ವಿಶೇಷ ಲೇಖನ
ವೀರಣ್ಣ ಬ್ಯಾಗೋಟಿ. ಬೀದರ
ಮೊ : 9845766714
ಸುದ್ದಿಒನ್, ಸೆಪ್ಟೆಂಬರ್. 17 : ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರು ಬ್ರಿಟೀಷರು. ಮೈಸೂರು ಕರ್ನಾಟಕ ಕೃಷ್ಣರಾಜೇಂದ್ರ
ಒಡೆಯರ್ ಅವರ ಆಡಳಿತ, ಮೇದಾವಿ ವಿಶ್ವೇಶ್ವರಯ್ಯ ಅವರ ಕಾರಣ ಅಲ್ಲಿ ನೀರಾವರಿ, ಶಿಕ್ಷಣ, ಅಭಿವೃದ್ಧಿಗಳ ಹೊಳೆಯೆ ಹರಿಯುತ್ತಿತ್ತು.
ಅದೆ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ)
ರಜಾಕರ ನರರಾಕ್ಷರ ದಬ್ಬಾಳಿಕೆ,ಊರು ಊರುಗಳಲ್ಲಿ ಹಿಂದೂಗಳ ರಕ್ತ ಹೊಳೆಯೆ ಹರಿಯುತ್ತಿತ್ತು. ಬಲಿಯಾದ ಪುರುಷರೆಷ್ಟೋ ಮಾನಭಂಗಕ್ಕೆ ಒಳಗಾದ ಸ್ತ್ರಿಯರೆಷ್ಟೋ,ಅನಾಥರಾದ ಮಕ್ಕಳೆಷ್ಟೋ ಲೆಕ್ಕವಿಲ್ಲದಷ್ಟು. ಕಾಶ್ಮೀರದ ಹಿಂದೂಗಳ ನರಹೋಮ-ರಕ್ತದೋಳಿಗಿಂತ ಕಡಿಮೆಯೇನಲ್ಲ. ಒಂದು ವರ್ಷ 34 ದಿನಗಳ ನಂತರ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯದೊರೆಯಿತು. ಉಕ್ಕಿನ ಮನುಷ್ಯ, ಪುಣ್ಯ ಪುರುಷ, ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಬಾಯ್ ಅವರ ಚಾಣಕ್ಷಣತನ, ಸೇನೆಯ ಹಾಗೂ ಈ ಭಾಗದ ದೇಶಭಕ್ತರ ವೀರಾವೇಶದ ಹೋರಾಟ, ಬಲಿದಾನ. ಪುಕ್ಕಲ ನಿಜಾಮ ಪಾಕಿಸ್ತಾನದತ್ತ ಒಲವು ತೋರಿದ್ದ, ಆದರೆ ಅವನಾಟ ನಡೆಯಲಿಲ್ಲ ಭಾರತದ ಆಡಳಿತಕ್ಕೆ ಶರಣಾದ.
ಕಲ್ಯಾಣ ಕರ್ನಾಟಕದ ಪ್ರದೇಶದ ಪ್ರಜೆಗಳಿಗೆ Article 371 ವಿಶೇಷ ಸೌಲಭ್ಯ ಬೇಕಾಗಿತ್ತು, ಬೇಕಿದ್ದು ಸಿಕ್ಕಾಯ್ತು. ಇದರ ಸದುಪಯೋಗ
ಮಾಡಿಕೊಂಡು ಜೀವನದಲ್ಲಿ ಮುಂದೆ ಬರುವವರೇ ಧನ್ಯರು. ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಬಾಪು ಮುಖ್ಯ ಕಾರಣ ಎಂದು ದೇಶವೆಲ್ಲ ನಂಬಬಹುದು. ಆದರೆ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ
ದೊರಕಲು ಉಕ್ಕಿನ ಮನುಷ್ಯ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯ್ ಅವರೆ ಕಾರಣವೆಂದು ಸದಾ ಈ ಭಾಗದ ಪ್ರಜೆಗಳು ಅವರನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಹೈದಾರಬಾದ್ ಕರ್ನಾಟಕ ಎನ್ನುವ ಹೆಸರು ಕಸದ ಬುಟ್ಟಿಗೆ ಸೇರಿಸಿದರು. ಕಲ್ಯಾಣ ಕರ್ನಾಟಕ ಎಂದು ಹೆಸರಾಯ್ತು. ಆದರೆ ಈ ಭಾಗದ ಇಬ್ಬರು ಮುಖ್ಯ ಮಂತ್ರಿಗಳ, ನಿರಂತರ ಮಂತ್ರಿಗಳಾದವರ ಇಚ್ಚಾಶಕ್ತಿ ಕೊರತೆಯ ಕಾರಣ ಈ ಭಾಗ ಆಗುವಷ್ಟು ವೇಗ
ದಲ್ಲಿ ಅಭಿವೃದ್ಧಿಯಾಗಲಿಲ್ಲ. ದುಡ್ಡಿನ ಹೊಳೆಯೇನೋ ಹರಿಸಿರಬಹುದು. ಆದರೆ ಅದರಿಂದ ಅಭಿವೃದ್ಧಿ ಅಗಬೇಕಾದಷ್ಟು ಆಗುತ್ತಿಲ್ಲ. ಕೆಲವೇ ಮಂತ್ರಿಗಳು ಬೆಳೆದರು, ಹುಟ್ಟಿದ ಮಣ್ಣಿನ
ಋಣ ತೀರಿಸುವ ದರ್ದು ಅವರಲ್ಲಿ ಕಾಣಲಾಗದು. ಆದರೂ ನಮ್ಮದು ಬಸವಾದಿ ಶರಣರ ಕರ್ಮ ಭೂಮಿ ಅವರು ಮಾಡಿದ ಪುಣ್ಯದ ಕಾಯಕವೇ ನಮ್ಮನ್ನು ಕಾಪಾಡುತ್ತಿದೆ. ತಾಳ್ಮೆ-ತಾಳ್ಮೆ ಅದಕ್ಕೂ ಒಂದು ಮಿತಿಯಿದೆ. ಮಿತಿಮೀರಿ ಈ ಭಾಗದ ಪ್ರಜೆಗಳು ಎಚ್ಚರಾಗುವ ಮುನ್ನ ಅಭಿವೃದ್ದಿ ಮುಖ ಈ ಕಡೆ ತೋರಿಸಿ ನೀವೂ ಪುಣ್ಯಗಳಿಸಿ, ದುಡ್ಡು ಮಾಡುವ ಸ್ವಾರ್ಥದಿಂದ ಒಂದಿಷ್ಟು ಹೊರಬನ್ನಿ.
ನಿಜವಾದ ಕಲ್ಯಾಣ ಕರ್ನಾಟಕ ಆಗಿ ನಾಡಿಗೆಲ್ಲ ಮಾದರಿಯಾಗಲಿ ಎನ್ನುವ ಮನದ ಆಶಯ ನಮ್ಮೆಲ್ಲರದು.
ಕಲ್ಯಾಣ ಕರ್ನಾಟಕ ವಿಮೋಚನ ದಿನದ ಶುಭಾಶಯಗಳು
ವೀರಣ್ಣ ಬ್ಯಾಗೋಟಿ. ಬೀದರ
ಮೊ : 9845766714



