ಇದು ಪ್ರಧಾನಿ ನರೇಂದ್ರ ಮೋದಿಯವರ ಪ್ರಯೋಗಾಲಯ…: ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ (ಜುಲೈ 24, 2022) ಅಗ್ನಿಪಥ್ ಯೋಜನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂದು ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಪ್ರಧಾನಿ ಪ್ರಯೋಗಾಲಯ”ದಲ್ಲಿ ಹೊಸ ಪ್ರಯೋಗದಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯವು ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

 

ಪ್ರತಿ ವರ್ಷ 60,000 ಸೈನಿಕರು ನಿವೃತ್ತಿ ಹೊಂದುತ್ತಿದ್ದು, ಈ ಪೈಕಿ 3,000 ಮಂದಿಗೆ ಮಾತ್ರ ಸರಕಾರಿ ನೌಕರಿ ಸಿಗುತ್ತಿದೆ. 4 ವರ್ಷಗಳ ಗುತ್ತಿಗೆ ಪಡೆದು ನಿವೃತ್ತರಾಗುತ್ತಿರುವ ಸಾವಿರಾರು ಅಗ್ನಿವೀರರ ಭವಿಷ್ಯ ಏನಾಗಲಿದೆ? ಪ್ರಧಾನಿಯವರ ಪ್ರಯೋಗಾಲಯದಲ್ಲಿ ಈ ಹೊಸ ಪ್ರಯೋಗದಿಂದ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಹೊಸ `ಅಗ್ನಿಪಥ್~ ನೇಮಕಾತಿ ಯೋಜನೆಯ ಮೂಲಕ ಭಾರತೀಯ ವಾಯುಪಡೆಯಲ್ಲಿ ನೇಮಕಾತಿಗಾಗಿ ಮೊದಲ ಬಾರಿಗೆ ಪರೀಕ್ಷೆಯು ಬಿಗಿ ಪೊಲೀಸ್ ಭದ್ರತೆಯ ನಡುವೆ ಇಂದು ದೇಶಾದ್ಯಂತ ಪ್ರಾರಂಭವಾಗಿದೆ. ದೆಹಲಿ, ಕಾನ್ಪುರ ಮತ್ತು ಪಾಟ್ನಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪರೀಕ್ಷೆಯನ್ನು ಜುಲೈ 24 ರಿಂದ ಜುಲೈ 31 ರವರೆಗೆ ದೇಶಾದ್ಯಂತ ನಡೆಸಲಾಗುತ್ತದೆ. ಅಗ್ನಿಪಥ್ ಯೋಜನೆಯು ದೇಶಭಕ್ತಿ ಮತ್ತು ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. `ಅಗ್ನಿಪಥ್~ ಯೋಜನೆಯಡಿ ನೇಮಕಗೊಂಡ ಎಲ್ಲರನ್ನು `ಅಗ್ನಿವೀರ್ಸ್~ ಎಂದು ಕರೆಯಲಾಗುತ್ತದೆ. `ಅಗ್ನಿವೀರ್ಸ್~ ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಸೇವಾ ಅವಧಿಗೆ ದಾಖಲಾಗುತ್ತಾರೆ. ನಾಲ್ಕು ವರ್ಷಗಳ ನಂತರ, ಕೇವಲ 25 ಪ್ರತಿಶತ ಅಗ್ನಿವೀರ್‌ಗಳನ್ನು ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್‌ನೆಸ್ ಆಧಾರದ ಮೇಲೆ ನಿಯಮಿತ ಕೇಡರ್‌ನಲ್ಲಿ ಉಳಿಸಿಕೊಳ್ಳಲಾಗುತ್ತದೆ ಅಥವಾ ಮರು-ಸೇರ್ಪಡೆಗೊಳಿಸಲಾಗುತ್ತದೆ. ಭಾರತದ ಭದ್ರತೆಯನ್ನು ಬಲಪಡಿಸಲು ಅಗ್ನಿಪಥ್ ಯೋಜನೆಯನ್ನು ತರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *