Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಯೋತ್ಪಾದಕರ ವಿರುದ್ಧ ತಿರಂಗ ಯಾತ್ರೆ ; ಡಿಕೆ ಶಿವಕುಮಾರ್ ಹೇಳಿದ್ದೇನು..?

ಡಿಕೆ ಶಿವಕುಮಾರ್
---Advertisement---

ಬೆಂಗಳೂರು; ಪಾಕಿಸ್ತಾನಿಯರನ್ನು ಹೊಡೆದುರುಳಿಸಲು ನಮ್ಮ ಭಾರತದ ಸೈನಿಕರು ಹೋರಾಟ‌ಮಾಡುತ್ತಿದ್ದಾರೆ. ಉಗ್ರರ ಅಡಗುತಾಣಗಳು ಎಲ್ಲೆಲ್ಲಿ ಇದಾವೆ, ಅಲ್ಲೆಲ್ಲಾ ಅಟ್ಯಾಕ್ ಮಾಡುತ್ತಿದ್ದು, ಎಲ್ಲರನ್ನು ಸದೆ ಬಡಿಯುತ್ತಿದ್ದಾರೆ. ಯುದ್ಧ ಭೀತಿಯಲ್ಲಿ ಪಾಕಿಸ್ತಾನ ಬೆವರಿ ಹೋಗಿದೆ. ನಮ್ಮ ಸೈನಿಕರ ಆಯಸ್ಸು, ಆರೋಗ್ಯ, ಯಶಸ್ಸಿಗಾಗಿ ಇಡೀ ಭಾರತ ದೇಶವೇ ಪ್ರಾರ್ಥನೆ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಕೂಡ ತಿರಂಗ ಯಾತ್ರೆ ಶುರು ಮಾಡಿದೆ. ಭಯೋತ್ಪಾದಕರನ್ನು ಹೊಡೆದುರುಳಿಸಿದ ನಮ್ಮ ಸೈನಿಕರಿಗೆ ಬೆಂಬಲವಾಗಿ ತಿರಂಗ ಯಾತ್ರೆ ನಡೆಸುತ್ತಿದ್ದಾರೆ.

ಈ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ನಾಯಕರು ಸೇರಿದ್ದಾರೆ. ತಿರಂಗ ಯಾತ್ರೆಯ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭಾರತಕ್ಕೆ ಎಲ್ಲಾ ನಡೆಸುವಂಥ ಕೆಪಾಸಿಟಿ ಇದೆ. ಇವತ್ತು ಪಾಕಿಸ್ತಾನಕ್ಕೆ ಏನು ಉತ್ತರ ಕೊಡಬೇಕೋ ಅದನ್ನ ನಮ್ಮವರು ಕೊಡ್ತಾ ಇದಾರೆ. ಹೀಗಾಗಿ ನಮಗೆ ಭಾರತದ ಬಗ್ಗೆ ಅಪಾರವಾದ ಹೆಮ್ಮೆ ಇದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂದಿದ್ದಾರೆ.

ತಿರಂಗ ಯಾತ್ರೆಯಲ್ಲಿ ಉಗ್ರರ ಹುಟ್ಟಡಗಿಸಿದ ನಮ್ಮ ಸೈನಿಕರ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುತ್ತಿರುವ ಭಾರತೀಯ ಸೇನೆಯ ಆತ್ಮಸ್ಥೈರ್ಯ ಹೆಚ್ಚಿಸಲು, ಬಲ ತುಂಬಿಸಲು ಮತ್ತು ಅದರೊಂದಿಗೆ ಸಮಗ್ರತೆಯನ್ನು ಪ್ರದರ್ಶಿಸಲು ತಿರಂಗ ಯಾತ್ರೆಯನ್ನು ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಯುದ್ಧ ಇನ್ನು ಶುರುವಾಗಿಲ್ಲ. ಯುದ್ಧ ಬೇಡ ಅಂತ ನಾವೂ ಬಯಸುತ್ತೇವೆ. ಆದರೆ ಪಾಕಿಸ್ತಾನದ ಸೇನೆ ನಮ್ಮೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಬಿಟ್ಟು ಅಮಾಯಕರನ್ನು ಕೊಲ್ಲಿಸುವುದು ಮಾಡುತ್ತಿದೆಮ ಪಾಕಿಸ್ತಾನದ ಎಲ್ಲಾ ಯೋಚನೆಗಳಿಗೆ ಸರಿಯಾದ ಉತ್ತರ ನೀಡುತ್ತಿರುವ ನಮ್ಮ ಸೇನೆಯನ್ನು ಅಭಿನಂದಿಸುತ್ತ, ಅವರೊಂದಿಗೆ ನಾವಿದ್ದೇವೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment