Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಖಾಸಗಿ ವಿಡಿಯೋ ಲೀಕ್ ಮಾಡುವುದಾಗೊ ಬೆದರಿಕೆ : ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು

---Advertisement---

 

 

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕವೇ ಖ್ಯಾತಿ ಪಡೆದಿದ್ದ ವರುಣ್ ಆರಾಧ್ಯ ಬಳಿಕ ಕಲರ್ಸ್ ಕನ್ನಡದ ಬೃಂದಾವನ ಸೀರಿಯಲ್ ನಲ್ಲಿ ಅವಕಾಶವನ್ನು ಪಡೆದಿದ್ದರು. ಅದಕ್ಕೂ ಮುನ್ನ ಸುಮಾರು ವರ್ಷಗಳಿಂದ ಪ್ರೀತಿ ಮಾಡಿದ್ದಂತ ವರ್ಷಾ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ಒಂದೊಳ್ಳೆ ಫಾಲೋವರ್ಸ್ ಅನ್ನು ಸಂಪಾದನೆ ಮಾಡಿತ್ತು. ಇಬ್ಬರು ಲವ್ ಬ್ರೇಕಪ್ ಅನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಘೋಷಣೆ ಮಾಡಿಕೊಂಡಿದ್ದರು.

 

ಇದೀಗ ಮಾಜಿ ಪ್ರೇಯಸಿ ವರ್ಷಾ ಕಾವೇರಿ, ವರುಣ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವರುಣ್ ಆರಾಧ್ಯ, ನನ್ನ ಜೊತೆ ಪ್ರೀತಿಸಿ, ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಆತ ನನ್ನ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ದಯವಿಟ್ಟು ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.

ವರ್ಷಾ ಕಾವೇರಿ ನೀಡಿದ ದೂರಿನಲ್ಲಿ, ‘ನಾನು ಸಾಮಾಜಿಕ ಜಾಲತಾಣವಾದ Instagram ನಲ್ಲಿ ಜಾಹಿರಾತು ಕೆಲಸವನ್ನು ಮಾಡಿಕೊಂಡಿದ್ದು, 2019ರ ಮಾರ್ಚ್ 31ರಂದು ಸೀರಿಯಲ್ ನಟ, ಯೂಟ್ಯೂಬರ್ ಆದ ವರುಣ್ ಆರಾಧ್ಯ ಪರಿಚಯವಾಗಿತ್ತು. ಮುಂದೆ ಸ್ನೇಹಿತರಾಗಿದ್ದೆವು. ಸ್ನೇಹ ಪ್ರೀತಿಯಾಗಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆವು. 4-5 ತಿಂಗಳ ನಂತರ ನಾನು ಮತ್ತು ವರುಣ್ ಪರಸ್ಪರ ಭೇಟಿಯಾದಾಗ ತಿಳಿದೋ ಅಥವಾ ತಿಳಿಯದೆಯೋ ನನ್ನ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನ ತನ್ನ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ.

2023ರಲ್ಲಿ ವರುಣ್ ಆರಾಧ್ಯ ಫೋನ್ ನೋಡಿದಾಗ ಆತ ಬೇರೆ ಹುಡುಗಿಯ ಜೊತೆಗಿದ್ದ ಖಾಸಗಿ ವಿಡಿಯೋ ಮತ್ತು ಫೋಟೋ ನೋಡಿದೆ. ಅದನ್ನು ಪ್ರಶ್ನೆ ಮಾಡಿದಾಗ ಅಫೇರ್ ವಿಚಾರವನ್ನು ಎಲ್ಲಿಯೂ ಹೇಳಬಾರದು. ಹೇಳಿದರೆ ನಿನ್ನ ವೈಯಕ್ತಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾನೆ. 2023 ಸೆ.10ರಂದು ನನ್ನ ಮೊಬೈಲ್ ಗೆ ವರುಣ್ ಆರಾಧ್ಯ ನನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದ. ಯಾಕೆ ಕಳುಹಿಸಿದೆ ಎಂದು ಕೇಳಿದಾಗ ಈ ರೀತಿ ಇನ್ನು ಹೆಚ್ಚು ಫೋಟೋ, ವಿಡಿಯೋಗಳಿದಾವೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿ, ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ನನ್ನ ದೇಹದ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾನೆ. ಮುಂದೆ ನೀನು ಮದುವೆಯಾದಲ್ಲಿ ಆತನನ್ನು ಸೇರಿ ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಭಯಕ್ಕೆ ಇಲ್ಲಿಯವರೆಗೂ ದೂರು ನೀಡಿರಲಿಲ್ಲ. ತಡವಾಗಿ ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಬರೆದುಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...