ನುಗ್ಗೆಕಾಯಿಯಲ್ಲಿಯೂ ಹಲವು ಪೋಷಕಾಂಶಗಳು ಅಡಗಿವೆ. ಕೆಲವೊಂದಿಷ್ಟು ಮಂದಿಗೆ ನುಗ್ಗೆಕಾಯಿ ಎಂದರೆ ಆಗೋದೆ ಇಲ್ಲ. ತಿನ್ನುವುದಕ್ಕೂ ಕಷ್ಟ. ಆದರೆ ನುಗ್ಗೆಕಾಯಿ ತಿನ್ನೊಂದ್ರಿಂದ ಹಲವು ರೋಗಗಳಿಗೆ ಗುಡ್ ಬೈ ಹೇಳಬಹದು. ಅದರಲ್ಲೂ ಈ ಮೂಳೆಯ ಸಮಸ್ಯೆಗಳಿಂದ ಏನಾದರೂ ಬಳಲುತ್ತಾ ಇದ್ದರೆ ಅಂತವರಿಗೆ ಇದು ರಾಮಬಾಣ ನೋಡಿ. ಅದೇಗೆ ಎಂಬ ಮಾಹಿತಿ ಇಲ್ಲಿದೆ.

* ಸಾಮಾನ್ಯವಾಗಿ ಕ್ಯಾಲ್ಸಿಯಂಗೋಸ್ಕರ ಹಾಲನ್ನ ಕುಡಿತೀವಿ. ಆದರೆ ಹಾಲಿಗಿಂತ 4 ಪಟ್ಟು ಕ್ಯಾಲ್ಸಿಯಂ ಅಂಶ ಈ ನುಗ್ಗೆಕಾಯಿಯಲ್ಲಿದೆ.

* ಬಾಳೆ ಹಣ್ಣಿಗಿಂತ ಮೂರು ಪಟ್ಟು ಪೊಟ್ಯಾಸಿಯಮ್ ಇದೆ. ಅಷ್ಟೇ ಅಲ್ಲ ಮಾಂಸಕ್ಕಿಂತ ಎರಡು ಪಟ್ಟು ಪ್ರೋಟಿನ್ ಕೂಡ ಸಿಗಲಿದೆ. ಹೀಗಾಗಿ ಈ ನುಗ್ಗೆಕಾಯಿಯನ್ನ ಪ್ರತಿದಿನಬಳಜೆ ಮಾಡದೆ ಹೋದರೂವಾರಕ್ಕೆ ಎರಡು ಸಲವಾದರೂ ತಿನ್ನಿ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.
* ಅದರಲ್ಲೂ ಇತ್ತೀಚಿನ ದಿನವಳಲ್ಲಿ ಮೂಳೆ ಸಮಸ್ಯೆ ಇರುವವರು ಸಿಗುವುದೇ ಹೆಚ್ಚು. ಎಷ್ಟೇ ಹಾಲನ್ನ ಕುಡಿದರು ಅದರಲ್ಲಿ ಅಷ್ಟು ಪ್ರಮಾಣ ಕ್ಯಾಲ್ಸಿಯಂ ಸಿಗೋದಿಲ್ಲ. ಹೀಗಾಗಿ ಮೂಳೆಯ ಸಮಸ್ಯೆ ಇರುವವರು, ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಾ ಇರುವವರು ನುಗ್ಗೆಕಾಯಿ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ.
* ಸಾಮಾನ್ಯವಾಗಿ ನುಗ್ಗೆಕಾಯಿಯನ್ನ ಸಾಂಬಾರ್ ಮಾಡಿಕೊಂಡು ತಿನ್ನುವವರೇ ಹೆಚ್ಚು. ಬೇರೆ ಐಟಂ ಮಾಡೋದಕ್ಕಿಂತ ಸಾಂಬಾರ್ ರುಚಿ ಚೆನ್ನಾಗಿಯೇ ಇರಲಿದೆ. ಹೀಗಾಗಿ ಮನೆಯಲ್ಲಿ ನುಗ್ಗೆಕಾಯಿ ಸಾಂಬಾರ್ ಅನ್ನ ಎರಡ್ಮೂರು ದಿನಕ್ಕೊಮ್ಮೆಯಾದರೂ ಮಾಡ್ತಾ ಇರಿ. ಹಲವು ಕಾಯಿಲೆಗಳಿಗೆ ಒಂದೇ ತರಕಾರಿಯಲ್ಲಿ ಪರಿಹಾರ ಸಿಗಲಿದೆ ಅಂದ್ರೆ ಅದನ್ನ ತಿನ್ನೋದು ಉತ್ತಮ ಅಲ್ವಾ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕೆಮಿಕಲ್ ಯುಕ್ತ ಆಗಿರೋ ಕಾರಣ ರಾಶಿ ತಿಂದ್ರು ಸಿಗೋದು ಉಂಡೆಗಾತ್ರದ ಫೋಷ್ಠಿಕಾಂಶ. ಹೀಗಾಗಿ ಎಲ್ಲಾ ತರಕಾರಿಗಳನ್ನು ತಿನ್ನುವುದಕ್ಕೆ ಪ್ರಯತ್ನಿಸಿ.

