ಮನುಷ್ಯನ ದೇಹದ ಆಕಾರದಲ್ಲಿ ಸಣ್ಣಗೆ ಇರುವವರು ದಪ್ಪಗೆ ಇರುವವರು ಸರ್ವೇ ಸಾಮಾನ್ಯ. ಆದ್ರೆ ಸಣ್ಣಗೆ ಇರುವವರಿಗೆ ದಪ್ಪ ಆಗ್ಬೇಕು ಎಂಬ ಆಸೆ, ತೀರಾ ದಪ್ಪಗೆ ಇರುವವರಿಗೆ ಸಣ್ಣಗೆ ಆಗುವ ಬಯಕೆ. ಅದಕ್ಕಾಗಿಯೇ ಸಾಕಷ್ಟು ಕಸರತ್ತ ಮಾಡುತ್ತಿರುತ್ತಾರೆ. ಸಣ್ಣ ಇರುವವರಂತು ಜಿಮ್ ವರ್ಕೌಟ್ ಅಂತ ಮಾಡಿ, ಜಿಮ್ ಟ್ರೇನರ್ ಹೇಳಿದ್ದಷ್ಟನ್ನು ತಿನ್ನುವ ಪ್ರಯತ್ನ ಮಾಡ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ. ತೀರಾ ಸಣ್ಣ ಇರುವವರಿಗೆ ಒಳ್ಳೆ ಫಿಟ್ನೆಸ್ ಬಾಡಿ ಬೇಕು ಅಂದ್ರೆ ಬಾಳೆಹಣ್ಣು ಇದ್ರೆ ಸಾಕು.

ದಿನಕ್ಕೆ ಎರಡು ಬಾಳೆ ಹಣ್ಣನ್ನ ಸೇವಿಸಿ. ಹಾಗಂತ ಯಾವಾಗಂದ್ರೆ ಅವಗಾ ಸೇವಿಸುವುದಲ್ಲ. ಬದಲಿಗೆ ರಾತ್ರಿ ಊಟವಾದ ಮೇಲೆ ಒಂದು ಬಾಳೆ ಹಣ್ಣನ್ನ ತಿನ್ನಿ. ಹಾಗೇ ಆ ಬಾಳೆ ಹಣ್ಣಿನ ಸಿಪ್ಪೆಯನ್ನ ಬಿಸಾಡಬೇಡಿ. ಅದರಿಂದ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಆ ಸಿಪ್ಪೆಯನ್ನ ಮುಖಕ್ಕೆ ತಿಕ್ಕಿಕೊಳ್ಳಿ.

ಬಾಳೆ ಹಣ್ಣು ದೇಹಕ್ಕೆ ತೂಕವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಮಲಬದ್ಧತೆಯಿಂದ ಬಳಲುತ್ತಿರುವವರಿಗೂ ಇದು ರಾಮಬಾಣವಿದ್ದಂತೆ. ಕ್ಯಾಲ್ಸಿಯಂ ನಿಂದ ಬಳಲುತ್ತಿರುವವರು ಕೂಡ ದಿನಕ್ಕೆ ಒಂದು ಬಾಳೆ ಹಣ್ಣು ತಿನ್ನುವುದರಿಂದ ಆ ಸಮಸ್ಯೆಗೂ ಪರಿಹಾರ ಸಿಗಲಿದೆ. ಮೂಲವ್ಯಾದಿ ಇರುವವರು, ಜೀರ್ಣ ಶಕ್ತಿ ಸಮಸ್ಯೆ ಇರುವವರು ಕೂಡ ಬಾಳೆ ಹಣ್ಣನ್ನು ತಿನ್ನುವುದರಿಂದ ಇದರಿಂದ ಲಾಭಗಳು ಸಾಕಷ್ಟಿವೆ.
ರಾತ್ರಿ ಊಟವಾದ ಮೇಲೆ ತಿನ್ನುವುದರಿಂದ ಸಾಕಷ್ಟು ಅನುಕೂಲವಿದೆ. ಬೆಳಗ್ಗೆನೆ ತಿಂದರೆ ನೀವೂ ತಿಂದ ಆಹಾರವನ್ನು ಬೇಗನೇ ಜೀರ್ಣ ಮಾಡಿ ಬಿಡಬಹುದು. ಹೀಗಾಗಿ ರಾತ್ರಿ ಸಮಯದಲ್ಲಿ ತಿಂದಾಗ ಬೆಳಗ್ಗೆ ನಿತ್ಯ ಕರ್ಮಗಳಿಗೂ ಅನುಕೂಲ ಮಾಡಿಕೊಡುತ್ತದೆ.

