Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಈ ವರ್ಷ ಒಳ್ಳೆಯದ್ದಕ್ಕಿಂತ ಕೆಟ್ಟದೇ ಹೆಚ್ಚು : ಭವಿಷ್ಯ ನುಡಿದ ವಿಜಯಪುರ ಬಸವೇಶ್ವರ ಕಾರ್ಣಿಕಾ

---Advertisement---

ವಿಜಯಪುರ: ಕಾರ್ಣಿಕಾ ನುಡಿಯನ್ನು ರಾಜ್ಯದ ಜನತೆ ಹೆಚ್ಚಾಗಿ ನಂಬುತ್ತಾರೆ. ಇದೀಗ ವಿಜಯಪುರದ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಮಳೆ ಬೆಳೆ ಬಗ್ಗೆ ಕಾರ್ಣಿಕಾ ನುಡಿದಿದ್ದಾರೆ‌.

ಜಾತ್ರೆಯಿದ್ದ ಹಿನ್ನೆಲೆ ಪುರಾಣ ಮುಕ್ತಾಯ, ಗ್ರಂಥ ಬಿಡುಗಡೆ ಹಾಗೂ ಕಾರ್ಣಿಕಾ ನುಡಿಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಮುಖ್ಯಗುರು ಶೂನ್ಯ ಶಂಕರಲಿಂಗ ದಿಂಡವಾರ ಶರಣರ ಕ್ರೋಧಿನಾಮ ಸಂವತ್ಸರದ ಕಾಲಮಾನ ಪ್ರಸ್ತುತ ಕಾರ್ಣಿಕಾ ನುಡಿಯನ್ನು ನುಡಿದಿದ್ದಾರೆ.

ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳಿರುತ್ತವೆ. ವಿಶ್ವದಲ್ಲಿ ನಮ್ಮ ದೇಶ ಹೆಸರು ತರುತ್ತದೆ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳವಾಗುತ್ತದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎಂದು ಕಾರ್ಣಿಕ ನುಡಿದರು. ರಾಜ್ಯದಲ್ಲಿ ಮಳೆ ಬೆಳೆ ಈ ಬಾರಿ ಚೆನ್ನಾಗಿ ಆಗುತ್ತದೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆಯಾಗುತ್ತದೆ, ವಾತಾವರಣದಲ್ಲಿ ವ್ಯತ್ಯಾಸವಾಗಿ ಗಾಳಿಯ ರಭಸವು ಹೆಚ್ಚಾಗಿದೆ ಎಂದು ಕೊಡೆಕಲ್‌ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ.

Join WhatsApp

Join Now

Join Telegram

Join Now

Leave a Comment