Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀಮತಿ ರತ್ನಪ್ರಭಾ ಅವರನ್ನು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಿ : ಮಾದಿಗ ದಂಡೋರ ಯುವ ಘಟಕ ರಾಜ್ಯಾಧ್ಯಕ್ಷ ಮಲ್ಲಲಿ ವೆಂಕಟೇಶ್ ಒತ್ತಾಯ

Facebook
Twitter
Telegram
WhatsApp

ಚಿತ್ರದುರ್ಗ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಸಮರ್ಥ ಆಡಳಿತ ನೀಡಿ, ಪ್ರಸ್ತುತ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ರತ್ನಪ್ರಭಾ ಅವರನ್ನು ಬಿಜೆಪಿ ಪಕ್ಷ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಲು ಮುಂದಾಗಬೇಕು ಎಂದು ಮಾದಿಗ ದಂಡೋರ ಯುವ ಘಟಕದ ರಾಜ್ಯಾಧ್ಯಕ್ಷ ಮಲ್ಲಲಿ ವೆಂಕಟೇಶ್ ಒತ್ತಾಯಿಸಿದ್ದಾರೆ.

ತೆಲಂಗಾಣ, ಆಂಧ್ರ, ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಹೊಂದಿರುವ ರತ್ನಪ್ರಭಾ ಅವರು, ಮಾದಿಗ ಸಮುದಾಯದ ಮಹಿಳೆಯಾಗಿದ್ದು, ಮೂರು ದಶಕಗಳ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಆಡಳಿತ ನಡೆಸಿದ ಖ್ಯಾತಿ ಹೊಂದಿದ್ದಾರೆ.

ರಾಜ್ಯದ ಎಲ್ಲೆಡೆಯೂ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ವಿವಿಧ ರೀತಿ ಕಾರ್ಯ ನಿರ್ವಹಿಸುತ್ತಿರುವ ರತ್ನಾಪ್ರಭಾ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಲು  ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು. ಈ ಮೂಲಕ ಮಾದಿಗ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಮುಂದಾಗಬೇಕು.

ಮಹಿಳೆ, ದಲಿತ, ದಕ್ಷ ಅಧಿಕಾರಿ, ಸಂಘಟನಾ ಶಕ್ತಿ, ಹಿರಿತನ, ಮೂರು ರಾಜ್ಯಗಳಲ್ಲಿ ಬೆಂಬಲಿಗರನ್ನು ಹೊಂದಿರುವ ರತ್ನಪ್ರಭಾ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿಸುವುದರಿಂದ ಪಕ್ಷ ಬಲವರ್ಧನೆಗೆ ಸಹಕಾರ ಆಗಲಿದೆ. ಜೊತೆಗೆ ದಲಿತ, ಮಾದಿಗ, ಮಹಿಳಾ ವರ್ಗಕ್ಕೆ ರಾಜಕೀಯ ಸ್ಥಾನ ನೀಡಿದ ಗೌರವ ಬಿಜೆಪಿಗೆ ಸಲ್ಲಲಿದೆ.  ಈ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿ, ದಲಿತ ಮಹಿಳೆಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮಲ್ಲಲಿ ವೆಂಕಟೇಶ್ ಸೇರಿ ಅನೇಕರು ಮನವಿ ಮಾಡಿದ್ದಾರೆ.

ಮಲ್ಲಲಿ ವೆಂಕಟೇಶ್,
ರಾಜ್ಯಾಧ್ಯಕ್ಷರು,
ಮಾದಿಗ ದಂಡೋರ ಯುವ ಘಟಕ
ಚಿತ್ರದುರ್ಗ, ಮೊ.ನಂ: 9980170876

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!