ಈ ಸಲ ಕಪ್ ನಮ್ದೆ ಆಗ್ಬೇಕು ಅಂದ್ರೆ RCB ಇನ್ನು ಇಷ್ಟು ಮ್ಯಾಚ್ ಗೆಲ್ಲಬೇಕಿದೆ..!

1 Min Read

IPl 16ನೇ ಆವೃತ್ತಿ ಆರಂಭವಾಗಿದೆ. ಕ್ರಿಕೆಟ್ ಪ್ರಿಯರಲ್ಲಿ ಜೋಶ್ ಜಾಸ್ತಿಯಾಗಿದೆ. ಆರ್ಸಿಬಿ ಅಭಿಮಾನಿಗಳದ್ದು ಕೇಳೋದೇ ಬೇಡ. ಫುಲ್ ಜೋಶ್ ನಲ್ಲಿದ್ದಾರೆ. ಈ ಬಾರಿ ಖಂಡಿತ ಕಪ್ ನಮ್ದೆ ಅಂತಿದ್ದಾರೆ. ಹಾಗಾದ್ರೆ ಕಪ್ ನಮ್ದೆ ಆಗ್ಬೇಕು ಅಂದ್ರೆ ಆರ್ಸಿಬಿ ಏನು ಮಾಡಬೇಕು..? ಇನ್ನು ಎಷ್ಟು ಮ್ಯಾಚ್ ಗಳನ್ನು ಗೆಲ್ಲಬೇಕಿದೆ..?

ಈಗಾಗಲೇ 37 ಮ್ಯಾಚ್ ನಡೆದಿವೆ. ಅದರಲ್ಲಿ RCB ಎಂಟು ಮ್ಯಾಚ್ ಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಮ್ಯಾಚ್ ಗೆದ್ದಿದೆ. ಕಪ್ ಪಡೆಯಬೇಕು ಅಂದ್ರೆ ಸುಲಭದ ಮಾತಲ್ಲ. ಇನ್ನು ಆರು ಪಂದ್ಯಗಳನ್ನು ಆಡಲೇಬೇಕಿದೆ. ಫಸ್ಟ್ ಆಫ್ ನಲ್ಲಿ ಸುಲಭ ಗೆಲುವು ಸಾಧಿಸಿರುವ ಆರ್ಸಿಬಿ ಸೆಕೆಂಡ್ ಆಫ್ ನಲ್ಲಿ ಟಫ್ ದಾರಿಗಳನ್ನು ಸಾಗಲೇಬೇಕಿದೆ. ತುಟ್ಟ ತುದಿಯಲ್ಲಿರು ಕಪ್ ಅನ್ನು ಆರ್ಸಿಬಿ ಎತ್ತಿಕೊಂಡು ಬರಲು ಇಡೀ ಟೀಂ ಎಫರ್ಟ್ ತುಂಬಾ ಮುಖ್ಯ ಆಗುತ್ತೆ.

ಆರ್ಸಿಬಿಯಲ್ಲಿ ಸದ್ಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಫಾಪ್ ಡುಪ್ಲೇಸಿ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದರಂತೆ ಕಪ್ ಗೆಲ್ಲಬೇಕು ಅಂದ್ರೆ ಸೆಕೆಂಡ್ ಆಫ್ ನಲ್ಲಿ ಈ ಮೂವರಿಂದ ರನ್ ಗಳ ಭರಾಟೆ ಬರಲೇಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks