿ‌ನ ಪ್ಯಾಲೇಸ್ ಗ್ರೌಂಡ್ ನಲ್ಲಿ ಆಚರಣೆ ಮಾಡಲಾಗಿತ್ತು. ವಿವಿಧ ಕಾಯಿಲೆಗಳಿಗೆ ಯೋಗ ಮುಕ್ತಿ ನೀಡುತ್ತದೆ. ಯೋಗ ಮಾಡಿ ಆರೋಗ್ಯದಿಂದ ಇರಬಹುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *