ಮಕ್ಕಳಲ್ಲಿ ತಾರತಮ್ಯ ತಂದು, ಐಕ್ಯತೆಗೆ ಧಕ್ಕೆ ತರುವ ಪ್ರಯತ್ನವಿದು : ಶಾಸಕ ತನ್ವೀರ್ ಸೇಠ್

suddionenews
1 Min Read

ಬೆಂಗಳೂರು: ಇಂದು ಹೈಕೋರ್ಟ್ ನಿಂದ ಹಿಜಾಬ್ ಗೆ ಸಂಬಂಧಿಸಿದಂತೆ ತೀರ್ಪು ಬಂದಿದ್ದು, ಹಿಜಾಬ್ ಹಾಕುವಂತಿಲ್ಲ ಎಂದು ತೀರ್ಪು ನೀಡಲಾಗಿದೆ.

ಈ ಸಂಬಂಧ ಶಾಸಕ ತನ್ವೀರ್ ಸೇಠ್ ಮಾತನಾಡಿದ್ದು, ನ್ಯಾಯಲಯ ಇವತ್ತು ಏನ್ ತೀರ್ಪು ಕೊಟ್ಟಿದೆ, ಇದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗ್ತೇವೆ. ಧಾರ್ಮಿಕ ಆಚರಣೆ ಅಥವಾ ಧರ್ಮ ರಕ್ಷಣೆ ಅನ್ನೋದು ಸಂವಿಧಾನದಲ್ಲಿ ಮೂಲಭೂತವಾಗಿ ಕೊಟ್ಟಿದೆ. ಆದರೂ ವಿದ್ಯಾರ್ಥಿ ದೆಸೆಯಲ್ಲಿ ಈ ರೀತಿ ತಂದಿರೋದು ತಪ್ಪು. ಎಲ್ಲೊ ಒಂದು ಕಡೆ ಮಕ್ಕಳಲ್ಲಿ ತಾರತಮ್ಯ ತಂದು ದೇಶದ ಒಂದು ಐಕ್ಯತೆಗೆ ಧಕ್ಕೆ ತರುವಂತ ಪ್ರಯತ್ನ ನಡೀತಾ ಇದೆ.

ಇದರಲ್ಲಿ ಯಾವುದೇ ರಾಜಕೀಯವನ್ನು ನಾನು ಎಳೆಯಲ್ಲ. ನ್ಯಾಯಲಯದ ತೀರ್ಪು ಏನಿದೆ ನ್ಯಾಯಾಲಯದ ಮತ್ತು ದೇಶದ ಪ್ರಜೆಗಳ ಮಧ್ಯೆ ಇರುವಂಥದ್ದು. ಮೂಲಭೂತವಾಗಿ ಈ ತೀರ್ಪನ್ನ ಸ್ವೀಕರಿಸೋದಕ್ಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗ್ತೇವೆ.

ತ್ರಿಬಲ್ ತಲಾಕ್, ಮತಾಂತರ ಕಾಯ್ದೆ, ಗೋ ಹತ್ಯೆ ನಿಷೇಧ ಈ ಎಲ್ಲಾ ಏನ್ ಆಗ್ತಾ ಇದೆ ಅಂದ್ರೆ ಆ ಒಂದು ಜನಾಂಗವನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ಸುತ್ತೆ. ಹಿಜಾಬ್ ವಿಚಾರ ಸುಪ್ರೀಂ ಹೋಗ್ತೇವೆ ಅಲ್ಲಿ ಏನಾಗುತ್ತೆ ನೋಡೋಣಾ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಎಲ್ಲಿಯೂ ಸಮವಸ್ತ್ರ ಇಲ್ಲ. ಪ್ರತಿ ವರ್ಷ ಹೊರಡಿಸುವ ಮಾರ್ಗಸೂಚಿಯಲ್ಲಿ ಆಡಳಿತ ಮಂಡಳಿ ತೀರ್ಮಾನ ಮಾಡುತ್ತೆ. ಆಗ ಸಮವಸ್ತ್ರ ತಂದರೆ ಆ ತೀರ್ಮಾನ ಮಾಡಿಕೊಳ್ಳಬಹುದು ಎನ್ನುವಾಗ ಸರ್ಕಾರ ಈ ವಿವಾದ ಯಾಕೆ ತಂತು ಅನ್ನೋದು ಪ್ರಶ್ನೆಯಾಗುತ್ತೆ. ಇದಕ್ಕೆಲ್ಲಾ ಸುಪ್ರೀಂ ಕೋರ್ಟ್‌ ನಲ್ಲೇ ಉತ್ತರ ಕಂಡು ಕೊಳ್ಳುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *